ಕಾಫಿರ್ ರನ್ನು ಕೊಂದರೆ ಸ್ವರ್ಗ ಪ್ರಾಪ್ತಿ?: ಮುಸ್ಲಿಂ ವಿದ್ವಾಂಸರಿಗೆ ಸಿ.ಟಿ.ರವಿ ಪ್ರಶ್ನೆ
ಯೋಜನಾಬದ್ಧವಾಗಿ ಲವ್ ಜಿಹಾದ್ ಮತ್ತು ಹಿಂದೂ ಕಾರ್ಯಕರ್ತರ ಹತ್ಯೆ, ಧರ್ಮ ಗ್ರಂಥಗಳ ಬಗ್ಗೆ ಚರ್ಚೆ ಮಾಡೋಣ
Team Udayavani, Feb 28, 2022, 6:53 PM IST
ಶಿವಮೊಗ್ಗ : ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ಮನೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಸೋಮವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಅವರೊಂದಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮತ್ತಿತರ ಮುಖಂಡರು ಹಾಜರಿದ್ದರು.
ಸುದ್ದಿಗಾರರೊಂದಿ ಮಾತನಾಡಿದ ಅವರು, ಸರ್ಕಾರ ಕ್ರಮದ ಮೂಲಕ 24 ಗಂಟೆ ಒಳಗೆ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ಈಗಾಗಲೇ ಹತ್ತು ಜನ ಆರೋಪಿಗಳನ್ನು ಬಂಧಿಸಲಾಗಿದೆ.ಆರೋಪಿಗಳಿಗೆ ಕುಮ್ಮಕ್ಕು ನೀಡಿದವರು ಯಾರು, ಯಾವ ಸಂಘಟನೆ ಈ ಘಟನೆ ಹಿಂದೆ ಇದೆ ಎಂದು ಮೂಲಕ್ಕೆ ಕೈಹಾಕಿ ಪೊಲೀಸರು ತನಿಖೆ ನಡೆಸುತಿದ್ದಾರೆ ಎಂದರು.
ಹರ್ಷ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾದಾಗ ಮಾತ್ರ ನ್ಯಾಯ ಸಿಕ್ಕಂತಾಗುತ್ತದೆ.ಹರ್ಷ ಕೊಲೆ ಮಾತ್ರವಲ್ಲ, ರಾಜ್ಯದಲ್ಲಿ ಸಾಲು ಸಾಲು ಕೊಲೆಗಳು ನಡೆಯುತ್ತಿದೆ. ಯೋಜನಾಬದ್ಧವಾಗಿ ಹೇಗೆ ಲವ್ ಜಿಹಾದ್ ನಡೆಸುತ್ತಾರೆಯೋ ಹಾಗೆಯೇ ಯೋಜನಾ ಬದ್ಧವಾಗಿ ಹಿಂದು ಧರ್ಮದ ಕೆಲಸದಲ್ಲಿ ತೊಡಗಿದವರನ್ನು ಹತ್ಯೆ ಮಾಡಲಾಗುತ್ತಿದೆ.
ಕೇರಳದಲ್ಲಿ ಟಾರ್ಗೆಟ್ ಮಾಡಿ ಕೊಲೆ ಮಾಡುತ್ತಿರುವಂತೆ ಕರ್ನಾಟಕದಲ್ಲೂ ಹತ್ಯೆ ನಡೆಯುತ್ತಿದೆ. ನಮ್ಮಲ್ಲಿ ಪರೋಪಕಾರ ಮಾಡಿದರೆ ಸ್ವರ್ಗಕ್ಕೆ ಹೋಗುತ್ತಾರೆ ನಂಬಿಕೆ ಇದೆ.ಆದರೆ ಇಸ್ಲಾಂ ನಲ್ಲಿ ಖಾಫೀರ್ ರನ್ನು ಕೊಲೆ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.ಇದರಿಂದ ಪ್ರಚೋದನೆ ಸಿಗುತ್ತದೆ. ಈ ಬಗ್ಗೆ ಯಾಕೆ ಚರ್ಚೆಯಾಗುತ್ತಿಲ್ಲ, ಇದನ್ನು ಪ್ರಶ್ನಿಸಿದರೆ ಕೊಲೆ ಮಾಡಲಾಗುತ್ತಿದೆ.ಭಯದ ಮೂಲಕವೇ ಇಡೀ ಪ್ರಪಂಚವನ್ನು ವಶಪಡಿಸಿಕೊಳ್ಳಲು ನೋಡುತ್ತಾರೆ.ಮತಾಂದತೆಯೇ ಹರ್ಷ ಕೊಲೆಗೆ ಪ್ರಮುಖ ಕಾರಣ ಎಂದರು.
ಇದನ್ನೂ ಓದಿ : ಕಣ್ಣೆತ್ತಿ ನೋಡಿದವರ ಕಣ್ಣುಗಳನ್ನು ಕೀಳುವ ಕೆಲಸ ಮಾಡಬೇಕಾಗಿದೆ : ರೂಪಾಲಿ ನಾಯ್ಕ
ಎಲ್ಲ ಧರ್ಮಗ್ರಂಥಗಳನ್ನು ಚರ್ಚೆಗೊಳಪಡಿಸಬೇಕಿದೆ. ಕೊಲ್ಲುವುದು ಧರ್ಮವೇ ಅಲ್ಲ, ಕಾಯುವುದು ಧರ್ಮ. ಕೊಲ್ಲುವುದು ಮತಾಂಧತೆ, ಮತಾಂಧತೆ ಧರ್ಮಕ್ಕಿರುವ ವ್ಯತ್ಯಾಸ ಗುರುತಿಸದಿರುವುದು ದುರಂತ.ಯಾವ ಧರ್ಮದಲ್ಲಿ ಒಳ್ಳೆಯದಿದೆಯೋ ಅದನ್ನು ನಾವೂ ಅನುಸರಿಸೋಣ. ಎಲ್ಲ ಧರ್ಮ ಗ್ರಂಥಗಳ ಬಗ್ಗೆ ಚರ್ಚೆ ಮಾಡೋಣ. ಯಾವುದರಲ್ಲಿ ಒಳ್ಳೆಯದಿದೆಯೋ ಅದನ್ನು ಅನುಸರಿಸೋಣ. ಯಾವುದರಲ್ಲಿ ಮನುಕುಲಕ್ಕೆ ಒಳ್ಳೆಯದಾಗದ ವಿಷಯಗಳಿವೆಯೋ ಅವುಗಳನ್ನು ಜಗತ್ತಿನಿಂದಲೇ ಹೊರಹಾಕೋಣ. ಭಾರತದ ಮೂಲ ನಿವಾಸಿಗಳು ಮುಂದೆ ಅಸಾಹಯಕರಾಗುವ ಸ್ಥಿತಿ ಬರಲಿದೆ ಎಂದರು.
ದಾರುಲ್ ಇಸ್ಲಾಂ, ದಾರುಲ್ ಅರಬ್ ಎಂದರೇನು? ನಿಮ್ಮಲ್ಲಿ ಸ್ವರ್ಗಕ್ಕೆ ಹೋಗವ ದಾರಿ ಯಾವುದು.ಕಾಫಿರ್ ರನ್ನು ಕೊಂದರೆ ಸ್ವರ್ಗಪ್ರಾಪ್ತಿಯಂತೆ ನಿಮ್ಮ ಧರ್ಮದಲ್ಲಿ ನಿಜವೇ? ಈ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿ ನೋಡೋಣ ಎಂದು ಮುಸ್ಲಿಂ ವಿದ್ವಾಂಸರಿಗೆ ಸಿ.ಟಿ.ರವಿ ಪ್ರಶ್ನೆ ಮುಂದಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ
BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.