ಕ್ಷಿಪಣಿಗಳ ಸುನಾಮಿ; ಉಕ್ರೇನ್‌ನ ಹಲವು ನಗರಗಳ ಮೇಲೆ ರಷ್ಯಾದಿಂದ ಬಾಂಬ್‌ಗಳ ಸುರಿಮಳೆ

ಕೀವ್‌, ಖಾರ್ಕಿವ್‌ನಲ್ಲಿ ಕಟ್ಟಡಗಳು ಧ್ವಂಸ, ಅಪಾರ ಪ್ರಾಣಹಾನಿ

Team Udayavani, Mar 2, 2022, 6:50 AM IST

ಕ್ಷಿಪಣಿಗಳ ಸುನಾಮಿ; ಉಕ್ರೇನ್‌ನ ಹಲವು ನಗರಗಳ ಮೇಲೆ ರಷ್ಯಾದಿಂದ ಬಾಂಬ್‌ಗಳ ಸುರಿಮಳೆ

ಉಕ್ರೇನ್‌ನ ರಾಜಧಾನಿ ಕೀವ್‌ ನಗರದ ಹೊರವಲಯದಲ್ಲಿ ರಷ್ಯಾ ಪಡೆಗಳ ಶೆಲ್‌ ದಾಳಿಯಿಂದ ಹಾನಿಗೀಡಾಗಿರುವ ವಾಹನ.

ಕೀವ್‌/ಮಾಸ್ಕೋ: ಕ್ಷಣಮಾತ್ರದಲ್ಲಿ ಜೀವ ತೆಗೆಯುವ ಬಾಂಬ್‌ಗಳು, ದೇಹವನ್ನು ಛಿದ್ರ ಛಿದ್ರ ಮಾಡುವ ಕ್ಷಿಪಣಿಗಳು, ಎದೆನಡುಗಿಸುವಂಥ ಶಬ್ದ.. ಮಂಗಳವಾರ ಇಡೀ ದಿನ ಉಕ್ರೇನ್‌ನ ನಗರಗಳು ಅಕ್ಷರಶಃ ಬೆಚ್ಚಿಬಿದ್ದವು.

ರಷ್ಯಾ ಮತ್ತು ಉಕ್ರೇನ್‌ ನಡುವೆ ನಡೆದ ಮೊದಲ ಸುತ್ತಿನ ಸಂಧಾನ ಮಾತುಕತೆ ವಿಫ‌ಲವಾದ ಬೆನ್ನಲ್ಲೇ ಉಕ್ರೇನ್‌ನ ಹಲವು ನಗರಗಳ ಮೇಲೆ ಬಾಂಬ್‌ಗಳ ಮಳೆಯೇ ಸುರಿದಿದೆ.

ರಾಜಧಾನಿ ಕೀವ್‌, ಖಾರ್ಕಿವ್‌, ಮರಿಯುಪೋಲ್‌ ಸೇರಿದಂತೆ ಹಲವು ನಗರಗಳನ್ನು ಗುರಿಯಾಗಿಸಿಕೊಂಡು ಒಂದೇ ಸಮನೆ ದಾಳಿ ನಡೆಸಲಾಗಿದೆ. ಎಲ್ಲೆಡೆ ವ್ಯಾಕ್ಯೂಮ್‌ ಬಾಂಬ್‌ಗಳು, ಕ್ಷಿಪಣಿಗಳು, ಶೆಲ್‌ಗ‌ಳ ಶಬ್ದಗಳೇ ಅನುರಣಿಸತೊಡಗಿವೆ.

ಯುದ್ಧ ಆರಂಭವಾಗಿ 6 ದಿನಗಳು ಪೂರೈಸಿದ್ದು, ಮಂಗಳವಾರ ರಷ್ಯಾ ಮತ್ತು ಉಕ್ರೇನ್‌ ನಡುವೆ ಘೋರ ಕಾಳಗ ನಡೆದಿದೆ. ನಾಗ ರಿಕರಿರುವ ಕಟ್ಟಡಗಳನ್ನೂ ಬಿಡದೇ ಬಾಂಬ್‌ ಸ್ಫೋಟಿಸಲಾಗಿದೆ.

ರಾಜಧಾನಿ ಕೀವ್‌ನತ್ತ ದಂಡೆತ್ತಿ ಬರುತ್ತಿರುವ ರಷ್ಯಾ ಸೇನೆಯ ಉಪಗ್ರಹ ಚಿತ್ರಗಳು ಉಕ್ರೇನ್‌ ನಾಗರಿಕರ ನಿದ್ದೆಗೆಡಿಸಿದೆ. 40 ಮೈಲು ದೂರದವರೆಗೂ ರಷ್ಯಾದ ಸೇನೆ, ಯುದ್ಧ ಟ್ಯಾಂಕ್‌ಗಳು ಹಾಗೂ ಇತರೆ ವಾಹನಗಳು ಸಾಲಾಗಿ ಬರುತ್ತಿರುವ ಫೋಟೋಗಳು ವೈರಲ್‌ ಆಗಿವೆ. ಅಷ್ಟೇ ಅಲ್ಲ, ದಾರಿಯುದ್ದಕ್ಕೂ ಹಲವು ಕಟ್ಟಡಗಳು ಹೊತ್ತಿ ಉರಿಯುತ್ತಿರುವ ದೃಶ್ಯಗಳೂ ಎಲ್ಲರನ್ನೂ ಆತಂಕಕ್ಕೀಡುಮಾಡಿದೆ. ಸಂಧಾನ ಮಾತುಕತೆಯಲ್ಲಿ ರಷ್ಯಾದ ಷರತ್ತುಗಳಿಗೆ ನಾವು ಒಪ್ಪಬೇಕು ಎಂಬ ಸಲುವಾಗಿ ಈ ರೀತಿಯ ತಂತ್ರವನ್ನು ಅನುಸರಿಸಲಾ ಗುತ್ತಿದೆ ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ.

ಇದನ್ನೂ ಓದಿ:ಕೀವ್‌ ನಗರದಲ್ಲಿರುವ ಟವರ್‌ ಧ್ವಂಸ; ಎಲ್ಲ ಟಿವಿ ಚಾನೆಲ್‌ ಬಂದ್‌

10 ಮಂದಿ ಸಾವು: ಖಾರ್ಕಿವ್‌ನ ಸೆಂಟ್ರಲ್‌ ಸ್ಕ್ವೇರ್‌ ಮೇಲೆ ರಷ್ಯಾ ಸೇನೆ ಕ್ಷಿಪಣಿ ದಾಳಿ ಮಾಡಿದ್ದು, ಕನಿಷ್ಠ 10 ಮಂದಿ ಅಸುನೀಗಿದ್ದಾರೆ. ಅವಶೇಷಗಳಡಿಯಿಂದ 12ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. ಕೀವ್‌ನಲ್ಲಿ ಆಡಳಿತಾತ್ಮಕ ಕಟ್ಟಡವೊಂದರ ಮೇಲೆ ಶೆಲ್‌ ದಾಳಿ ನಡೆದಿದೆ. ಕಟ್ಟಡವು ಭಾಗಶಃ ಕುಸಿದುಬಿದ್ದಿದೆ. ಉಕ್ರೇನ್‌ನ ಆಗ್ನೇಯ ನಗರ ಮರಿಯುಪೋಲ್‌ಗ‌ೂ ರಷ್ಯಾ ಸೇನೆ ನುಗ್ಗಿದೆ.

ವೀಸಾಮುಕ್ತ ಎಂಟ್ರಿ: ಉಕ್ರೇನ್‌ ಪರ ಹೋರಾಡಲು ಬಯಸುವ ವಿದೇಶಿಯರಿಗೆ ಅಲ್ಲಿನ ಸರಕಾರ ಬಾಗಿಲು ತೆರೆ ದಿದೆ. ಅಂಥವರು ಯಾರೇ ಬಂದರೂ ಪ್ರವೇಶ-ವೀಸಾ ಪಡೆಯಬೇಕು ಎಂಬ ನಿಯಮವನ್ನು ರದ್ದು ಮಾಡಿದೆ.
ರಷ್ಯಾದ 12 ಮಂದಿ ಗಡೀಪಾರು: ವಿಶ್ವಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 12 ಮಂದಿಯನ್ನು ಅಮೆರಿಕ ಗಡೀಪಾರು ಮಾಡಿದೆ. ಈ ವ್ಯಕ್ತಿಗಳು ಗುಪ್ತಚರ ಚಟುವಟಿಕೆ ನಡೆಸುತ್ತಿದ್ದರೆ ನ್ನುವುದು ಅಮೆರಿಕದ ಆರೋಪ. “ರಷ್ಯಾ ಈ ತಂಡ ಗುಪ್ತಚರ ಕೆಲಸದಲ್ಲಿ ನಿರತವಾಗಿತ್ತು. ಇದು ಅಮೆರಿಕದ ರಾಷ್ಟ್ರೀಯ ಭದ್ರತೆಗೇ ಸವಾಲು. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಹೇಳಿದೆ.

ಕಟ್ಟಡಗಳಲ್ಲಿ ನಿಗೂಢ ಚಿಹ್ನೆಗಳು ಪತ್ತೆ!
ಯುದ್ಧ ಮುಂದುವರಿದಿರುವಂತೆಯೇ ಉಕ್ರೇನ್‌ನ ಕೆಲವು ಗಗನಚುಂಬಿ ಕಟ್ಟಡಗಳ ತುತ್ತತುದಿಯಲ್ಲಿ ಹಾಗೂ ಗ್ಯಾಸ್‌ ಪೈಪ್‌ಗ್ಳಲ್ಲಿ ನಿಗೂಢ ಚಿಹ್ನೆಗಳು ಪತ್ತೆಯಾಗಿವೆ. ಕಡುಕೆಂಪು ಬಣ್ಣದಲ್ಲಿ ಎಕ್ಸ್‌ (ಗಿ) ಎಂದು ಬರೆಯಲಾಗಿದೆ. ರಷ್ಯಾದ ಸೈನಿಕರು ಯಾವ ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ನಡೆಸಬೇಕು ಎಂಬುದರ ಸೂಚಕವಾಗಿ ಈ ಚಿಹ್ನೆ ಗಳನ್ನು ಹಾಕಿರಬಹುದೇ? ರಷ್ಯಾಗೆ ಯಾರೋ ವೈಮಾನಿಕ ದಾಳಿಗೆ ಈ ಚಿಹ್ನೆಗಳ ಮೂಲಕ ಸುಳಿವು ಕೊಡುತ್ತಿದ್ದಾ ರೆಯೇ ಎಂಬ ಸಂದೇಹ ಮೂಡಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ವಾಸಿಸುತ್ತಿರುವವರು ಕೂಡಲೇ ತಮ್ಮ ಕಟ್ಟಡಗಳಲ್ಲಿ ಇಂಥ ಚಿಹ್ನೆಯಿದೆಯೇ ಎಂದು ಪರೀಕ್ಷಿಸಿ, ಅದನ್ನು ಅಳಿಸಿ ಹಾಕಲು ಯತ್ನಿಸಿ, ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ.

ಸಮರಾಂಗಣದಲ್ಲಿ
– ಈ ಕೂಡಲೇ ಉಕ್ರೇನ್‌ ಆಕ್ರಮಣ ನಿಲ್ಲಿಸಿ- ರಷ್ಯಾಕ್ಕೆೆ ನ್ಯಾಟೋ ಮುಖ್ಯಸ್ಥರಿಂದ ಎಚ್ಚರಿಕೆ
– ಕೀವ್‌, ಖಾರ್ಕಿವ್‌ ಸೇರಿ ಇತರ ನಗರಗಳಿಗೆ ವೈಮಾನಿಕ ದಾಳಿಯ ಅಲರ್ಟ್‌
– ಉಕ್ರೇನ್‌ನ ದಕ್ಷಿಣದಲ್ಲಿನ ಖೇರ್‌ಸನ್‌ ನಗರವನ್ನು ಸುತ್ತುವರಿದ ಪುತಿನ್‌ ಪಡೆ
– ಖಾರ್ಕಿವ್‌ನಲ್ಲಿ ವಸತಿ ಕಟ್ಟಡಗಳು, ಸೆಂಟ್ರಲ್‌ ಸ್ಕ್ವೇರ್‌ ಮೇಲೆ ಕ್ಷಿಪಣಿ ದಾಳಿ-ಕನಿಷ್ಠ 10 ಸಾವು
– ಓಕ್ಟಿಕಾದ ಸೇನಾನೆಲೆ ಮೇಲೆ ರಷ್ಯಾ ದಾಳಿ- 70 ಉಕ್ರೇನ್‌ ಸೈನಿಕರ ಸಾವು
– ನಿರಂತರ ಶೆಲ್‌ ದಾಳಿಗೆ ಸಂಪೂರ್ಣ ಹಾನಿಗೀಡಾದ ಮರಿಯಪೋಲ್‌ ನಗರ
– ಯುದ್ಧ ಮುಂದುವರಿಸಿದರೆ ರಷ್ಯಾ ಮೇಲೆ ಇನ್ನಷ್ಟು ನಿರ್ಬಂಧ ವಿಧಿಸುವುದಾಗಿ ಪೋಲೆಂಡ್‌ ಬೆದರಿಕೆ
– ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತು ಪಡಿಸಿ- ಐರೋಪ್ಯ ಒಕ್ಕೂಟಕ್ಕೆ ಉಕ್ರೇನ್‌ ಅಧ್ಯಕ್ಷ
– ನಮ್ಮ ಗುರಿ ಮುಟ್ಟುವವರೆಗೂ ಉಕ್ರೇನ್‌ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ರಷ್ಯಾ ಘೋಷಣೆ

ಟಾಪ್ ನ್ಯೂಸ್

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

1-tume

Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Uppinangady: ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

11

Mangaluru: ಗಾಂಜಾ ಮಾರಾಟ; ಇಬ್ಬರ ಬಂಧನ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.