ಜನರ ಆಶಯಗಳಿಗೆ ಪೂರಕವಾದ ಬಜೆಟ್‌ ಮಂಡನೆಯಾಗಲಿ


Team Udayavani, Mar 2, 2022, 6:00 AM IST

ಜನರ ಆಶಯಗಳಿಗೆ ಪೂರಕವಾದ ಬಜೆಟ್‌ ಮಂಡನೆಯಾಗಲಿ

ಚೊಚ್ಚಲ ಬಜೆಟ್‌ ಮಂಡನೆಗೆ ಸಜ್ಜಾಗುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದೆ ಸಂಪನ್ಮೂಲ ಕ್ರೋಡೀಕರಣ, ಹೊಸ ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನದ ದೊಡ್ಡ ಸವಾಲು ಇದೆ.
ಕೊರೊನಾ ಲಾಕ್‌ಡೌನ್‌, ಪ್ರವಾಹದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಎರಡು ವರ್ಷಗಳಿಂದ ಸಂಕಷ್ಟಕ್ಕೀಡಾಗಿದ್ದು ಇದೀಗಷ್ಟೇ ಚೇತರಿ ಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ಆದರೆ ಜಿಎಸ್‌ಟಿ ಪರಿಹಾರ 2022ಕ್ಕೆ ಮುಕ್ತಾಯವಾಗುವ ಆತಂಕ, ಕೇಂದ್ರದ ಸಹಾಯಧನ, ತೆರಿಗೆ ಹಂಚಿಕೆ ಪ್ರಮಾಣ ಇಳಿಕೆ ಮತ್ತಿತರ ಕಾರಣಗಳಿಂದ 2022-23ನೇ ಸಾಲಿನ ಬಜೆಟ್‌ನಲ್ಲಿ ಹಣಕಾಸು ಹೊಂದಾಣಿಕೆ ಮಾಡಲು ಹರಸಾಹಸ ಮಾಡಬೇಕಾಗಿರುವುದಂತೂ ಹೌದು.

ಜತೆಗೆ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕಾರಣ ಈ ಬಾರಿಯ ಬಜೆಟ್‌ ಚುನಾವಣೆ ಬಜೆಟ್‌ ಎಂದೇ ಬಿಂಬಿಸ ಲಾಗಿದೆ. ಹೀಗಾಗಿ ಆಡಳಿತ ಪಕ್ಷದ ಶಾಸಕರಷ್ಟೇ ಅಲ್ಲದೆ ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೈಗಾರಿಕೆ, ಪ್ರವಾಸೋದ್ಯಮ ವಲಯದ ಬೇಡಿಕೆಗಳೂ ಹೆಚ್ಚಾಗಿವೆ. ಶಿಕ್ಷಣ, ಆರೋಗ್ಯ, ಆಹಾರ ಮತ್ತು ನಾಗರಿಕ ಪೂರೈಕೆ, ಇಂಧನ, ಕೃಷಿ, ತೋಟಗಾ ರಿಕೆ, ಕಂದಾಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌, ಸಮಾಜ ಕಲ್ಯಾಣ ಇಲಾಖೆಗಳ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲೇ ಇವೆ.

ರಾಜ್ಯದ ಪ್ರತೀ ಜಿಲ್ಲೆಯಿಂದಲೂ ಬಜೆಟ್‌ನಲ್ಲಿ ಹೊಸ ಯೋಜನೆಗಳು ಹಾಗೂ ಕಾರ್ಯಕ್ರಮ, ಈ ಹಿಂದೆ ಘೋಷಣೆಯಾದ ಯೋಜನೆಗಳಿಗೆ ಅನುದಾನ ಒದಗಿಸುವ ಬೇಡಿಕೆ ಇದೆ. ಬಜೆಟ್‌ ಪೂರ್ವಭಾವಿ ಸಭೆಗಳಲ್ಲಿ ಪಾಲ್ಗೊಂಡಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ, ಎಫ್ಕೆಸಿಸಿಐ, ರೈತ ಸಂಘ ಟನೆಗಳು ಹೀಗೆ ಪ್ರತಿಯೊಬ್ಬರೂ ತಮ್ಮ ತಮ್ಮ ವಲಯಕ್ಕೆ ಹೊಸ ಯೋಜನೆ ರೂಪಿಸಲು ಬೇಡಿಕೆ ಇಟ್ಟಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಬಜೆಟ್‌ ನಿರೀಕ್ಷೆಗಳ ದೊಡ್ಡ ಪಟ್ಟಿಯೇ ಇದೆ. ರಾಜ್ಯ ಬಿಜೆಪಿ ಸರಕಾರದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಹೊಣೆಗಾರಿಕೆಯೂ ಇದೆ. 2023 ಚುನಾ ವಣೆ ವರ್ಷ ಆಗಿರುವುದರಿಂದ ಪ್ರಣಾಳಿಕೆಯ ಎಲ್ಲ ಆಶ್ವಾಸನೆ ಈಡೇರಿಸ ಬೇಕು. ಹಾಗೆಯೇ ಇದು ಬೊಮ್ಮಾಯಿ ಅವರು ಮಂಡಿಸುತ್ತಿರುವ ಈ ಸರಕಾರದ ಕಡೆಯ ಮತ್ತು ಈ ಸರಕಾರವೇ ಅನುಷ್ಠಾನ ಮಾಡಬಹುದಾದ ಪೂರ್ಣ ಬಜೆಟ್‌.

ಮತ್ತೊಂದು ಬಜೆಟ್‌ ಮಂಡನೆಯ ಅವಕಾಶ ಇದ್ದರೂ ಅದು ಕೇವಲ ಲೇಖಾನುದಾನದ ರೀತಿ ಇರುತ್ತದೆ. ಜತೆಗೆ ಅನುಷ್ಠಾನ ಚುನಾವಣೆ ಅನಂತರದ ಸರಕಾರದ ಜವಾಬ್ದಾರಿಯಾಗಿರುತ್ತದೆ ಆದರೆ ಮುಂದಿನ ವರ್ಷ ಚುನಾವಣೆ ಇರುವುದರಿಂದ ಈ ಬಜೆಟ್‌ನಲ್ಲಿ ಘೋಷಣೆಯಾದ ಕಾರ್ಯಕ್ರಮ ಹಾಗೂ ಯೋಜನೆಗಳಿಗೆ ಮಹತ್ವವಿದೆ. ಇದರ ಜಾರಿ ಬಗ್ಗೆಯೂ ವಿಪಕ್ಷಗಳೂ ನಿಗಾ ವಹಿಸಿರುತ್ತವೆ.

ಅತ್ತ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ, ಕೇಂದ್ರದಿಂದ ಬರುವ ತೆರಿಗೆ ಹಂಚಿಕೆ ಹಾಗೂ ಅನುದಾನ, ಜಿಎಸ್‌ಟಿ ಪರಿಹಾರ ಮುಂದುವರಿಯದಿದ್ದರೆ ಎದುರಾಗಬಹುದಾದ ಸಂಕಷ್ಟ ಎಲ್ಲವನ್ನೂ ನೋಡಿ ಕೊಂಡೇ ಬಜೆಟ್‌ ರೂಪಿಸಬೇಕಾಗುತ್ತದೆ. ನಮ್ಮ ಬದ್ಧತೆ ಮತ್ತು ರಾಜ್ಯದ ಅಭಿವೃದ್ಧಿಯ ಬಗೆಗಿನ ಸ್ಪಷ್ಟತೆ ಬಜೆಟ್‌ನಲ್ಲಿ ತೋರಿಸುತ್ತೇವೆ ಎಂದು ಖುದ್ದು ಮುಖ್ಯಮಂತ್ರಿಯವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಹೀಗಾಗಿ ಹಣಕಾಸು ಖಾತೆಯ ಹೊಣೆಗಾರಿಕೆಯೂ ವಹಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಬಾರಿಯ ಬಜೆಟ್‌ ಸವಾಲೇ ಸರಿ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.