“8 ಕಿ.ಮೀ. ನಡೆದೇ ಬಂದೆವು…’; ತಾಯ್ನಾಡು ತಲುಪಿದ ವಿದ್ಯಾರ್ಥಿಗಳ ಮಾತು
- ಈವರೆಗೆ ಭಾರತ ತಲುಪಿವೆ 4 ವಿಮಾನಗಳು
Team Udayavani, Feb 28, 2022, 7:35 AM IST
ನವದೆಹಲಿ: “ರೊಮ್ಯಾನಿಯಾ ಗಡಿಯನ್ನು ತಲುಪಲು 8 ಕಿ.ಮೀ. ನಡೆದುಕೊಂಡೇ ಬಂದೆವು. ಒಂದು ಬಾರಿ ಭಾರತದ ನೆಲಕ್ಕೆ ಕಾಲಿಟ್ಟರೆ ಸಾಕು ಎಂದು ಭಾವಿಸಿದ್ದೆವು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ನಿರಾಳ ಭಾವ ಮೂಡಿತು…’
ಯುದ್ಧಪೀಡಿತ ದೇಶದಿಂದ ವಾಪಸಾದ ಭಾರತೀಯ ವಿದ್ಯಾರ್ಥಿಗಳು ಆಡಿರುವ ಮಾತುಗಳಿವು. ಉಕ್ರೇನ್‌ನಲ್ಲಿ ಜೀವಭಯದಿಂದ ಬಂಕರ್‌ಗಳಲ್ಲಿ ದಿನದೂಡುತ್ತಿದ್ದ ಹಲವು ಭಾರತೀಯರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ. ತಾಯ್ನಾಡಿಗೆ ಮರಳಿದ ಸಮಾಧಾನವಿದ್ದರೂ, ಭವಿಷ್ಯದ ಬಗೆಗಿನ ಚಿಂತೆ ಅನೇಕರನ್ನು ಕಾಡುತ್ತಿದೆ. ಉಕ್ರೇನ್‌ನಲ್ಲಿ ಪರಿಸ್ಥಿತಿ ತಿಳಿಗೊಂಡರೆ ಸಾಕು, ನಮಗೆ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಬಹುದು ಎಂದು ಹಲವು ಹೇಳಿಕೊಂಡಿದ್ದಾರೆ.
ಇನ್ನು ಕೆಲವರು, ಉಕ್ರೇನ್‌ನಲ್ಲಿ ಇನ್ನೂ ಹಲವು ವಿದ್ಯಾರ್ಥಿಗಳು ಉಳಿದಿದ್ದು, ಅವರನ್ನು ಬೇಗನೆ ಕರೆತನ್ನಿ ಎಂದು ಕೋರಿಕೊಂಡಿದ್ದೂ ಕಂಡುಬಂತು.
ಉಕ್ರೇನ್‌ನಲ್ಲಿ ಅನೇಕರು ಜೀವ ಉಳಿಸಿಕೊಳ್ಳುವುದಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಹೆದ್ದಾರಿಗಳಲ್ಲಿ ಮುಂದೆ ಸಾಗಲು ಸಾಧ್ಯವಾಗದಷ್ಟು ಟ್ರಾಫಿಕ್ ಜಾಮ್ ಇದೆ. ನಾನು ಮತ್ತು ನನ್ನ ಗೆಳೆಯರು ಉಕ್ರೇನ್-ರೊಮ್ಯಾನಿಯಾ ಗಡಿಯಲ್ಲಿ ಬರೋಬ್ಬರಿ 12 ಗಂಟೆಗಳ ಕಾಲ ಕಾಯಬೇಕಾಯಿತು. ಹಲವಾರು ಪ್ರಕ್ರಿಯೆಗಳನ್ನು ಪೂರೈಸಬೇಕಿದ್ದರಿಂದ ತಡವಾಯಿತು ಎಂದು ಕೇರಳದ ವಿಪಿನ್ ಹೇಳಿದ್ದಾರೆ.
ಶನಿವಾರದಿಂದ ಭಾರತ ಸರ್ಕಾರವು ತನ್ನ ನಾಗರಿಕರ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ್ದು, 219 ಭಾರತೀಯರನ್ನು ಹೊತ್ತ ಮೊದಲ ವಿಮಾನ ಮುಂಬೈ ಏರ್‌ಪೋರ್ಟ್‌ಗೆ ಶನಿವಾರ ಬಂದಿತ್ತು. ಎರಡನೇ ವಿಮಾನ(250 ಮಂದಿ) ಭಾನುವಾರ ಬೆಳಗಿನ ಜಾವ 2.45ಕ್ಕೆ ದೆಹಲಿಯಲ್ಲಿ ಲ್ಯಾಂಡ್ ಆಗಿದೆ. ಭಾನುವಾರ ರಾತ್ರಿ ಮತ್ತೆರಡು ವಿಮಾನಗಳು ಬಂದಿಳಿದಿವೆ.
ರಕ್ಷಣಾ ವಿಮಾನ: ಗಂಟೆಗೆ 8 ಲಕ್ಷ ರೂ. ವೆಚ್ಚ
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುತ್ತಿರುವ ಏರಿಂಡಿಯಾ ವಿಮಾನಕ್ಕೆ ಪ್ರತಿ ಗಂಟೆಗೆ ಆಗುತ್ತಿರುವ ಖರ್ಚು ಎಷ್ಟು ಗೊತ್ತೇ? 7ರಿಂದ 8 ಲಕ್ಷ ರೂ.! ಪ್ರತಿ ವಿಮಾನಕ್ಕೆ ಭಾರತದಿಂದ ಹೋಗಿ, ವಾಪಸ್ ಬರಲು ಒಟ್ಟಾರೆ 1.10 ಕೋಟಿ ರೂ. ವೆಚ್ಚವಾಗುತ್ತಿದೆ. ಸಿಬ್ಬಂದಿಗೆ ಕೊಡುವ ವೇತನ, ವೈಮಾನಿಕ ಇಂಧನ, ನೇವಿಗೇಷನ್, ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಶುಲ್ಕವೂ ಇದರಲ್ಲಿ ಒಳಗೊಂಡಿದೆ. ಭಾರತ ಸರ್ಕಾರವೇ ಈ ವಿಮಾನಗಳನ್ನು ಬಾಡಿಗೆಗೆ ಪಡೆದು ಭಾರತೀಯರನ್ನು ಕರೆತರುತ್ತಿದೆ. ಒಂದು ಡ್ರೀಮ್‌ಲೈನರ್ ವಿಮಾನಕ್ಕೆ ಗಂಟೆಗೆ 5 ಟನ್ ಇಂಧನದ ಅವಶ್ಯಕತೆಯಿರುತ್ತದೆ.
ಭಾರತೀಯ ವಿದ್ಯಾರ್ಥಿಗಳ ಮೇಲೆ ಯೋಧರಿಂದ ಹಲ್ಲೆ?
ಸ್ವದೇಶಕ್ಕೆ ಮರಳುವ ಉದ್ದೇಶದಿಂದ ಉಕ್ರೇನ್‌ನ ನೆರೆದೇಶವಾದ ಪೋಲೆಂಡ್‌ನ ಗಡಿಯತ್ತ ಕಿಲೋಮೀಟರ್‌ಗಟ್ಟಲೆ ನಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್‌ನ ಯೋಧರು ಹಾಗೂ ಪೊಲೀಸರು ಥಳಿಸಿರುವ ಆರೋಪಗಳು ಕೇಳಿಬಂದಿವೆ. ಮಲಯಾಳಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಹಲ್ಲೆಗಳಾಗಿವೆ ಎಂದು ಏಂಜೆಲ್ ಎಂಬ ಕೇರಳ ಮೂಲದ ವಿದ್ಯಾರ್ಥಿನಿ, ತಮ್ಮ ವಿಡಿಯೋ ಸಂದೇಶವೊಂದರಲ್ಲಿ ದೂರಿದ್ದಾರೆ.
“ಪೋಲೆಂಡ್ ಗಡಿಯತ್ತ ನಡೆದು ಬರುತ್ತಿರುವ ನಮ್ಮನ್ನು ಯೋಧರು, ಪೊಲೀಸರು ಹೊಡೆದಿದ್ದಾರೆ. ಪ್ರತಿರೋಧ ತೋರಿದ್ದಕ್ಕೆ ನನ್ನನ್ನು ರಸ್ತೆಗೆ ತಳ್ಳಿದ್ದಾರೆ. ನನ್ನ ಬೆಂಬಲಕ್ಕೆ ಬಂದ ನನ್ನ ಸಹಪಾಠಿಯನ್ನೂ ರಸ್ತೆಗೆ ತಳ್ಳಿದ್ದಾರೆ” ಎಂದು ವಿದ್ಯಾರ್ಥಿನಿ ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.