ಬ್ರಹ್ಮಾವರ: “ವಿ ದ ಪೀಪಲ್ ಆಫ್ ಇಂಡಿಯ” ನಾಟಕ ಪ್ರದರ್ಶನ
Team Udayavani, Feb 27, 2022, 2:33 PM IST
ಬ್ರಹ್ಮಾವರ: “ಮಂದಾರ”(ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಹಾಗೂ ದಿಮ್ಸಾಲ್ ನಾಟಕ ಶಾಲೆ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಫೆ.26ರಂದು ಆಯೋಜನೆಗೊಂಡ ರಂಗಾಯಣ ಶಿವಮೊಗ್ಗ ಇವರ “ವಿ ದ ಪೀಪಲ್ ಆಫ್ ಇಂಡಿಯ” ನಾಟಕವು ಎಸ್.ಎಮ್.ಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಪ್ರದರ್ಶನಗೊಂಡಿತು.
ಬ್ರಹ್ಮಾವರ ತಾಲೂಕಿನ ತಹಶೀಲ್ದಾರರಾದ ರಾಜಶೇಖರ್ ಮೂರ್ತಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು “ಎರಡುವರೆ ಸಾವಿರ ವರ್ಷಗಳಿಂದ ನಾವು ಜಾತಿಗಳಾಗಿ, ಧರ್ಮಗಳಾಗಿ, ಭಾಷಾ ವ್ಯಕ್ತಿಗಳಾಗಿ, ಪ್ರಾದೇಶಿಕ ವ್ಯಕ್ತಿಗಳಾಗಿ ಬದುಕಿದ್ದೀವಿ ಇದೆಲ್ಲವನ್ನೂ ಮೀರಿ ‘ವಿ ದಿ ಪೀಪಲ್ ಆಪ್ ಇಂಡಿಯಾ’ ನಾವೆಲ್ಲರೂ ಭಾರತೀಯರು ಎಂಬ ತತ್ವದಡಿಯಲ್ಲಿ ಬದುಕುದನ್ನು ಕಲಿಯಬೇಕಿದೆ. ಹಾಗೆ ಬದುಕಲು ಕಲಿತ ದಿನ ಭಾರತ ಜಗತ್ತಿನಲ್ಲಿ ಸರ್ವಶ್ರೇಷ್ಟ ದೇಶವಾಗಿ ಹೊರಹೊಮ್ಮಲಿದೆ’ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಎಮ್.ಎಸ್ ಕಾಲೇಜಿನ ಪ್ರಾಂಶುಪಾಲರಾದ ಐವನ್ ಡೊನಾತ್ ಸುವಾರಿಸ್ ಅವರು ನಾಟಕ ಪ್ರದರ್ಶನಕ್ಕೆ ಶುಭ ಹಾರೈಸಿದರು.
ದಿಮ್ಸಾಲ್ ನಾಟಕ ಶಾಲೆಯ ಮುಖ್ಯಸ್ಥರಾದ ಅಭಿಲಾಷಾ ಹಂದೆ ಅವರು ಪ್ರಾಸ್ಥಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಮಂದಾರ ತಂಡದ ಸದಸ್ಯರಿಂದ ರಂಗಗೀತೆಗಳನ್ನ ಹಾಡಲಾಯಿತು.ಬಳಿಕ ರಂಗಾಯಣ ಶಿವಮೊಗ್ಗ ಇವರಿಂದ “ವಿ ದ ಪೀಪಲ್ ಆಫ್ ಇಂಡಿಯ” ನಾಟಕ ಪ್ರದರ್ಶನಗೊಂಡಿತು.ಮಂದಾರದ ನಿರ್ದೇಶಕ ರೋಹಿತ್ ಎಸ್ ಬೈಕಾಡಿ ಕಾರ್ಯಕ್ರಮ ನಿರೂಪಿಸಿ,ಸಚಿನ್ ಅಂಕೋಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.