ಮಾನವೀಯತೆ ಮುಖವಾಡ: ಅನುಕಂಪವೇ ಬಂಡವಾಳ

ಭಿಕ್ಷಾಟನೆ ಹಿಂದಿನ ಅಸಲಿ ಮುಖ ಬಹಿರಂಗ | ಸತ್ಯವನ್ನು ಬಿಚ್ಚಿಡುವ ನೈಜ ಘಟನೆಗಳು

Team Udayavani, Feb 28, 2022, 3:14 PM IST

Untitled-1

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಭಿಕ್ಷಾಟನೆಯು ಒಂದು ದಂಧೆಯಾಗಿದೆ. ಮಕ್ಕಳು, ಮಹಿಳೆಯರು, ಪುರುಷರು, ವಿಶೇಷಚೇತನರು, ವಯಸ್ಸಾದವರು ಸೇರಿದಂತೆ ಎಲ್ಲಾ ವಯೋಮಿತಿಯವರು ವಿವಿಧ ರೀತಿಯ ಭಿಕ್ಷಾಟನೆಯಲ್ಲಿ ಭಾಗಿಯಾಗಿದ್ದಾರೆ. ಭಿಕ್ಷಾಟನೆಯನ್ನು ನಿರ್ಮೂಲನೆಗೊಳಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡರೂ ಭಿಕ್ಷಾಟನೆ ಮುಕ್ತವಾಗಿಲ್ಲ. ಹೀಗಾಗಿ ಸರ್ಕಾರದ ಬದಲು ಭಿಕ್ಷುಕರ ಕಾಲೋನಿ, ಬೆಂಗಳೂರು ಹುಡುಗರು ತಂಡ ಸೇರಿದಂತೆ ಸ್ಥಳೀಯ ಎನ್‌ಜಿಒಗಳು ನಗರದಲ್ಲಿ ಭಿಕ್ಷಾಟನೆ ಮುಕ್ತ ಅಭಿಯಾನವನ್ನು ಪ್ರಾರಂಭಿಸಿವೆ. ಭಿಕ್ಷುಕರಿಗೆ ಹಣದ ರೂಪದಲ್ಲಿ ಭಿಕ್ಷೆ ನೀಡುವ ಬದಲು, ಹಣ್ಣು, ಊಟ, ಬಟ್ಟೆ ನೀಡಿ ಪ್ರಾಮಾಣಿಕ ಭಿಕ್ಷುಕರಿಗೆ ಸ್ಪಂದಿಸಲು ಅರಿವು ಮೂಡಿಸುತ್ತಿದ್ದಾರೆ. ಈ ಕುರಿತು ಸುದ್ದಿ ಸುತ್ತಾಟದಲ್ಲಿ ಒಂದು ನೋಟ. 

ಕಂಕುಳಲ್ಲಿ ಮಲಗಿದ ಮಗುವಿನೊಂದಿಗೆ ಬಾಡಿದ ಮುಖಹೊತ್ತು ಅಂಗಲಾಚುವ ಮಹಿಳೆ, ಕೈಯಲ್ಲಿ ಗುಲಾಬಿ ಹೂವಿನ ಗುತ್ಛ ಹಿಡಿದು ನೀವಿದ್ದಲ್ಲಿಗೆ ಬರುವ ಹೆಣ್ಣುಮಗು, ಅನಾರೋಗ್ಯಕ್ಕೆ ತುತ್ತಾಗಿರುವಂತೆ ನಟಿಸಿ ನಡುಗುವ ದನಿಯಲ್ಲಿಸಹಾಯಕ್ಕಾಗಿ ಚಾಚುವ ಕೈಗಳು…ರಾಜಧಾನಿಯ ಪ್ರತಿ ಸಿಗ್ನಲ್‌ಗ‌ಳಲ್ಲಿ ಸಾಮಾನ್ಯವಾಗಿ ನಿತ್ಯಕಂಡುಬರುವ ದೃಶ್ಯಗಳನ್ನು ನೋಡಿದರೆ ಎಂಥವರಿಗೂಮನಕಲಕುವುದು. ಮಾನವೀಯ ದೃಷ್ಟಿಯಿಂದ ಕೆಲವರು ಹಣಕೊಟ್ಟು ಹೋಗುತ್ತಾರೆ. ಆದರೆ, ಹೀಗೆ ನಮ್ಮ ಮನಸ್ಸುಗಳನ್ನುಕಲಕುವ ದೃಶ್ಯಗಳ ಹಿಂದೊಂದು ಕರಾಳ ಮುಖ ಅಡಗಿದೆ.ಆಗಷ್ಟೇ ಚಿಗುರುವಎಳೆಮನಸ್ಸುಗಳನ್ನು ಚಿವುಟಿಹಾಕುವ, ಮಕ್ಕಳ ಹಕ್ಕುಕಿತ್ತುಕೊಳ್ಳುವ, ಜನರ ಅನು ಕಂಪವನ್ನೇ ಬಂಡವಾಳ ಮಾಡಿ ಕೊಂಡ “ಮಾನವೀಯತೆಯಮುಖವಾಡ’ ಇದರಲ್ಲಿಬಹುತೇಕ ಮಂದಿ ಉತ್ತರ ಭಾರತದವರೇ ಇದ್ದಾರೆ.

ಯಾರೋ ಹೆತ್ತ ಪುಟ್ಟ ಮಕ್ಕಳನ್ನು ದಿನಕ್ಕೆ ಇಂತಿಷ್ಟು ಎಂದು ಹಣ ನೀಡಿ ಬಾಡಿಗೆಗೆ ಪಡೆಯಲಾಗಿರುತ್ತದೆ. ಕಂದಮ್ಮಗಳು ಅಳದಂತೆ (ಕೆಲವು ಸಲಅಳುವಂತೆ) ರಾಸಾಯನಿಕ ವಸ್ತು ಬಳಸುತ್ತಾರೆ. ಹೂವಿನ ಗುಚ್ಛದೊಂದಿಗೆ ಬರುವ ಹೆಣ್ಣುಮಗುವನ್ನು ಒತ್ತಾಯಪೂರ್ವಕವಾಗಿ ಥಳಿಸಿ ಕರೆತರಲಾಗಿರುತ್ತದೆ. ವ್ಹೀಲ್‌ಚೇರ್‌ನಲ್ಲಿ ಭಿಕ್ಷೆ ಕೇಳುವ ವ್ಯಕ್ತಿ ಮತ್ತು ಸಹಾಯಕರು ವಾರಕ್ಕೊಮ್ಮೆ ಅದಲುಬದಲು ಆಗುತ್ತಾರೆ. ಇಂತಹ ಹಲವಾರು ಸಂಗತಿಗಳು ರಾಜಧಾನಿಯ ತೆರೆಮರೆಯಲ್ಲಿ ನಿರಂತರವಾಗಿ ನಡೆಯುತ್ತವೆ. ಮೇಲ್ನೋಟಕ್ಕೆ ಇದು ಚಿಲ್ಲರೆ ಕಾಸಿಗಾಗಿ ಬೇಡುವ ವಿಚಾರ ಎಂದು ಅನಿಸಿದರೂ ವಾಸ್ತವದಲ್ಲಿ ಸಾವಿರಾರು ರೂ.ಗಳ ದಂಧೆ. “ಅನುಕಂಪ’ದ ಹಿಂದಿನ ಅಸಲಿಯತ್ತೇ ಬೇರೆ. ಅದು ಏನು ಎಂಬುದು ಇಲ್ಲಿದೆ ನೋಡಿ.

ಪ್ರಕರಣ 1 :

ಒಂದು ದಿನ ಬೆಳಗ್ಗೆ 9 ಗಂಟೆಗೆ ಬೈಕ್‌ ನಲ್ಲಿ ಸಂಪಂಗಿರಾಮ ನಗರದಿಂದ ಎಂ.ಜಿ. ರಸ್ತೆ ಮೂಲಕ ಇಂದಿರಾನಗರದಲ್ಲಿರುವ ಆಫೀಸ್‌ಗೆ ಹೊರಟೆ. ಎಂ.ಜಿ.ರಸ್ತೆಯ ಸಿಗ್ನಲ್‌ನಲ್ಲಿ ನಿಂತುಕೊಂಡಾಗ, ಮಹಿಳೆಯೊಬ್ಬಳು ಎಳೆ ಕಂದಮ್ಮನನ್ನು ಜೋಳಿಗೆಯಲ್ಲಿ ಎತ್ತಿಕೊಂಡು ಬಂದು, ಅಣ್ಣಾ ಭಿಕ್ಷೆ ಕೊಡಿ, ಮಗುವಿಗೆ ಊಟ

ತಿನ್ನಿಸಬೇಕು, ಹಸುವಿನಿಂದ ಅಳುತ್ತಿದೆ ಎಂದಳು. ನನ್ನ ಮನಸ್ಸು ಕರಗಿ, ಹತ್ತು ರೂ. ಕೊಟ್ಟೆ. ಅದನ್ನು ತೆಗೆದುಕೊಂಡು ಪಕ್ಕಕ್ಕೆ ಹೋದಳು. ಎಲ್ಲಿಗೆ ಹೋದಳು ಎಂದು ಕುತೂಹಲದಿಂದ ನೋಡಿದರೆ, ಅಳುತ್ತಿದ್ದ ಆ ಮಗುವಿಗೆ ಪ್ರಜ್ಞೆ ತಪ್ಪುವಂತೆ ಮೂಗಿಗೆ ಬಟ್ಟೆ ಹಿಡಿಯುತ್ತಾಳೆ. ಇದನ್ನು ಕಂಡು ತುಂಬಾ ಬೇಸರವಾಯಿತು. ಏನಮ್ಮಾ ಮಾಡಿದೆ ಆ ಮಗುವಿಗೆ ಎಂದು ಕೇಳಿದರೆ, ನಿಮಗೇನುಕ್ಕೆ ಬೇಕು, ಹಣ ಕೊಡುವುದಾದರೆ ಕೊಡಿ ಇಲ್ಲವಾದರೆ ಮುಂದೋಗಿ ಎಂದಳು. ನಂತರ ಕೆಲವು ದಿನಗಳ ಕಾಲ ಸಿಗ್ನಲ್‌ನಲ್ಲಿನ ಭಿಕ್ಷುಕರ ಚಲನವಲನಗಳನ್ನು ಗ್ರಹಿಸಿದೆ. ಆಗ ಇಂಥ ಕಾನೂನುಬಾಹಿರ ಚಟುವಟಿಕೆಗಳಿಗೆ ಮುಕ್ತಿ ಕೊಡಿಸಬೇಕು ಎಂದು ನಿರ್ಧರಿಸಿದರು ಮನೋಜ್‌.

ಪ್ರಕರಣ 2 :

ಚರ್ಚ್‌ಸ್ಟ್ರೀಟ್‌ ರಸ್ತೆಯಲ್ಲಿ ನಾನು ಮತ್ತು ನನ್ನ ಫ್ರೆಂಡ್‌ ನಡೆದುಕೊಂಡು ಹೋಗುತ್ತಿದ್ದೆವು. ಆಗ ಪುಟ್ಟ ಹುಡುಗಿ ಗುಲಾಬಿ ಹೂಗಳನ್ನು ಹಿಡಿದು ನಮಗೆ ಅಡ್ಡ ಬಂದು ಅಕ್ಕ… ಅಣ್ಣಾ ಹೂ ತಗೊಳಿ… ಎಂದು ಕೇಳಿದಳು. ನಾವು ಬೇಡವೆಂದು ಹೆಜ್ಜೆ ಹಾಕಿದೆವು. ಆದರೆ, ಆ ಹುಡುಗಿ ಸುಮ್ಮನಾಗಿಲ್ಲ. ನಮ್ಮಿಂದೆಯೇ ಬಂದು ಹೂ ತಗೋಳಿ, ಅಕ್ಕಗೆ ಕೊಡಿಸಿ, ಹತ್ತು ರೂ. ಅಷ್ಟೇ. ನಾನು ಊಟ ಮಾಡಿಲ್ಲ. ನೀವು ಹೂವು ತೆಗೆದುಕೊಂಡರೆ ಮಾತ್ರ ನನಗೆ ಊಟ. ಪ್ಲೀಜ್‌ ಹೂ ತೆಗೆದುಕೊಳ್ಳಿ ಎಂದು ಪೀಡಿಸಲು ಶುರುಮಾಡಿದಳು. ಆಗ ನನ್ನ ಮನಸ್ಸು ಕರಗಿ, ಸರಿ ಹೂ ನೀನೆ ಇಟ್ಕೋ. ಬಾ ಊಟ ಕೊಡುಸ್ತೀನಿ ಎಂದುಕರೆದರೆ, ಬೇಡ ಹಣ ಕೊಡಿ ಎಂದಳು. ನಂತರ ಕುತೂಹಲಕ್ಕೆ ನೀನು ಶಾಲೆಗೆ ಹೋಗುದಿಲ್ವಾ ? ನಿನಗೆ ಎಷ್ಟು ವರ್ಷ? ನಿಮ್ಮ ಅಪ್ಪ ಅಮ್ಮ ಏನು ಮಾಡುತ್ತಾರೆ? ಎಂದು ಒಂದೆರಡು ಪ್ರಶ್ನೆ ಕೇಳಿದರೆ, ಕೈಯಲ್ಲಿದ್ದ 20 ರೂ. ಹಣ ತೆಗೆದುಕೊಂಡು ಓಡಿ ಹೋದಳು. ಎಲ್ಲಿಗೆ ಹೋದಳು ಎಂದು ಅವಳ ಹಿಂದೆ ಹೋಗಿ ನೋಡಿದರೆ, ಮತ್ತೂಬ್ಬ ಹುಡುಗ ಉದ್ದನೆ ಪೆನ್ನು, ಚಾರ್ಟ್‌ ಗಳನ್ನು ಮಾರುತ್ತಿದ್ದನು. ಆಗ ನನಗೆ ಅನುಮಾನ ಬಂದು ಈ ಮಕ್ಕಳ ಏನು ಮಾಡುತ್ತಾರೆ, ಈ ರೀತಿ ಇನ್ನು ಎಷ್ಟು ಮಕ್ಕಳು ಇರಬಹುದು. ಅವರ ಚಲನಾ ವಲನಗಳನ್ನುಗಮನಿಸಿದೆ. ಆಗ ತಿಳಿಯಿತು ಈ ಮಕ್ಕಳು ಹೂವು, ಪೆನ್ನುಮಾರುವ ನೆಪದಲ್ಲಿ ಭಿಕ್ಷೆ ಬೇಡುತ್ತಾರೆ. ಸಾಮಾನ್ಯವಾಗಿ ಜನರು ಚರ್ಚ್‌ ಸ್ಟ್ರೀಟ್‌ಗೆ ಎಂಜಾಯ್‌ ಮಾಡಲು ಬಂದಿರುತ್ತಾರೆ. ಈ ಮಕ್ಕಳ ಜತೆಗೆ ಸಮಯ ಕಳೆಯಲುಇಚ್ಛಿಸದೇ, ಗುಲಾಬಿ ಮತ್ತು ಪೆನ್ನುಗಳನ್ನು ಯಾರುತೆಗೆದುಕೊಳ್ಳುವುದಿಲ್ಲ. ಹಣ ಕೊಟ್ಟುಮುಂದೋಗುತ್ತಾರೆ. ಆದರೆ, ಈ ಮಕ್ಕಳು ಜನರಭಾವನೆಗಳ ಜತೆ ಆಟವಾಡುತ್ತಾರೆ. ಎಮೋಷನಲ್‌ ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ. ಇಂತವರಿಗೆ ಹಣ ಕೊಡಬಾರದು ಎನಿಸಿತು ಎಂದರು ಟೆಕ್ಕಿ ಆದರ್ಶ.

ಪ್ರಕರಣ 3 :

ಕಚೇರಿ ಮುಗಿಸಿ ಕಾರಿನಲ್ಲಿ ಮನೆಗೆ ಸೌಂತೆಂಡ್‌ ವೃತ್ತದ ಮೂಲಕ ಹೋಗುವಾಗ ಹಾಡು ಕೇಳುತ್ತಾ ಹೋಗುವುದು ನಿತ್ಯದದಿನಚರಿ. ಇದಕ್ಕೆ ಭಂಗ ತರುವುದು ಒಂದು ಕಡೆ ಸಿಗ್ನಲ್‌ಗಳು, ಮತ್ತೂಂಡೆದೆ ಸಿಗ್ನಲ್‌ನಲ್ಲಿರುವ ಭಿಕ್ಷುಕರು.ಸುಮಾರು 40 ವರ್ಷದ ಮಹಿಳೆಯೊಬ್ಬಳು 70ರಆಸುಪಾಸಿನ ಅಂಧ ವ್ಯಕ್ತಿಯನ್ನು ವ್ಹೀಲ್‌ಚೇರಿನಲ್ಲಿಕುಳ್ಳಿರಿಸಿ, ಯಾವುದೋ ಒಂದು ಪತ್ರ ಹಿಡಿದು ಭಿಕ್ಷೆಕೇಳುತ್ತಿದ್ದಳು. ಇದನ್ನು ಕಂಡು 10 ರೂ. ಮಹಿಳೆಯಕೈಗಿರಿಸಿದೆ. ಸುಮಾರು ದಿನಗಳ ಬಳಿಕ ಮತ್ತೆ ಅದೇ ಮಹಿಳೆ ಸುಮಾರು 50 ವರ್ಷದ ಕಾಲಿಲ್ಲದ ವ್ಯಕ್ತಿಯ ಜತೆ ಭಿಕ್ಷೆ ಬೇಡುತ್ತಿದ್ದಳು. ನನಗೆ ಇದರಲ್ಲೇ ನೋ ಮೋಸವಿದೆ ಎನ್ನಿಸಿತು. ಆದ್ದರಿಂದ ಅಂದಿನಿಂದ ಹಣ ಕೊಡುವುದನ್ನು ನಿಲ್ಲಿಸಿದೆ ಎನ್ನುತ್ತಾರೆ ಭರತ್‌.

ಬೆಂಗಳೂರು ಹುಡುಗರು ತಂಡ :

ಬೆಂಗಳೂರು ಹುಡುಗರು ಎಂಬ ತಂಡವು, ಸುಮಾರು 40 ಜನ ಸ್ವಯಂ ಕಾರ್ಯಕರ್ತರನ್ನು ಒಳಗೊಳಗೊಂಡಿದೆ. ಡಿಆರ್‌ಡಿಒ ಸಂಸ್ಥೆಯಉದ್ಯೋಗಿ ವಿನೋದ್‌ ಕತ್ಯವ್ಯ ಈ ತಂಡದ ಸಹಸಂಸ್ಥಾಪಕ. ಎಜಿಡಿಪಿ ಭಾಸ್ಕರ್‌ ರಾವ್‌ ಈ ತಂಡದಮಾರ್ಗದರ್ಶಕರಾಗಿದ್ದಾರೆ. ಈ ತಂಡವು ಮೊಳೆಮುಕ್ತ ಮರ ಎಂಬ ಅಭಿಯಾನದಿಂದಆರಂಭವಾಯಿತು. ತದನಂತರ ನಗರದಲ್ಲಿನಡೆಯುತ್ತಿರುವ ಭಿಕ್ಷಾಟನೆ ದಂಧೆಯನ್ನು ತಡೆಯುವ ಕಾರಣ, ಕಳೆದ ಆ.15ರಲ್ಲಿ ಆರಂಭವಾದ ಭಿಕ್ಷಾಟನೆ ಮುಕ್ತ ಭಾರತ ಅಭಿಯಾನವು ಪ್ರತಿಭಾನುವಾರ ದಂದು ನಗರದ ಪ್ರಮುಖ ಸಿಗ್ನಲ್‌ಗಳಲ್ಲಿ ಈ ತಂಡದ ಒಟ್ಟು 40 ಮಂದಿ ಸೇರಿಕೊಂಡುಸಾರ್ವಜನಿಕರಲ್ಲಿ ನಕಲಿ ಭಿಕ್ಷುಕರ ಬಗ್ಗೆ ಅರಿವು ಮೂಡಿಸಲು ಆರಂಭಿಸಿದರು.

ಟೌನ್‌ಹಾಲ್‌ನಿಂದ ಪ್ರಾರಂಭವಾದ ಭಿಕ್ಷಾಟನೆಮುಕ್ತ ಭಾರತ ಅಭಿಯಾನವು ಹೆಬ್ಟಾಳ ವೃತ್ತ,ಸೌಂತೆಂಡ್‌ ವೃತ್ತ, ಸುಮ್ಮನಹಳ್ಳಿ ವೃತ್ತ, ನಾಯಂಡಳ್ಳಿವೃತ್ತ, ಮಕ್ಕಳ ಕೂಟ ವೃತ್ತ, ಬನಶಂಕರಿ ವೃತ್ತದ ಸಿಗ್ನಲ್‌ಸೇರಿದಂತೆ ನಗರದ ಮುಖ್ಯ ಸಿಗ್ನಲ್‌ಗ‌ಳಲ್ಲಿಇದುವರೆಗೆ 23 ಭಾನುವಾರಗಳನ್ನು ಪೂರೈಸಿದೆ.ಈ ರೀತಿಯ ಕಾನೂನು ಬಾಹಿರಚಟುವಟಿಕೆಗಳನ್ನು ತಡೆಗಟ್ಟಬೇಕೆಂದರೆ, ಯಾವುದೇ ಭಿಕ್ಷುಕರಿಗೆ ಆಹಾರ ಪದಾರ್ಥಗಳನ್ನು ಅಥವಾಬಟ್ಟೆಗಳನ್ನು ಕೊಡಿ ವಿನಃ ಹಣವನ್ನು ದಯಮಾಡಿ ಕೊಡಬೇಡಿ ಎಂದು ಅದೇ ಸಿಗ್ನಲ್‌ಗ‌ಳಲ್ಲಿ ಸೂಚನಾಫ‌ಲಕಗಳನ್ನು ಹಿಡಿದು ಘೋಷವಾಕ್ಯ ಗಳನ್ನು ಕೂಗುವುದರ ಮೂಲಕ ಜನರಲ್ಲಿ ಜಾಗೃತಿಯನ್ನುಮೂಡಿಸಲಾಗುತ್ತದೆ. ಜನರಿಂದ ಉತ್ತಮ ಸ್ಪಂದನೆಯೂ ಕೂಡ ಸಿಕ್ಕಿದೆ. ಒಟ್ಟು 25 ಭಾನು ವಾರಗಳ ಕಾಲ ಅರಿವು ಮೂಡಿಸುವ ಅಭಿಯಾನ ವನ್ನು ಮಾಡಿ, ನಂತರದ ದಿನಗಳಲ್ಲಿ ಸಮಾಜಕಲ್ಯಾಣ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡು ಮಕ್ಕಳ ಸಹಾಯವಾಣಿ ಮತ್ತು ಭಿಕ್ಷುಕರ ಸಹಾಯವಾಣಿಯನ್ನು ತೆರೆದು ಭಿಕ್ಷಾಟನೆಗೆ ಮುಕ್ತಿಕೊಡುವ ಪ್ರಯತ್ನದಲ್ಲಿ ಇದ್ದಾರೆ. ಈ ಭಿಕ್ಷಾಟನೆ ಮುಕ್ತ ಭಾರತ ಅಭಿಯಾನಕ್ಕೆ ಸರ್ಕಾರ, ಬಿಬಿಎಂಪಿ, ಕಮಿಷನರ್‌ ಹಾಗೂ ಸ್ಥಳೀಯ ಎನ್‌ಜಿಒಗಳು ಸೇರಿದಂತೆ ಸಾರ್ವಜನಿಕರ ಬೆಂಬಲವು ಈ ತಂಡಕ್ಕಿದೆ.

ಒಂದು ದಿನದ ಸಂಪಾದನೆ :

ಒಂದು ದಿನ ಅನಿಲ್‌ ಕುಂಬ್ಳೆ ಸಿಗ್ನಲ್‌ನಲ್ಲಿ ನಿಂತುಕೊಂಡು ಗಮನಿಸಿದಾಗ, ಒಂದು ಬಾರಿ ಸಿಗ್ನಲ್‌ ಬಿದ್ದಾಗ ಸುಮಾರು 25 ರಿಂದ 50 ವಾಹನಗಳ ಬಳಿ ಹೋಗುತ್ತಾರೆ. ಅದರಲ್ಲಿ ಕನಿಷ್ಠ ಐದರಿಂದಹತ್ತು ವಾಹನದವರು 10ರಿಂದ 100ರೂ.ಗಳ ವರೆಗೆ ಕೊಡುತ್ತಾರೆ. ಬೆಳಗ್ಗೆ10ರಿಂದ ಸಂಜೆ 5 ಗಂಟೆವರೆಗೆ ಸುಮಾರು 100 ಸಿಗ್ನಲ್‌ಗ‌ಳು ಬೀಳುತ್ತವೆ. ಅದರಲ್ಲಿ ಒಂದು ಸಿಗ್ನಲ್‌ಗೆ ಕನಿಷ್ಠ 50ರೂ. ಎಂದರು, ದಿನಕ್ಕೆ 3 ರಿಂದ 5 ಸಾವಿರ ರೂ.ಗಳನ್ನು ಸಂಪಾದಿಸುತ್ತಾರೆ. ಅದರಲ್ಲಿಯೂ ಎಳೆಯ ಮಕ್ಕಳಿಗೆ ಬಾಡಿಗೆ ನೀಡಲಾಗುತ್ತದೆ. ಅಂಧತ್ವ, ವ್ಹೀಲ್‌ ಚೇರ್‌ನಲ್ಲಿರುವ ಹಾಗೂ ಅಸಹಾಯಕವ್ಯಕ್ತಿಗಳನ್ನು ಬಳಸಿಕೊಂಡು ನಡು ವಯಸ್ಸಿನ ಮಹಿಳೆಯರು ನಗರದ ಪ್ರಮುಖ ಸರ್ಕಲ್‌ಗ‌ಳಲ್ಲಿ ಭಿಕ್ಷೆ ಬೇಡುವ ಈ ಇಬ್ಬರಿಗೂ ಒಬ್ಬರ ಇನ್ನೊಬ್ಬರ ಪರಿಚಯವೇ ಇರುವುದಿಲ್ಲ. ಟ್ರಾಫಿಕ್‌ನಲ್ಲಿ ಅಸಹಾಯಕ ವ್ಯಕ್ತಿಯನ್ನು ಗಮನಿಸಿ ನೀಡುವ ಹಣದಲ್ಲಿ ಮೂರು ಭಾಗಗಳಾಗಿ ವಿಂಗಡಿಸುತ್ತಾರೆ.

ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯಿದೆ-1975 :

ಕರ್ನಾಟಕ ರಾಜ್ಯ ಸರ್ಕಾರ 1975ರಲ್ಲಿ ಭಿಕ್ಷಾಟನೆಯನ್ನು ನಿಷೇಧಿಸುವ ಹಿನ್ನೆಲೆ ಭಿಕ್ಷುಕರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿತು. ಇದರ ಅಡಿಯಲ್ಲಿ ಭಿಕ್ಷೆ ಎಂದರೆ, ಅವರ ಕೌಶಲ್ಯಕ್ಕೆ ತಕ್ಕಂತೆ ಹಾಡು, ನೃತ್ಯ, ಚಿತ್ರಕಲೆ, ಕೊಳಲು ಬಾರಿಸುವುದು ಮುಂತಾದ ಪ್ರತಿಭೆಗಳನ್ನು ಪ್ರದರ್ಶಿಸಿ, ಹಣ ಪಡೆಯಬಹುದು ಹೊರತು, ಮಕ್ಕಳನ್ನು ಎತ್ತಿಕೊಂಡು ಅಥವಾ ವಸ್ತುಗಳನ್ನು ಮಾರುವ ನೆಪದಲ್ಲಿ ಭಿಕ್ಷೆ ಬೇಡಬಾರದು ಎಂದು ತಿಳಿಸುತ್ತದೆ. ಅಲ್ಲದೇ, ಭಿಕ್ಷಾಟನೆಯಲ್ಲಿ ತೊಡಗಿರುವ ಯಾವುದೇ ವ್ಯಕ್ತಿಯನ್ನು ಬಂಧಿಸಲಾಗುತ್ತದೆ. ನಂತರ ಕಾರ್ಯವಿಧಾನಗಳನ್ನು ಅನುಸರಿಸಿ, ಅವರನ್ನು ಪುನರ್ವಸತಿಗಾಗಿ ಭಿಕ್ಷುಕರ ಪರಿಹಾರ ಕೇಂದ್ರಗಳಲ್ಲಿ ಬಂಧಿಸಿಡಲಾಗುತ್ತದೆ. 1975ರ ಕರ್ನಾಟಕ ಭಿಕ್ಷುಕ ನಿಷೇಧ ಕಾಯಿದೆಯ ಸೆಕ್ಷನ್‌ 31(1)ರ ಅಡಿಯಲ್ಲಿ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಭೂಮಿ ಹಾಗೂ ಕಟ್ಟಡದ ಮೇಲಿನ ಆಸ್ತಿ ತೆರಿಗೆಯಲ್ಲಿ ಮೀಸಲಾದ ಶೇ.3ರಷ್ಟು ಕೇಂದ್ರೀಯ ಸ್ಮಾರಕ ಸಮಿತಿ ನಿಧಿಗೆ ಭಿಕ್ಷುಕರ ಸೆಸ್‌ ನೀಡುತ್ತದೆ.

ಭಿಕ್ಷಾಟನೆ ಮುಕ್ತಗೊಳಿಸಲು ಕೈಗೊಂಡಿರುವ ಕ್ರಮಗಳು :

ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯಿದೆ ಪ್ರಕಾರ ಯಾವುದೇ ವ್ಯಕ್ತಿ ಅಥವಾ ಮಕ್ಕಳು ಭಿಕ್ಷೆ ಬೇಡಬಾರದು. ಅಂದಾಜು ಸುಮಾರು ಜನ ನಗರದಲ್ಲಿ ಇಂದು ಭಿಕ್ಷೆ ಬೇಡುತ್ತಿದ್ದಾರೆ. ಭಿಕ್ಷಾಟನೆಯನ್ನು ನಿರ್ಮೂಲನೆ ಮಾಡಲೆಂದು ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಭಿಕ್ಷೆ ಬೇಡುವವರನ್ನು ಬಂಧಿಸಲಾಗುತ್ತದೆ. ನಂತರ ಅವರ ಹಿನ್ನೆಲೆಯನ್ನುಆಪ್ತಸಮಾಲೋಚನೆ ನಡೆಸಿ, ಪುನರ್ವಸತಿಯನ್ನು ಕಲ್ಪಿಸಲಾಗುತ್ತದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಾ,ಕಾನೂನು ಸುವ್ಯವಸ್ಥೆಗೆ ಹಾಗೂ ವಾಹನ ಸಂಚಾರಕ್ಕೆ ತೊಡಕು ಉಂಟುಮಾಡುತ್ತಿದ್ದ ಭಿಕ್ಷುಕರನ್ನು ವಶಪಡಿಸಿಕೊಂಡುಭಿಕ್ಷುಕರ ಕಾಲೋನಿಗೆ ಕರೆದೊಯ್ಯಲಾಯಿತು. ಈ ಪೈಕಿ ಕಳೆದ ಎರಡು-ಮೂರು ತಿಂಗಳಲ್ಲಿ ನಗರದ ಪಶ್ಚಿಮ ವಿಭಾಗದಲ್ಲಿಸುಮಾರು 100ಕ್ಕಿಂತ ಹೆಚ್ಚು ಭಿಕ್ಷುಕರನ್ನು ಆ್ಯಂಬುಲೆನ್ಸ್‌ ಮೂಲಕ ಕರೆದುಕೊಂಡು ಹೋಗಿ, ಭಿಕ್ಷುಕರ ಕಾಲೋನಿಗೆ ಬಿಡಲಾಗಿದೆ. ಸಾಮಾನ್ಯವಾಗಿ ಸಿಗ್ನಲ್‌ಗ‌ಳಲ್ಲಿ ಭಿಕ್ಷೆ ಬೇಡುವ ಭಿಕ್ಷುಕರಿಂದ ವಾಹನ ಸಂಚಾರರಿಗೂ, ಟ್ರಾಫಿಕ್‌ಗೆ ತೊಂದರೆ ಮಾಡುತ್ತಾರೆಂದು ಅವರನ್ನು ಅಲ್ಲಿಂದ ಹೊರಗೆ ಕರೆತರುವ ಕೆಲಸವನ್ನು ಸಂಚಾರ ಪೊಲೀಸರು ನಿರ್ವಹಿಸುತ್ತಾರೆ.

ಬೆಂಗಳೂರಿನಲ್ಲಿನ ಭಿಕ್ಷಾಟನೆ ಟ್ರೆಂಡ್‌ :

ರಾಜಧಾನಿಯಲ್ಲಿ ಭಿಕ್ಷಾಟನೆ ಒಂದು ಟ್ರೆಂಡ್‌ ಆಗಿದೆ. ಇದರಲ್ಲಿ ಇನ್ನೂ ಪ್ರಪಂಚವನ್ನೇ ನೋಡದ ಹಸುಳೆಯಿಂದ ಹಿಡಿದುವಯೋ ವೃದ್ಧರವರೆಗೂ ಎಲ್ಲಾ ವಯೋಮಿತಿಯವರುತೊಡಗಿದ್ದಾರೆ. ಒಂದೊಂದು ವಯೋಮಾನ ದವರುಒಂದೊಂದು ರೀತಿಯಲ್ಲಿ ಅಂದರೆ, ಚಿಕ್ಕಹುಡುಗರು ಉದ್ದನೆಯ ಪೆನ್ನು, ಪುಟ್ಟ ಹುಡುಗಿಯರು ಗುಲಾಬಿ ಹೂ,ಮಹಿಳೆಯರು ಎಳೆಯ ಕಂದಮ್ಮನನ್ನು,ಮುದುಕರು ಇಯರ್‌ ಬಡ್ಸ್‌, ಅಂಧತ್ವ,ವ್ಹೀಲ್‌ ಚೇರ್‌ನಲ್ಲಿರುವ ಹಾಗೂಅಸಹಾಯಕ ವ್ಯಕ್ತಿಗಳನ್ನು ಬಳಸಿಕೊಂಡು ನಡು ವಯಸ್ಸಿನಮಹಿಳೆಯರು ನಗರದ ಪ್ರಮುಖಸರ್ಕಲ್‌ಗ‌ಳಲ್ಲಿ ಹಣ ಕೇಳುತ್ತಿದ್ದಾರೆ.ಹೀಗೆ ಯಾವುದೋ ಒಂದು ನೆಪದಲ್ಲಿ ಭಿಕ್ಷೆ ಬೇಡುತ್ತಾರೆ.

ಭಿಕ್ಷುಕರ ಕಾಲೋನಿಯಲ್ಲಿ 625 ಮಂದಿಗೆ ಆಶ್ರಯ :

ಬೆಂಗಳೂರು ನಗರದಲ್ಲಿರುವ ಭಿಕ್ಷುಕರ ಕಾಲೋನಿಯಲ್ಲಿ ಒಟ್ಟು 625 ಜನ ಭಿಕ್ಷುಕರು ಇದ್ದಾರೆ. ಇವರು ದೇಶದ ನಾನಾ ಭಾಗಗಳಿಂದ ಬಂದವರಾಗಿದ್ದು, ಕುಟುಂಬಸ್ಥರಿಲ್ಲದ ಹಾಗೂಸಮಾಜದಿಂದ ನೊಂದ ಜೀವಗಳಾಗಿವೆ. ಭಿಕ್ಷುಕ ಕಾಯಿದೆಮತ್ತು ನಿಯಮಗಳ ಪ್ರಕಾರ ಇಲ್ಲಿನ ಭಿಕ್ಷುಕರಿಗೆ ಉಚಿತ ಊಟಮತ್ತು ವಸತಿ ವ್ಯವಸ್ಥೆ, ಮೂಲ ಸೌಕರ್ಯಗಳನ್ನುಒದಗಿಸಲಾಗುವುದು. ವೃತ್ತಿಪರ ಕೆಲಸಗಳನ್ನು ಮಾಡುವವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಲ್ಲಿ ಹೈನುಗಾರಿಕೆ, ಕುರಿಸಾಕಾಣಿಕೆ, ತೋಟಗಾರಿಕೆ, ಕೈಮಗ್ಗ, ವಿದ್ಯುತ್‌ ಮಗ್ಗ, ಮ್ಯಾಟ್‌ ಹೆಣೆಯುವುದು ಸೇರಿದಂತೆ ನಾನಾ ರೀತಿಯ ಕಾರ್ಯಗಳನ್ನುಇಲ್ಲಿ ಭಿಕ್ಷುಕರೇ ಮಾಡುತ್ತಾರೆ. ಇವರಿಗೆ ದೈನಂದಿನ ಕೂಲಿರೀತಿಯಲ್ಲಿ 75 ರೂ. ನೀಡಲಾಗುತ್ತದೆ. ಇದನ್ನು ನೇರವಾಗಿಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಭಿಕ್ಷೆ ಬೇಡದಂತೆಕೈಲಾದ ಕೆಲಸವನ್ನು ಮಾಡಿಕೊಂಡು ಇರಲು ಅವಕಾಶನೀಡಲಾಗಿದೆ. ಒಟ್ಟಿನಲ್ಲಿ ಭಿಕ್ಷಾಟನೆ ಮುಕ್ತ ಮಾಡುವುದೇನಮ್ಮ ಗುರಿ ಎಂದು ಭಿಕ್ಷುಕರ ಕಾಲೋನಿಯ ಮೇಲ್ವಿàಚಾರಕ ಚಂದ್ರಪ್ಪ ತಿಳಿಸಿದರು.

ಮಂಗಳಮುಖಿಯರೂ ಕಿರಿಕಿರಿ :

ಮನೆಯಿಂದ ಹಾಗೂ ಸಮಾಜದಿಂದ ನಿರ್ಲಕ್ಷ್ಯಕೊಳಪಟ್ಟ ಮಂಗಳಮುಖಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಿಕ್ಷಾಟನೆಯನ್ನೇನೆಚ್ಚಿಕೊಂಡಿದ್ದು, ಬೆಂಗಳೂರು ಮಹಾನಗರದ ಟ್ರಾಫಿಕ್‌ ಸಿಗ್ನಲ್‌ಗ‌ಳಲ್ಲಿ ಹೆಚ್ಚಾಗಿ ಭಿಕ್ಷಾಟನೆಯಲ್ಲಿ ತೊಡಗಿರುತ್ತಾರೆ. ಸಾರ್ವಜನಿಕರಿಂದನಯವಾಗಿ ಭಿಕ್ಷೆ ಬೇಡುವುದಕ್ಕಿಂತ ಬೈಕ್‌, ಕಾರುನಲ್ಲಿ ಬರುವಪುರುಷರಿಗೆ ಮುಜುಗರವಾಗುವಂತೆ ವರ್ತಿಸುವ ಮೂಲಕ ಕಿರಿಕಿರಿಯುಂಟು ಮಾಡುವುದೇ ಹೆಚ್ಚು. ತಮಗೆ ನೀಡಿದ ಭಿಕ್ಷೆಯಿಂದವಾಪಸ್‌ ದಕ್ಷಿಣೆ ಪಡೆದರೆ ಒಳ್ಳೆಯದಾಗುತ್ತದೆ ಎಂಬನಂಬಿಕೆಯನ್ನೂ ಮೂಡಿಸಿ ಭಾವ ನಾತ್ಮಕವಾಗಿಜನರಿಂದ ಹಣ ಕೀಳುವ ಪ್ರವೃತ್ತಿ ಹೆಚ್ಚಾಗಿದೆ.

ದೇಶಾದ್ಯಂತ ಭಿಕ್ಷಾಟನೆ ಮುಕ್ತ 10 ನಗರಗಳಲ್ಲಿ ಬೆಂಗಳೂರು :  2020 ವರದಿ ಪ್ರಕಾರ, ದೆಹಲಿ, ಕೊಲ್ಕತ್ತಾ, ಬೆಂಗಳೂರು, ಚೆನ್ನೈ, ಹೈದರಾಬಾದ್‌, ನಾಗ್ಪುರ್‌, ಪಾಟ್ನಾ, ಲಕ್ನೋ ಮತ್ತುಇಂದೋರ್‌ನಲ್ಲಿ ಭಿಕ್ಷಾಟನೆ ಮುಕ್ತ ಅಭಿಯಾನವನ್ನು ಜಾರಿಗೆತರಲು ಕೇಂದ್ರ ಸರ್ಕಾರ ಮುಂದಾಯಿತು. ಭಿಕ್ಷಾಟನೆ ಮಾಡುವವರಿಗೆ ಸುಸ್ಥಿರ ವಸಹಾತು ಕಲ್ಪಿಸುವ ಯೋಜನೆಸಿದ್ಧಪಡಿಸಲಾಯಿತು. ಈ ಯೋಜನೆಗೆ ಕೇಂದ್ರ ಸರ್ಕಾರಮತ್ತು ರಾಜ್ಯ ಸರ್ಕಾರದಿಂದ 60:40 ಅನುಪಾತದಲ್ಲಿ ಹಣನೀಡಬೇಕು ಎಂದು ಕೇಂದ್ರ ಸರ್ಕಾರ ಪ್ರಸ್ತಾಪಿಸಿತು. ಆದರೆ,ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಪ್ರಭಾವದಿಂದಾಗಿ ಭಿಕ್ಷುಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಪ್ರತಿ ವರ್ಷ ಸುಮಾರು 60 ಸಾವಿರ ಮಕ್ಕಳು ಅಪಹರಣ :  ನ್ಯಾಷನಲ್‌ ಕ್ರೈಂ ರೆಕಾರ್ಡ್‌ ಬ್ಯೂರೋ (ಎನ್‌ಸಿ ಆರ್‌ಟಿ) ಪ್ರಕಾರ ಪ್ರತಿ ವರ್ಷ ಸುಮಾರು 60 ಸಾವಿರ ಮಕ್ಕಳುಅಪಹರಣ ಆಗುತ್ತಿದ್ದಾರೆ. 75 ಸಾವಿರಮಹಿಳೆಯರನ್ನು ಕಳ್ಳಸಾಗಾಣಿಕೆ ಮೂಲಕಹಾಗೂ ಅಲೆಮಾರಿ ಜೀವನಮಾಡುತ್ತಿರುವ ಮುದುಕರನ್ನುಕರೆದೊಯ್ದು ಭಿಕ್ಷಾಟನೆಗೆ ದೂಡುತ್ತಾರೆ.ಬೆಂಗಳೂರಿನಲ್ಲಿ ಸುಮಾರು 20 ಸಾವಿರಭಿಕ್ಷುಕರಿದ್ದಾರೆ. ಅದರಲ್ಲಿ ಬಹುತೇಕ ಅಂದರೆ,ಶೇ.90ರಷ್ಟು ನಕಲಿ ಭಿಕ್ಷುಕರು ಇದ್ದಾರೆ. ಕೇವಲ ಶೇ.10ರಷ್ಟು ಮಾತ್ರನೈಜತೆಯ ಅಲೆಮಾರಿ ಜನಾಂಗದ ನಿರ್ಗತಿಕರು ಇದ್ದಾರೆ. ಇತ್ತೀಚೆಗೆನಡೆದ ಕಾನೂನು ಸೇವೆಗಳ ಪ್ರಾಧಿಕಾರದ ಸರ್ವೇ ಪ್ರಕಾರ ನಗರದಲ್ಲಿ ಸುಮಾರು 720 ಅಪ್ರಾಪ್ತ ಮಕ್ಕಳು ಭಿಕ್ಷೆ ಬೇಡುತ್ತಿದ್ದಾರೆ.

-ಭಾರತಿ ಸಜ್ಜನ್‌

ಟಾಪ್ ನ್ಯೂಸ್

PM Modi

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

naksal (2)

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

PM Modi

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

naksal (2)

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ

stalin

Tamil Nadu University; ಕುಲಪತಿ ನೇಮಕ: ಸಿಎಂ, ಗೌರ್ನರ್‌ ನಡುವೆ ಮತ್ತ ಸಂಘರ್ಷ

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.