ಅಪ್ಪಟ ಅಭಿಮಾನಿ: ಪತ್ನಿ, ಐವರು ಮಕ್ಕಳೊಂದಿಗೆ ಅಪ್ಪು ಸ್ಮಾರಕಕ್ಕೆ ಪಾದಯಾತ್ರೆ ಹೊರಟ ವಕೀಲ

Team Udayavani, Mar 2, 2022, 2:58 PM IST

ಅಪ್ಪಟ ಅಭಿಮಾನಿ: ಪತ್ನಿ, ಐವರು ಮಕ್ಕಳೊಂದಿಗೆ ಅಪ್ಪು ಸ್ಮಾರಕಕ್ಕೆ ಪಾದಯಾತ್ರೆ ಹೊರಟ ವಕೀಲ

ಕುಷ್ಟಗಿ: ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ  ವಿಜಯಪುರದ ವಕೀಲರೊಬ್ಬರು ಪತ್ನಿ ಸೇರಿದಂತೆ ಐವರು ಮಕ್ಕಳೊಂದಿಗೆ ವಿಜಯಪುರದಿಂದ ಬೆಂಗಳೂರು ಅಪ್ಪು ಸ್ಮಾರಕಕ್ಕೆ ಪಾದಯಾತ್ರೆ ಕೈಗೊಂಡಿರುವುದು ಗಮನಾರ್ಹ ಎನಿಸಿದೆ.

ವಕೀಲ‌ ವೃತ್ತಿಯಲ್ಲಿರುವ‌ ಧರೆಯಪ್ಪ ಅರ್ದಾವೂರ ತಮ್ಮ‌ ಸಂಸಾರ ಸಮೇತ ಕಳೆದ ಫೆ.25ರಿಂದ ವಿಜಯಪುರದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಈಗಾಗಲೇ ಐದು ದಿನ ಕ್ರಮಿಸಿದ್ದು, ಬೇಸಿಗೆ ಬಿಸಿಲ ತಾಪಮಾನದ ಹಿನ್ನೆಲೆಯಲ್ಲಿ ಆದಷ್ಟು ಬೆಳಗ್ಗೆ,  ಸಂಜೆ ಪಾದಯಾತ್ರೆ ನಡೆಯುತ್ತಿದ್ದಾರೆ ಪ್ರತಿ ದಿನ 25ಕಿ.ಮೀ ದಿಂದ 30 ಕಿ.ಮೀ. ನಿಗದಿಗೊಳಿಸಿದ್ದಾರೆ. ಬುಧವಾರ ಬೆಳಗ್ಗೆ ಕುಷ್ಟಗಿಯ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹೋಗುವಾಗ ಅಪ್ಪು ಅಭಿಮಾನಿಗಳು ಪಾದಯಾತ್ರಿಗಳನ್ನು ಸನ್ಮಾನಿಸಿ, ಹಣ್ಣು, ಎಳೆನೀರು ನೀಡಿ ಸತ್ಕರಿಸಿದರು. ನಂತರ ಅವರೊಂದಿಗೆ ಸಂಗೊಳ್ಳಿ ರಾಯಣ್ಣ ಯುವ ಸೇನೆಯ ಮಂಜು ನಾಲಗಾರ, ದೊಡ್ಮನೆ ಅಭಿಮಾನಿ ಬಳಗದ ಅಧ್ಯಕ್ಷ ಮುತ್ತಣ್ಣ ಬಾಚಲಾಪೂರ, ಅಪ್ಪು ಅಭಿಮಾನಿ ಸಂಘದ ಶಂಕರ್ ಮಿಸ್ಕೀನ್, ಪ್ರಮೋದ್ ಬಡಿಗೇರ, ಅಮರೇಶ ತಳವಗೇರಾ ಮೊದಲಾದವರು ಹೆಜ್ಜೆ ಹಾಕಿ‌ ಪ್ರೋತ್ಸಾಹಿಸಿದರು.

ಇದೇ ವೇಳೆ ಮಾತನಾಡಿದ ಪಾದಯಾತ್ರಿ ಧರಿಯಪ್ಪ ಅರ್ದಾವೂರ ನಮ್ಮ‌ ನೆಚ್ಚಿನ ಕಣ್ಮಣಿ ಪುನೀತ್ ರಾಜಕುಮಾರ್ ಅವರು  46ನೇ ವರ್ಷದಲ್ಲಿ ಇಹಲೋಕ ತ್ಯಜಿಸಿರುವುದು ನಮಗೆ ನೋವುಂಟು ಮಾಡಿದೆ. ಅಪ್ಪು ಅವರು ಮಾಡಿರುವ ಸಮಾಜಮುಖಿ‌ ಸೇವೆಯನ್ನು ಸ್ಮರಿಸಿದ ಅವರು  ಸರ್ಕಾರಿ ಶಾಲೆಗಳ‌ ಸಬಲೀಕರಣ, ನೇತ್ರದಾನ, ಮೃತ ನಂತರ ಅಂಗಾಂಗ ದಾನದ ಮಹತ್ವ ಹಾಗೂ ಮಾರ್ಚ 17 ರಂದು ಬಿಡುಗಡೆಯಾಗುವ ಜೇಮ್ಸ್ ಚಲನ ಚಿತ್ರ ಶುಭ ಹಾರೈಸಿ ಈ ಪಾದಯಾತ್ರೆ ಕೈಗೊಂಡಿದ್ದು ಸಾಧ್ಯವಾದಷ್ಟು ಮಾ.17 ಕ್ಕೆ ಬೆಂಗಳೂರು ತಲುಪುವ ಉದ್ದೇಶವಿದೆ. ನನ್ನೊಂದಿಗೆ ಪತ್ನಿ ವಿದ್ಯಾರಾಣಿ ಮಕ್ಕಳಾದ ಲಕ್ಷ್ಮೀಕಾಂತ, ಸಮರ್ಥ, ಸೌಜನ್ಯ, ಸೋನಾಲಿ, ಶ್ರಾವಣಿ ಹೆಜ್ಜೆ ಹಾಕಿದ್ದು, ಗೆಳೆಯ ಸಾಬಣ್ಣ ಜೊತೆಗೆ ಇದ್ದಾರೆ.

ಅಪ್ಪು ಕೊಟ್ಟ ಆ… 11 ಸಾವಿರ:

ಕಳೆದ ನವೆಂಬರ್ 11, 2011ಕ್ಕೆ ಧರೆಯಪ್ಪ ಅರ್ದಾವೂರ  ಹಾಗೂ ವಿದ್ಯಾರಾಣಿ ಮದುವೆಯಾಗಿ ಬೆಂಗಳೂರಿನ ಅಪ್ಪು ನಿವಾಸಕ್ಕೆ ಹೋಗಿದ್ದರು. ಆಗ ಅಪ್ಪು ಆತ್ಮೀಯವಾಗಿ ಮಾತನಾಡಿ ಕಾಣಿಕೆಯ ಪ್ಯಾಕ್ ನೀಡಿ ಅದನ್ನು ಇಲ್ಲಿ ತೆರೆಯಬೇಡಿ ನಿಮ್ಮ ಊರಲ್ಲಿ ತೆರೆಯಿರಿ‌ ಎಂದು ಹೇಳಿದ್ದರು. ಆಗ ಅಪ್ಪು ಹೇಳಿದಂತೆ ಮಾಡಿದ್ದ ಧರೆಯಪ್ಪ ದಂಪತಿ ಕಾಣಿಕೆ ಪ್ಯಾಕ್ ಬಿಚ್ಚಿದಾಗ ಅಪ್ಪು ಅವರ ಭಾವಚಿತ್ರ ಹಾಗೂ  11 ಸಾವಿರ ರೂ.ಗಳಿದ್ದವು. ಆಗ ನಮ್ಮಿಬ್ಬರ ಕಣ್ಣಾಲೆಗಳು‌ ನೀರಾಗಿದ್ದವು.

ಇಂತಹ ಮಾನವೀಯ ಮೌಲ್ಯವುಳ್ಳ ನಟ ನಮ್ಮಿಂದ ಅಗಲಿರುವುದು ನಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡಷ್ಟು ದುಃಖವಾಗಿದೆ ಧರಿಯಪ್ಪ ಅರ್ದಾವೂರ ಹೇಳಿದರು.

ಟಾಪ್ ನ್ಯೂಸ್

Cong-sabhe

Congress Session: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಜ.21ಕ್ಕೆ ಮರುನಿಗದಿ

sunil-karkala

ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್‌ ಕುಮಾರ್‌

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Minister-CR-patil

Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

BJP-flag

Election Preperation: ಸ್ಥಳೀಯ ಸಂಸ್ಥೆ ಚುನಾವಣೆ: ಇಂದಿನಿಂದ ಬಿಜೆಪಿ ಸರಣಿ ಸಭೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-gadag

Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್

Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್

Raghvendra-Hitnal

Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್‌ ಶಾಸಕ

Kushtagi-patte

Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Cong-sabhe

Congress Session: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಜ.21ಕ್ಕೆ ಮರುನಿಗದಿ

sunil-karkala

ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್‌ ಕುಮಾರ್‌

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Minister-CR-patil

Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.