ಹೆಚ್ಚು ಅನುದಾನ ತರದಿದ್ರೆ ಚುನಾವಣೆಗೆ ನಿಲ್ಲೊಲ್ಲ: ತೇಲ್ಕೂರ


Team Udayavani, Feb 27, 2022, 5:42 PM IST

24election

ಕಲಬುರಗಿ: ಸೇಡಂ ಕ್ಷೇತ್ರದಲ್ಲಿ ಡಾ| ಶರಣಪ್ರಕಾಶ ಪಾಟೀಲ 15 ವರ್ಷ ಶಾಸಕರಾಗಿ ಕ್ಷೇತ್ರಕ್ಕೆ ತಂದ ಅನುದಾನಕ್ಕಿಂತ ಹೆಚ್ಚಿನ ಅನುದಾನವನ್ನು ಪ್ರಸ್ತುತ ಐದೇ ವರ್ಷದಲ್ಲಿ ತರದಿದ್ದರೆ ಚುನಾವಣೆಗೆ ನಿಲ್ಲೋದಿಲ್ಲ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸವಾಲು ಹಾಕಿದರು.

ಶನಿವಾರ ಸೇಡಂ ಪಟ್ಟಣದಲ್ಲಿ 50 ಕೋಟಿ ರೂ. ವೆಚ್ಚದ ವಸತಿ ಇಲಾಖೆಯ 750 ಮನೆಗಳ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ನೆರವೇರಿಸಿದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ತಾವು ತಂದಿರುವ ಅನುದಾನ ಕುರಿತು ಪ್ರತಿಯೊಂದು ಪೈಸೆಯ ಲೆಕ್ಕ ಕೊಡುವೆ. ಈ ಕುರಿತು ಬಹಿರಂಗ ಚರ್ಚೆಗೂ ಸಿದ್ಧ ಎಂದು ಘೋಷಿಸಿದರು.

ಕ್ಷೇತ್ರದಲ್ಲಿ ಈಗ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ತಮ್ಮ ಅವ ಧಿಯಲ್ಲಿ ತಂದಿರುವ ಅನುದಾನದಿಂದ ಎಂಬ ಮಾಜಿ ಸಚಿವ ಡಾ| ಶರಣ ಪ್ರಕಾಶ ಪಾಟೀಲ ಅವರ ಹೇಳಿಕೆಗೆ ತಿರುಗೇಟು ನೀಡಿದ ಶಾಸಕರು, ತಮ್ಮ 15 ವರ್ಷದ ಅವ ಧಿಯಲ್ಲಿ ಕ್ಷೇತ್ರದಲ್ಲಿ ಒಂದೇ ಒಂದು ದೇವಾಲಯ ಅಭಿವೃದ್ಧಿಪಡಿಸಿಲ್ಲ. ಆದರೆ ತಾವು ನಾಲ್ಕು ವರ್ಷದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ 100 ದೇವಾಲಯಗಳನ್ನು ಅಭಿವೃದ್ಧಿ ಮಾಡಿದ್ದೇವೆ. ಮುಂದಿನ ವರ್ಷ ಇನ್ನೂ ಆರು ಕೋಟಿ ರೂ. ಅನುದಾನ ತಂದು ಇನ್ನಷ್ಟು ದೇವಾಲಯ ಅಭಿವೃದ್ಧಿ ಮಾಡಲಾಗುವುದು ಎಂದು ಪ್ರಕಟಿಸಿದರು.

ತಾವು ಶಾಸಕರಾಗಿದ್ದಾಗ ರೈತರಿಗೆ ಎಷ್ಟು ಬಡ್ಡಿ ರಹಿತ ಸಾಲ ಕೊಟ್ಟಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಡಾ| ಶರಣಪ್ರಕಾಶ ಅವರಿಗೆ ತಿರುಗೇಟು ನೀಡಿದ ತೇಲ್ಕೂರ, ಪ್ರಸಕ್ತ ಸೇಡಂ ಕ್ಷೇತ್ರದಲ್ಲಿ 23 ಸಾವಿರ ರೈತರಿಗೆ 150 ಕೋಟಿ ರೂ.ಗಳನ್ನು ಡಿಸಿಸಿ ಬ್ಯಾಂಕ್‌ ದಿಂದ ಬಡ್ಡಿ ರಹಿತ ಸಾಲ ಹಂಚಲಾಗಿದೆ. ಮುಂದಿನ ವರ್ಷ 10 ಸಾವಿರ ತಾಯಂದಿರಿಗೆ ಹಸುವೊಂದನ್ನು ನೀಡಿ ಆರ್ಥಿಕಾಭಿವೃದ್ಧಿಗೆ ಕೈ ಜೋಡಿಸಲಾಗುವುದು. ಮುಂದಿನ ದಿನಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಯುವಕರಿಗೆ ಸಾಲ ನೀಡಲಾಗುವುದು ಎಂದರು.

ಏತ ನೀರಾವರಿ ಯೋಜನೆ: ಮುಂದಿನ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಯಿಸಿ ಕ್ಷೇತ್ರದಲ್ಲಿ 639 ಕೋಟಿ ರೂ. ವೆಚ್ಚದ ಕಾಗಿಣಾ ಏತ ನೀರಾವರಿ ಯೋಜನೆಗೆ ಅಡಿಗಲ್ಲು ನೆರವೇರಿಸಿ 75 ಸಾವಿರ ಹೆಕ್ಟೇರ್‌ ನೀರಾವರಿಯಾಗುವ ಹಸಿರು ಕ್ರಾಂತಿಗೆ ನಾಂದಿ ಹಾಡಲಾಗುವುದು. ಅಲ್ಲದೇ ತಾವು ಧರ್ಮಗಳ ನಡುವೆ ಜಾತಿ ಕಿಡಿ ಹಚ್ಚಿರುವುದನ್ನು ಜನ ಇನ್ನೂ ಮರೆತಿಲ್ಲ ಎಂದು ಆರೋಪಿಸಿದರು.

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.