ಕಲೆ-ಸಾಹಿತ್ಯಕ್ಕೆ ಪ್ರೋತ್ಸಾಹ ಅಗತ್ಯ: ನರಿಬೋಳ
Team Udayavani, Mar 2, 2022, 11:00 AM IST
ಜೇವರ್ಗಿ: ಪ್ರತಿಯೊಬ್ಬರಲ್ಲಿಯೂ ಒಂದೊಂದು ಪ್ರತಿಭೆ ಹಾಗೂ ಕಲೆ ಅಡಗಿರುತ್ತದೆ. ಅದನ್ನು ಹೊರತರುವ ಪ್ರಯತ್ನ ಆಗಬೇಕಿದೆ. ಕಲೆ ಇಲ್ಲದಿದ್ದರೇ ಮನುಷ್ಯ ಮೃಗವಾಗುತ್ತಾನೆ. ಇನ್ನೊಬ್ಬರ ಸಾಧನೆ ಕಂಡು ಅಸೂಹೆ ಪಡದೇ ಪ್ರೋತ್ಸಾಹ ನೀಡುವ ಕೆಲಸವಾಗಬೇಕು ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.
ತಾಲೂಕಿನ ಹರವಾಳ ಗ್ರಾಮದ ಶ್ರೀ ಗುರು ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಶಿವಗುರು ಸಿದ್ಧೇಶ್ವರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಸಾಹಿತಿ ಮಲ್ಲಣ್ಣಗೌಡ ಶಿವರಾಯಗೌಡ ನಾಗರವತ್ ಹರವಾಳ ರಚಿಸಿದ ಚಪಲ ಕಾದಂಬರಿ, ಸಂತಿ ಸರದಾರ ನಾಟಕ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ವಿನಮೃತೆಗೆ ಬಹಳ ಬೆಲೆ ಇದ್ದು, ಪ್ರತಿ ಸಾಹಿತಿಯಲ್ಲೂ ವಿನಮೃತೆ ಅತ್ಯವಶ್ಯಕ. ಸಾಹಿತ್ಯ ಓದಿನಿಂದ ಮಾತ್ರ ಮನಸ್ಸನ್ನು ಸಂಸ್ಕಾರಗೊಳಿಸಲು ಸಾಧ್ಯ. ಕಂಪ್ಯೂಟರ್ ಯುಗದಲ್ಲೂ ಮಲ್ಲನಗೌಡ ನಾಗರವತ್ ಅವರ ಕಾದಂಬರಿ, ನಾಟಕ ಪುಸ್ತಕ ಬಿಡುಗಡೆ ಮಾಡಿರುವುದು ಶ್ಲಾಘನೀಯ. ಹೊಸ ಕಾಲದಲ್ಲಿ ಪುಸ್ತಕದ ಸ್ವರೂಪ ಮತ್ತು ಅಸ್ತಿತ್ವ ತುಂಬಾ ಬೇರೆಯಾಗಿದೆ. ಕ್ಷಣಾರ್ಧದಲ್ಲಿ ನೂರಾರು ಪುಟಗಳ ಪುಸ್ತಕಗಳನ್ನು ಅಂತರ್ ಜಾಲದಲ್ಲಿ ಮುಳಿಗಿಸಿ ಬಿಡುವ ಈ ದಿನಗಳಲ್ಲಿ ಪುಸ್ತಕಗಳು ಉಳಿಯಬೇಕು ಎಂದರು.
ಜೀವನದಲ್ಲಿ ಅನುಭವಿಸಿ ಗ್ರಂಥ ರಚಿಸಿರುವ ಮಲ್ಲನಗೌಡ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಸಂಗೀತ, ಸಾಹಿತ್ಯ ಕಲಾ ಸಂಘಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಅಗತ್ಯ ಅನುದಾನ ನೀಡಲಾಗುತ್ತಿದೆ. ಶ್ರೀ ಶಿವಗುರು ಸಿದ್ಧೇಶ್ವರ ಸಾಂಸ್ಕೃತಿಕ ಕಲಾ ಸಂಘಕ್ಕೆ ಸಹಾಯ, ಸಹಕಾರ ನೀಡುವ ಭರವಸೆ ನೀಡಿದರು.
ಸಾಹಿತಿ ಪ್ರೊ| ಶಿವರಾಜ ಪಾಟೀಲ ಮಾತನಾಡಿ, ಕ್ರಿಯಾಶೀಲತೆ ಮತ್ತು ಅಧ್ಯಯನ ಶೀಲತೆಯಿಂದ ಯಾವುದೇ ಕ್ಷೇತ್ರದಲ್ಲಿ ಪ್ರಾವಿಣ್ಯತೆ ಸಾಧಿ ಸಬಹುದು ಎಂದರು. ಲೇಖಕ ಮಲ್ಲಣ್ಣಗೌಡ ನಾಗರವತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ನಾಗರಾವತ್ ನೇತೃತ್ವ, ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ರಾಜಶೇಖರ ಸೀರಿ, ಷಣ್ಮುಖಪ್ಪಗೌಡ ಹಿರೇಗೌಡ, ಶಿವಣಗೌಡ ಹಂಗರಗಿ, ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ, ಕಸಾಪ ಅಧ್ಯಕ್ಷ ಎಸ್. ಕೆ.ಬಿರಾದಾರ, ಹಣಮಂತ್ರಾಯ ಹೂಗಾರ, ಸಾಹಿತಿ ರವೀಂದ್ರ ಪಾಟೀಲ, ಪ್ರಭಾಕರ ರಬಶೆಟ್ಟಿ, ಗ್ರಾಪಂ ಅದ್ಯಕ್ಷ ಆಕಾಶ ಗಣಜಲಖೇಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸತ್ಕರಿಸಲಾಯಿತು. ಸಂಜೆ ಮಲ್ಲಣ್ಣ ಶಿವರಾಯಗೌಡ ಹರವಾಳ ರಾಯಚೂರು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು. ಲಕ್ಷ್ಮೀಕಾಂತ ನಾಗರವತ್ ಸ್ವಾಗತಿಸಿದರು, ಸಿದ್ಧಣ್ಣ ಕೊತಲಿ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.