ವಿಭಿನ್ನ ಪೋಸ್ಟರ್ ನಲ್ಲಿ ‘ಅಘೋರ’ ಮಿಂಚು: ಈ ವಾರ ತೆರೆಗೆ
Team Udayavani, Mar 1, 2022, 3:02 PM IST
ಈಗಾಗಲೇ ತನ್ನ ಟೈಟಲ್, ಪೋಸ್ಟರ್, ಟೀಸರ್ ಮತ್ತು ಹಾಡುಗಳ ಮೂಲಕ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಹುತೇಕ ಹೊಸ ಪ್ರತಿಭೆಗಳ “ಅಘೋರ’ ಈ ವಾರ (ಮಾರ್ಚ್ 4) ತೆರೆಗೆ ಬರುತ್ತಿದೆ. ಕಳೆದ ಕೆಲ ವಾರಗಳಿಂದ ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, “ಅಘೋರ’ ಚಿತ್ರವನ್ನು ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಇನ್ನು “ಮೋಕ್ಷ ಸಿನಿಮಾಸ್’ ಬ್ಯಾನರ್‌ನಲ್ಲಿ ಪುನೀತ್ ಗೌಡ ನಿರ್ಮಿಸಿರುವ “ಅಘೋರ’ ಚಿತ್ರಕ್ಕೆ ಎನ್. ಎಸ್ ಪ್ರಮೋದ್ ರಾಜ್ ನಿರ್ದೇಶನವಿದೆ. “ಅಘೋರ’ ಚಿತ್ರದಲ್ಲಿ ಅವಿನಾಶ್, ಪುನೀತ್, ಅಶೋಕ್, ದ್ರವ್ಯಾ ಶೆಟ್ಟಿ, ರಚನಾ ದಶರಥ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಹೆಸರೇ ಹೇಳುವಂತೆ, ಇದೊಂದು ಹಾರರ್- ಥ್ರಿಲ್ಲರ್ ಕಥಾಹಂದರದ ಸಿನಿಮಾ. ಅಂದುಕೊಂಡ ರೀತಿಯಲ್ಲಿ, ಅದ್ಧೂರಿ ಮೇಕಿಂಗ್ ಮೂಲಕ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ಸಿನಿಮಾದಲ್ಲಿ ಹೇಳಿದ್ದೇವೆ. ಒಂದು ಮೇಸೆಜ್ ಕೂಡ ಸಿನಿಮಾದಲ್ಲಿದೆ. ನಿರ್ಮಾಪಕ ಪುನೀತ್ ಗೌಡ ಮೇಕಿಂಗ್ ವಿಷಯದಲ್ಲಿ ಎಲ್ಲೂ ರಾಜಿಯಾಗದೇ, ಯಾವುದಕ್ಕೂ ಕೊರತೆಯಾಗದ ರೀತಿಯಲ್ಲಿ ಕಥೆಯನ್ನು ಅದ್ಧೂರಿಯಾಗಿ ತೆರೆಗೆ ತರಲು ಸಾಕಷ್ಟು ಖರ್ಚು ಮಾಡಿದ್ದಾರೆ’ ಎನ್ನುವುದು ನಿರ್ದೇಶಕ ಎನ್. ಎಸ್ ಪ್ರಮೋದ್ ರಾಜ್ ಮಾತು.
ಇದನ್ನೂ ಓದಿ:ವಿರಾಟ್ ಕೊಹ್ಲಿ ಉತ್ತರಾಧಿಕಾರಿಯನ್ನು ಘೋಷಿಸಲು ಆರ್‌ಸಿಬಿ ಯಾಕೆ ವಿಳಂಬ ಮಾಡುತ್ತಿದೆ?
“ಇತ್ತೀಚಿನ ದಿನಗಳಲ್ಲಿ ಲವ್ ಮತ್ತು ಮಾಸ್ ಕಥಾಹಂದರದ ಸಿನಿಮಾಗಳೇ ಹೆಚ್ಚಾಗಿ ಬಿಡುಗಡೆಯಾಗುತ್ತಿದ್ದು, ಹಾರರ್-ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಇಂಥ ಸಮಯದಲ್ಲಿ “ಅಘೋರ’ ಥಿಯೇಟರ್ ಗೆ ಬರುತ್ತಿದ್ದು, ಪ್ರೇಕ್ಷಕರಿಗೆ “ಅಘೋರ’ ಹೊಸ ಅನುಭವ ಕೊಡುವಂಥ ಸಿನಿಮಾವಾಗಲಿದೆ’ ಎಂದು ವಿಶ್ವಾಸದ ಮಾತುಗಳನ್ನಾಡುತ್ತಾರೆ ನಟ ಕಂ ನಿರ್ಮಾಪಕ ಪುನೀತ್.
“ಅಘೋರ’ ಚಿತ್ರದಲ್ಲಿ ಹಿರಿಯ ನಟ ಅವಿನಾಶ್ ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪುನೀತ್, ಅಶೋಕ್, ದ್ರವ್ಯಾ ಶೆಟ್ಟಿ, ರಚನಾ ದಶರಥ್ ಮತ್ತಿತರರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ರಿಲೀಸ್‌ಗೂ ಮೊದಲೇ ಗಾಂಧಿನಗರದಲ್ಲಿ ಒಂದಷ್ಟು ಸೌಂಡ್ ಮಾಡುತ್ತಿರುವ ಹೊಸಬರ “ಅಘೋರ’ ತೆರೆಮೇಲೆ ಹೇಗಿರಲಿದೆ ಎಂಬ ಕುತೂಹಲಕ್ಕೆ ಈ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.