ರೈತರ ಕೆಲಸ ಮಾಡಿಕೊಡದೇ ಸುಳ್ಳು ಹೇಳಿದ್ರೆ ಕ್ರಮ
Team Udayavani, Mar 2, 2022, 1:35 PM IST
ಕೊಳ್ಳೇಗಾಲ: ರೈತರು, ಜನಸಾಮಾನ್ಯರ ಕೆಲಸ ಮಾಡಿಕೊಡುವಲ್ಲಿ ಅಧಿಕಾರಿಗಳು ಸುಳ್ಳು ಹೇಳಿದರೆಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಉಸ್ತುವಾರಿ ಸಚಿವ ವಿ.ಸೋಮಣ್ಣ ಎಚ್ಚರಿಕೆ ನೀಡಿದರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿಯ ಪ್ರಯುಕ್ತ ಪೂಜೆಗೆ ತೆರಳುವಮುನ್ನ ನಗರದ ವಸತಿ ಗೃಹಕ್ಕೆ ಆಗಮಿಸಿದ್ದ ಸಚಿವರು,ಸಭಾಂಗಣದಲ್ಲಿ ರೈತರ ಸಭೆ ನಡೆಸಿ, ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾತನಾಡಿದರು.
ಕೆರೆಗೆ ನೀರು ಹರಿಸಲು ಮೀನಮೇಷ: ಸಭೆ ಆರಂಭಕ್ಕೂ ಮುನ್ನ ಕಬ್ಬು ಬೆಳೆಗಾರರ ಸಂಘದಜಿಲ್ಲಾ ಕಾರ್ಯಾಧ್ಯಕ್ಷ ಭಾಗ್ಯರಾಜ್ ಮಾತನಾಡಿ,ಜಿಲ್ಲೆಯ 20 ಕೆರೆ ಪೈಕಿ 19 ತುಂಬಿಸಿದ್ದು, ಉಡಿಗಾಲದ ಕೆರೆಗೆ ನೀರು ಹರಿಸಲು ಅಧಿಕಾರಿಗಳುಮೀನಮೇಷ ಎಣಿಸುತ್ತಿದ್ದಾರೆ. ಕೂಡಲೇ ಕೆರೆಗೆನೀರು ತುಂಬಿಸಬೇಕು. ಬೇಸಿಗೆ ಸಮೀಪಿಸುತ್ತಿದ್ದು,ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ.ನಿರ್ವಹಣೆಯಲ್ಲಿ ಜಿಲ್ಲಾಡಳಿತ ವಿಫಲವಾಗಿದೆಎಂದು ದೂರಿದರು.
ರೈತ ಮುಖಂಡರ ಸಮಸ್ಯೆ ಆಲಿಸಿದ ಸಚಿವರು,ಅಧಿಕಾರಿಗಳ ಮೇಲೆ ಗರಂ ಆದರು. ಇವತ್ತು ಶಿವರಾತ್ರಿ ನಾನು ಸುಳ್ಳು ಹೇಳುವುದಿಲ್ಲ. ಅಧಿಕಾರಿಗಳುಅದೇ ರೀತಿ ಸುಳ್ಳು ಹೇಳಬಾರದು. ಒಂದು ಕೆರೆಭರ್ತಿ ಮಾಡುವ ಉದ್ದೇಶ ಏನು ಎಂದು ಸಚಿವರು ಪ್ರಶ್ನಿಸಿದರು.
ಹಣ ಮಂಜೂರು ಭರವಸೆ: ಕೂಡಲೇ ಜಿಲ್ಲಾಧಿಕಾರಿ, ಮೈಸೂರು ಮುಖ್ಯ ಎಂಜಿನಿಯರ್ ಶಂಕರೇಗೌಡ ಮತ್ತು ಸಿಬ್ಬಂದಿ ಉಡಿಗಾಲದ ಕೆರೆಗೆ ನೀರು ಹರಿಸಲು ಸ್ಥಳ ಪರಿಶೀಲನೆ ನಡೆಸಬೇಕು. ಕುಡಿಯುವ ನೀರು ಪೂರೈಕೆ ಹಾಗೂ ಕೆರೆಗೆ ನೀರು ತುಂಬಿಸುವುದು ಸೇರಿ ಅಂದಾಜು ವೆಚ್ಚ ತಯಾರಿಸಿ ಒಂದು ದಿನದ ಒಳಗಾಗಿ ನೀಡಿದರೆ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಹಣ ಮಂಜೂರು ಮಾಡಿಸಿಕೊಡುವ ಭರವಸೆ ನೀಡಿದರು.
ವರದಿ ನೀಡಿ: ಕೆರೆಗಳ ಪರಿಶೀಲನೆ ವರದಿಯನ್ನು ಬುಧವಾರ ಅಥವಾ ಗುರುವಾರದೊಳಗೆ ನೀಡಬೇಕೆಂದು ಅಧಿಕಾರಿಗಳಿಗೆ ಗಡುವು ನೀಡಿದ ಸಚಿವರು, ಇದರಲ್ಲಿ ತಾರತಮ್ಯ ಎಸಗಿದರೆ ಮುಂದಿನ ಕ್ರಮಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿದ್ಯುತ್ ಸಮಸ್ಯೆ: ರೈತ ಮುಖಂಡರ ಸಭೆಯ ಬಳಿಕ ಕೃಷಿ ಪಂಪ್ಸೆಟ್ವುಳ್ಳ ಮುಖಂಡರೊಂದಿಗೆಸಭೆ ನಡೆಸಿ, ಸರ್ಕಾರದ ನಿಯಮದಂತೆ ದಿನಕ್ಕೆಒಂದೇ ಪಾಳಿಯಲ್ಲಿ 7 ಗಂಟೆ ವಿದ್ಯುತ್ ಪೂರೈಕೆಮಾಡಬೇಕು. ಆದರೆ, ತಾಲೂಕಿನಲ್ಲಿ ಆ ರೀತಿಮಾಡುತ್ತಿಲ್ಲ ಎಂದು ರೈತರ ಮಾತನ್ನು ಆಲಿಸಿದ ಸಚಿವರು, ಬುಧ ವಾರದಿಂದಲೇ ಒಂದೇ ಪಾಳಿಯದಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕೆಂದು ಸ್ಥಳದಲ್ಲೇ ಇದ್ದ ಸೆಸ್ಕ್ ಕಾರ್ಯಪಾಲಕ ಅಭಿಯಂತರ ಪ್ರೀತಂ ಅವರಿಗೆ ಖಡಕ್ ಸಂದೇಶ ನೀಡಿದರು.
ಮನವಿ ಪಡೆಯಲು ನಿರಾಕರಣೆ: ಪಟ್ಟಣದ ನಗರಸಭೆಗೆ ನಗರೋತ್ಥಾನ ಯೋಜನೆಯಿಂದ 30 ಕೋಟಿ ರೂ. ಹಣ ಬಂದಿದ್ದು, ಅದನ್ನು ಬೋರ್ಡ್ತೀರ್ಮಾನದಂತೆ ಕ್ರಮಕೈಗೊಳ್ಳಬೇಕೆಂದು ಶಾಸಕರಮಾತಿಗೆ ಕಿವಿಗೊಡಬಾರದೆಂದು ನಗರಸಭೆ ಅಧ್ಯಕ್ಷೆಸುಶೀಲಾ ನೇತೃತ್ವದಲ್ಲಿ ಸದಸ್ಯರು ಸಚಿವರಿಗೆ ಮನವಿಕೊಡಲು ಬಂದಿದ್ದರು. ಆದರೆ, ಸಚಿವರು ತಿರಸ್ಕಾರ ಮಾಡಿದ್ದರಿಂದ ಅಸಮಾಧಾನಗೊಂಡು ಸಭಾಂಗಣದಿಂದ ಹೊರ ನಡೆದರು.
ಪ್ರತಿಕ್ರಿಯೆ: ನಗರಸಭಾ ಸದಸ್ಯರ ಅಸಮಾಧಾನದ ಬಗ್ಗೆ ಸಚಿವ ಸೋಮಣ್ಣ ಅವರನ್ನು ಪ್ರಶ್ನಿಸಿದಾಗ, ಅಧಿ
ಕಾರಿಗಳ ಸಭೆ ನಡೆಯುವ ವೇಳೆ ಬಂದಾಗ ನಾನು ಏನು ಹೇಳಬೇಕು. ನೀವು ಊಹಿಸಿಕೊಳ್ಳಿ ಎಂದು ಹೇಳಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದರು.
ಸಭೆಯಲ್ಲಿ ಶಾಸಕ ಎನ್.ಮಹೇಶ್, ಹನೂರು ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಎಸ್ಪಿ ಶಿವಕುಮಾರ್, ಎಎಸ್ಪಿ ಸುಂದರರಾಜ್, ಜಿಪಂ ಸಿಇಒ ಗೀತಾ, ಮಾಜಿ ಶಾಸಕ ಜಿ.ಎ ನ್.ನಂಜುಂಡಸ್ವಾಮಿ, ಡಿವೈಎಸ್ಪಿ ನಾಗರಾಜು, ಜಿಲ್ಲಾಯೋಜನಾಧಿಕಾರಿ ಸುರೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Road Mishap: ಬೈಕ್ – ಆಂಬ್ಯುಲೆನ್ಸ್ ನಡುವೆ ಅಪಘಾತ: ಸವಾರ ಸಾವು
Kollegala: ಮರಳೆಕಾಯಿ ತಿಂದು ವಾಂತಿ-ಭೇದಿ; 13 ಜನರು ಆಸ್ಪತ್ರೆಗೆ ದಾಖಲು
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿ ಆನೆ ದಾಳಿ:ವಿಡಿಯೋ ವೈರಲ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.