ಪೇಟಿಯಂ ಮೂಲಕ ಹಣ ಬಂದಿದೆ ಎಂದು ವಂಚನೆ
Team Udayavani, Mar 2, 2022, 12:41 PM IST
ಬೆಂಗಳೂರು: “ನನ್ನ ತಪ್ಪಿನಿಂದಾಗಿ ಸಾವಿರಾರು ರೂ. ತಮ್ಮ ಖಾತೆಗೆ ಜಮೆಯಾಗಿದ್ದು, ದಯವಿಟ್ಟು ವಾಪಸ್ ಕಳುಹಿಸಿ’ ಎಂದು ಕರೆ ಮಾಡಿದ ಸೈಬರ್ ವಂಚಕ, ನಗರದ ವ್ಯಕ್ತಿಯೊಬ್ಬರ ಖಾತೆಯಿಂದ 28 ಸಾವಿರ ರೂ. ದೋಚಿದ್ದಾನೆ.
ಈ ಸಂಬಂಧ ಹಣ ಕಳೆದುಕೊಂಡ ಮಾರುತಿನಗರದ ಎನ್.ಎಲ್.ರಾಹುಲ್ ಎಂಬುವವರು ದಕ್ಷಿಣ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೆಲದಿನಗಳ ಹಿಂದೆ ಅನಿಲ್ ಕುಮಾರ್ ಎಂಬಾತ ರಾಹುಲ್ ಗೆ ಕರೆ ಮಾಡಿ, “ನನ್ನ ತಪ್ಪಿನಿಂದಾಗಿ ನಿಮ್ಮ ಖಾತೆಗೆ ಹಂತ-ಹಂತವಾಗಿ ಪೇಟಿಯಂ ಮೂಲಕ 26,400 ರೂ. ಜಮೆಯಾಗಿದೆ’ ಎಂದು ನಂಬಿಸಿದ್ದಾನೆ.
ಅಲ್ಲದೆ, ಪೇಟಿಯಂ ಖಾತೆಗೆ ಹಣ ಬಂದಿದೆ ಎಂದು ಸಂದೇಶ ಕಳುಹಿಸಿದ್ದಾನೆ. ಅದನ್ನು ನಂಬಿದ ರಾಹುಲ್, ಆರೋಪಿ ಕಳುಹಿಸಿದ ಲಿಂಕ್‌ನ ಪೇ ಬಟನ್ ಅನ್ನು ಕ್ಲೀಕ್ ಮಾಡುತ್ತಿದ್ದಂತೆಹಂತ-ಹಂತವಾಗಿ 28,258 ರೂ. ಕಡಿತಗೊಂಡಿದೆ. ಅದರಿಂದ ಆತಂಕಗೊಂಡರಾಹುಲ್, ಆರೋಪಿಗೆ ಕರೆ ಮಾಡಿದಾಗ ಸ್ವೀಚ್ಡ್ ಆಫ್ ಆಗಿದೆ ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ. ತನಿಖೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.