ಶಿವರಾತ್ರಿಗೆ ವಿವಿಧೆಡೆ ಜಾತ್ರಾ ಮಹೋತ್ಸವ, ಕೊಂಡೋತ್ಸವ ‌

Team Udayavani, Feb 28, 2022, 2:08 PM IST

ಶಿವರಾತ್ರಿಗೆ ವಿವಿಧೆಡೆ ಜಾತ್ರಾ ಮಹೋತ್ಸವ, ಕೊಂಡೋತ್ಸವ ‌

ಹುಣಸೂರು: ಶಿವರಾತ್ರಿ ಪ್ರಯುಕ್ತ ತಾಲೂಕಿನರಾಮೇನಹಳ್ಳಿಯ ಬೆಟ್ಟದ ಮೇಲಿನ ಓಂಕಾರೇಶ್ವರಸ್ವಾಮಿ ರಥೋತ್ಸವ, ಕಲ್ಲೂರಪ್ಪನಬೆಟ್ಟದ ಕಲ್ಲೂರೇಶ್ವರನ ಕೊಂಡೋತ್ಸವ,ಕೊಳುವಿಗೆ ರಾಮ ಲಿಂಗೇಶ್ವರದೇವರ ಉತ್ಸವ, ನಗರದಮಂಜುನಾಥ ದೇವಾಲಯಸೇರಿದಂತೆ ವಿವಿಧೆಡೆವಿಶೇಷಪೂಜೆ, ಜಾಗರಣೆ, ಪೌರಾಣಿಕ ನಾಟಕ, ಅನ್ನದಾನ ನಡೆಯಲಿದೆ.

ಓಂಕಾರೇಶ್ವರ ರಥೋತ್ಸವ: ಶತಮಾನಗಳ ಇತಿಹಾಸದ ರಾಮೇನಹಳ್ಳಿ ಬೆಟ್ಟದಮೇಲಿನ ಚೋಳರ ಕಾಲದ ಓಂಕಾರೇಶ್ವರಸ್ವಾಮಿಯ ಜಾತ್ರಾಮಹೋತ್ಸವವು ನಡೆಯಲಿದೆ. ಸುಂದರಪರಿಸರದ ಬೆಟ್ಟದ ಮೇಲೆ ಭವ್ಯವಾದದೇವಾಲಯವನ್ನು ನಿರ್ಮಿಸಿದ್ದು, 426 ಎಕರೆವಿಸ್ತೀರ್ಣ ಹೊಂದಿರುವ ಬೆಟ್ಟವು ದೊಡ್ಡಬಂಡೆಕಲ್ಲುಗಳು, ಸಸಿಗಳಿಂದ ಆವೃತವಾಗಿರುವ 500 ಮೆಟ್ಟಿಲುಗಳ ಬೆಟ್ಟವನ್ನು ಹತ್ತಿ ಪೂಜೆಸಲ್ಲಿಸುತ್ತಾರೆ. ಪ್ರತಿ ಶಿವರಾತ್ರಿಹಬ್ಬದಮಾರನೇದಿನ ಬೆಟ್ಟದತಪ್ಪಲಿನಲ್ಲಿ ರಥೋತ್ಸವ,ಬಾಯಿ ಬೀಗಹಾಕಿಕೊಂಡು ಹರಕೆಸಲ್ಲಿಸುವುದು ಹಾಗೂಮಾರನೇ ದಿನಪಾರಟೋತ್ಸವ, ಲಕ್ಷ್ಮಣತೀರ್ಥ ನದಿಯಲ್ಲಿತೆಪ್ಪೋತ್ಸವ ಜರುಗಲಿದೆ.

ದನಗಳ ಜಾತ್ರೆಯೂನಡೆಯಲಿದ್ದು, ಇಡೀಜಾತ್ರೆಯ ಜವಾಬ್ದಾರಿಯನ್ನು ರಾಮೇ ನಹಳ್ಳಿಯಗ್ರಾಮಸ್ಥರು ನಡೆಸಿಕೊಂಡು ಬರುತ್ತಿದ್ದಾರೆ. ಜಾತ್ರೆ ಆರಂಭದ ದಿನದಿಂದ ವಾರಕಾಲ ರಾಮೇನಹಳ್ಳಿ ಗ್ರಾಮಸ್ಥರು ಮಾಂಸದಡುಗೆ ಮಾಡುವಂತಿಲ್ಲ.

ಕೊಳುವಿಗೆ ರಾಮಲಿಂಗೇಶ್ವರ ಜಾತ್ರೆ :

ನಾಗರಹೊಳೆ ಉದ್ಯಾನವನದಂಚಿನ ಲಕ್ಷ್ಮಣತೀರ್ಥ ನದಿ ದಂಡೆ ಮೇಲಿನ ಕೊಳುವಿಗೆಯ ರಾಮಲಿಂಗೇಶ್ವರಸ್ವಾಮಿಯ 18ನೇ ವರ್ಷದ ಜಾತ್ರಾ ಮಹೋತ್ಸವ ಮಾ.2ರಿಂದ 4 ದಿನಗಳವರೆಗೆ ನಡೆಯಲಿದೆ.ಕೊಳುವಿಗೆ, ಕೋಣನಹೊಸಹಳ್ಳಿ ಸೇರಿದಂತೆಸುತ್ತಮುತ್ತಲ ಹತ್ತಾರು ಹಳ್ಳಿಗಳು ಒಟ್ಟಾಗಿ ಸೇರಿ ಆಚರಿಸುವರು.

ಪಶ್ಚಿಮಾಭಿಮುಖವಾಗಿ ಹರಿಯುವಲಕ್ಷ್ಮಣತೀರ್ಥ ನದಿಯ ದಂಡೆಯ ಮೇಲೆವಿರಾಜಮಾನವಾಗಿರುವ ರಾಮಲಿಂಗೇಶ್ವರಸ್ವಾಮಿಗೆ ದೊಡ್ಡ ಇತಿಹಾಸವಿದ್ದು,ಶ್ರೀರಾಮವನವಾಸವಿದ್ದ ವೇಳೆ ಶಿವರಾತ್ರಿಹಬ್ಬದಂದು ಈ ನದಿದಂಡೆ ಮೇಲೆ ಮರಳುಲಿಂಗ ಪ್ರತಿಷ್ಠಾಪಿಸಿ ಪೂಜಿಸಿದ್ದರು.ಇದನ್ನು ಕಂಡುಕೊಂಡ ಚೋಳರಾಜರು ಇಲ್ಲಿರಾಮಲಿಂಗೇಶ್ವರ ದೇವಾಲಯವನ್ನುನಿರ್ಮಿಸಿದ್ದರೆಂಬ ಪ್ರತೀತಿ ಇದೆ. ಮಾ.2 ಬುಧವಾರ ಕೊಳುವಿಗೆ ಗ್ರಾಮದಲ್ಲಿ ಸ್ವಾಮಿಯ ಪಲ್ಲಕ್ಕಿ ಉತ್ಸವ, ಮಾ.6 ಗುರುವಾರ ಕೋಣನಹೊಸಹಳ್ಳಿಯ ಬಸವೇಶ್ವರಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಉತ್ಸವ ನಡೆಯಲಿದೆ.

ಕಲ್ಲೂರೇಶ್ವರ ಸ್ವಾಮಿ ಜಾತ್ರೆ :

ಹುಣಸೂರು-ನಾಗರಹೊಳೆ ರಸ್ತೆಯ 4 ಕಿ.ಮೀ. ದೂರದ ಹನಗೋಡು ಬಳಿಯ ಮಾದಳ್ಳಿಯ ಕೈಲಾಸಬೆಟ್ಟದಲ್ಲಿ ಕಲ್ಲುಬಂಡೆಗಳ ನಡುವೆ ವಿರಾಜಮಾನವಾಗಿರುವ ಕಲ್ಲೂರೇಶ್ವರಸ್ವಾಮಿಯ ಜಾತ್ರಾ ಮಹೋತ್ಸವವನ್ನು ಬೆಟ್ಟದ ಸುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗರು ಸೇರಿಆಚರಿಸುವರು. ಇಲ್ಲಿ ಮಾ.2ರಂದು ನಡೆಯುವ ಕೊಂಡೋತ್ಸವವೇ ದೊಡ್ಡವಿಶೇಷ. ಕಲ್ಲೂರೇಶ್ವರ ಬೆಟ್ಟ ಹತ್ತಲು 70 ಮೆಟ್ಟಿಲುಗಳಿವೆ. ಅಕ್ಕಪಕ್ಕದಲ್ಲೂ ಬೃಹತ್‌ ಬಂಡೆಗಳು ಅದರಲ್ಲೂ ಯಾವುದೇ ಆಸರೆ ಇಲ್ಲದೆ ನಿಂತಿರುವ ಬಂಡೆಗಳು ಕಣ್ಮನ ಸೆಳೆಯುತ್ತವೆ.

-ಸಂಪತ್‌ ಕುಮಾರ್‌

ಟಾಪ್ ನ್ಯೂಸ್

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.