ಕಾಯಿಲೆಗಳ ನಿರ್ಮೂಲನೆಗಾಗಿ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಿ: ತಹಸೀಲ್ದಾರ್


Team Udayavani, Feb 27, 2022, 1:28 PM IST

ಕಾಯಿಲೆಗಳ ನಿರ್ಮೂಲನೆಗಾಗಿ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಿ: ತಹಸೀಲ್ದಾರ್

ಕುರುಗೋಡು: ಕಾಯಿಲೆ ಸಂಪೂರ್ಣ ನಿರ್ಮೂಲನೆಗಾಗಿ ಪ್ರತಿಯೊಬ್ಬ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.

ಪಟ್ಟಣದ ಅರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪಾಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆಯೇ ಈ ಕಾಯಿಲೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. ಆದರೂ ಮಗು ತಾಯಿಯ ಗರ್ಭದಲ್ಲಿದ್ದಾಗ ಯಾವುದಾದರೂ ಒಂದು ಹಂತದಲ್ಲಿ ಕಾಯಿಲೆ ಹರಡುವ ಸಂಭಾವ್ಯದ ಹಿನ್ನೆಲೆಯಲ್ಲಿ ಪೋಲಿಯೋ ಲಸಿಕೆ ಕಾರ‍್ಯಕ್ರಮ ಮುಂದುವರಿಸಲಾಗಿದೆ. ಪಲ್ಸ್‌ ಪೋಲಿಯೋ ಕಾರ್ಯಕ್ರಮದಲ್ಲಿ ಪೋಲಿಯೋ ಲಸಿಕೆಗಳನ್ನು ಶೀತಲ ಸರಪಳಿಯಲ್ಲಿ ನಿರ್ವಹಿಸಿ, ಅತ್ಯಂತ ಸುರಕ್ಷಿತವಾಗಿ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದ್ದು, ಪೋಷಕರು ಹಾಗೂ ಸಮುದಾಯವು ಯಾವುದೇ ಆತಂಕಕ್ಕೆ ಒಳಗಾಗದೇ ತಮ್ಮ 5 ವರ್ಷದೊಳಗಿನ ಮಕ್ಕಳನ್ನು ಹತ್ತಿರದ ಲಸಿಕಾ ಕೇಂದ್ರಕ್ಕೆ ತಪ್ಪದೇ ಕರೆದೊಯ್ದು ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.

ವೈದ್ಯಧಿಕಾರಿ ಮಂಜುನಾಥ್ ಜವಳಿ ಮಾತನಾಡಿ, ಪೋಲಿಯೋ ಲಸಿಕೆ ಬಗ್ಗೆ ಈಗಾಗಲೇ ಅರೋಗ್ಯ ಕೇಂದ್ರದ ಸಿಬ್ಬಂದಿಗಳು ಎಲ್ಲ ಕಡೆ ತೆರಳಿ ಜಾಗೃತಿ ಮೂಡಿಸಲಾಗಿದೆ. ಇದರ ಜೊತೆಗೆ ಪಟ್ಟಣದ ಮುಖ್ಯ ವೃತ್ತದಲ್ಲಿ ಹಾಗೂ ಬಾದನಹಟ್ಟಿ ರಸ್ತೆ, ಕಂಪ್ಲಿ ರಸ್ತೆ ಗಳಲ್ಲಿ ಲಸಿಕೆ ಹಾಕಲು ಏರ್ಪಡಿಸಲಾಗಿದೆ. ಲಸಿಕೆಯನ್ನು ಪಡೆದಿದ್ದರೂ ಪುನಃ ಪೋಲಿಯೋ ಲಸಿಕೆಯನ್ನು ಮಕ್ಕಳು ಪಡೆಯಲೇಬೇಕು. ಪೋಷಕರು ತಮ್ಮ ಐದು ವರ್ಷದ ಒಳಗಿನ ಎಲ್ಲ ಮಕ್ಕಳನ್ನು ಲಸಿಕಾ ಕೇಂದ್ರಗಳಿಗೆ ಕರೆದೊಯ್ದು ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಕೊಡಿಸಬೇಕಿದೆ. ಹಾಗಾಗಿ ಈ ರಾಷ್ಟ್ರೀಯ ಕಾರ‍್ಯಕ್ರಮದಲ್ಲಿ ಪೋಷಕರು, ಸಾರ್ವಜನಿಕರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಕೊಡಿಸಿ, ಪೋಲಿಯೋ ರೋಗ ನಿರ್ಮೂಲನಾ ಆಂದೋಲನಕ್ಕೆ ಸಹಕರಿಸಬೇಕು,” ಎಂದು ಮನವಿ ಮಾಡಿದರು.

ಟಾಪ್ ನ್ಯೂಸ್

1-qwewqe

Varanasi; ಇದೇನಾ ‘ಸ್ವಚ್ಛ ಭಾರತ’?: ಫೋಟೋ ಮೂಲಕ ಪ್ರಧಾನಿಗೆ ಟಾಂಗ್ ನೀಡಿದ ಅಖಿಲೇಶ್

Election-Bond

Election Bond:ನಿರ್ಮಲಾ, ನಡ್ಡಾ, ಬಿವೈವಿ, ನಳಿನ್‌ ಸೇರಿ ಹಲವರ ವಿರುದ್ಧದ ಎಫ್‌ಐಆರ್‌ಗೆ ತಡೆ

1-ddd

Heartfelt gesture; ಪಾಕಿಸ್ಥಾನ ಮೂಲದ ಅಭಿಮಾನಿಗೆ ಶೂ ಗಿಫ್ಟ್ ನೀಡಿದ ಭಾರತದ ಖ್ಯಾತ ಗಾಯಕ

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್

DK SHI NEW

Kumaraswamy ರಾಜಕೀಯ ಮಾಡುವುದಕ್ಕಿಂತ 1 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಿ:ಡಿಕೆಶಿ

Kanpur Test: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

Kanpur Test: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

Bantwala1

Bantwala: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary; ಜನಾರ್ದನ ರೆಡ್ಡಿ ಬಳ್ಳಾರಿ ವನವಾಸ ಅಂತ್ಯ

Bellary; ಜನಾರ್ದನ ರೆಡ್ಡಿ ಬಳ್ಳಾರಿ ವನವಾಸ ಅಂತ್ಯ

Bellary: Siddaramaiah, who said corruption is unforgivable, should resign now: Sri Ramulu

Bellary: ಭ್ರಷ್ಟಾಚಾರ ಕ್ಷಮಿಸಲಾಗದು ಎಂದಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ಕೊಡಬೇಕು: ರಾಮುಲು

Bellary; Darshan IT interrogation in jail

Bellary; ಜೈಲಿನಲ್ಲಿಂದು ದರ್ಶನ್‌ ಐಟಿ ವಿಚಾರಣೆ; ಬಳ್ಳಾರಿಗೆ ಬಂದ ಅಧಿಕಾರಿಗಳು

1-darshan

Darshan ಭೇಟಿಗೆ ಮಾಹಿತಿ‌ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು

11-bellary

Bellary: ದರ್ಶನ್ ನನ್ನು ಭೇಟಿಯಾದ ವಕೀಲ ಸುನೀಲ್; ಹಲವು ವಿಚಾರಗಳ ಬಗ್ಗೆ ಚರ್ಚೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

5

Malpe: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

1-qwewqe

Varanasi; ಇದೇನಾ ‘ಸ್ವಚ್ಛ ಭಾರತ’?: ಫೋಟೋ ಮೂಲಕ ಪ್ರಧಾನಿಗೆ ಟಾಂಗ್ ನೀಡಿದ ಅಖಿಲೇಶ್

Election-Bond

Election Bond:ನಿರ್ಮಲಾ, ನಡ್ಡಾ, ಬಿವೈವಿ, ನಳಿನ್‌ ಸೇರಿ ಹಲವರ ವಿರುದ್ಧದ ಎಫ್‌ಐಆರ್‌ಗೆ ತಡೆ

1-ddd

Heartfelt gesture; ಪಾಕಿಸ್ಥಾನ ಮೂಲದ ಅಭಿಮಾನಿಗೆ ಶೂ ಗಿಫ್ಟ್ ನೀಡಿದ ಭಾರತದ ಖ್ಯಾತ ಗಾಯಕ

Brahmavar

Mangaluru: ಅಪರಿಚಿತ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.