ನಾಳೆ ಬೊಮ್ಮಾಯಿ ಮೊದಲ ಬಜೆಟ್ ಮಂಡನೆ; ಜನಪ್ರಿಯ ಘೋಷಣೆ ನಿರೀಕ್ಷೆ
2.50 ಲಕ್ಷ ಕೋ. ರೂ. ಮೀರಲಿರುವ ಗಾತ್ರ
Team Udayavani, Mar 3, 2022, 7:05 AM IST
ಬೆಂಗಳೂರು: ಇನ್ನೊಂದು ವರ್ಷದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ಆ ಹಿನ್ನೆಲೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿರುವ ಬಜೆಟ್ನತ್ತ ಎಲ್ಲರ ಕುತೂಹಲ ನೆಟ್ಟಿದೆ.
ಇದು ಬೊಮ್ಮಾಯಿ ಅವರ ಮೊದಲ ಬಜೆಟ್ ಆಗಿದ್ದು, ಗಾತ್ರ 2.50 ಲಕ್ಷ ಕೋಟಿ ರೂ. ದಾಟಲಿದೆ. ಕೆಲವು ಜನಪ್ರಿಯ ಘೋಷಣೆಗಳನ್ನು ನಿರೀಕ್ಷಿಸಲಾಗಿದೆ. ಆದಷ್ಟೂ ತೆರಿಗೆ ಹೊರೆರಹಿತ ಬಜೆಟ್ ಮಂಡನೆಗಾಗಿ ಮುಖ್ಯಮಂತ್ರಿ ಕಸರತ್ತು ನಿರತರಾಗಿದ್ದು, ಅದಕ್ಕೆ ಬೇಕಾಗುವಂಥ ಸಂಪನ್ಮೂಲ ಕ್ರೋಡೀಕರಣಕ್ಕೆ ಶ್ರಮಿಸುತ್ತಿದ್ದಾರೆ.
ಬೇಡಿಕೆಗಳಿಗೆ ಸ್ಪಂದನೆ
ಕೈಗಾರಿಕೆ, ಪ್ರವಾಸೋದ್ಯಮ ವಲಯದ ಬೇಡಿಕೆಗಳೂ ಹೆಚ್ಚಾಗಿವೆ. ಶಿಕ್ಷಣ, ಆರೋಗ್ಯ, ಆಹಾರ ಮತ್ತು ನಾಗರಿಕ ಪೂರೈಕೆ, ಇಂಧನ, ಕೃಷಿ, ತೋಟಗಾರಿಕೆ, ಕಂದಾಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್, ಸಮಾಜ ಕಲ್ಯಾಣ ಇಲಾಖೆಗಳಿಂದ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ಹಿಂದಿನ ಎರಡು ವರ್ಷಗಳ ಬಜೆಟ್ ಮೊತ್ತದಲ್ಲಿ ಹೆಚ್ಚಿನ ಪಾಲನ್ನು ಕೊರೊನಾ ಹಿನ್ನೆಲೆಯಲ್ಲಿ ಮೂಲ ಸೌಕರ್ಯಕ್ಕೆ ಬಳಸ
ಲಾಗಿದ್ದು, ಈ ಬಾರಿ ವಿವಿಧ ಇಲಾಖೆಗಳ ಬೇಡಿಕೆ ಈಡೇರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಚುನಾವಣೆ ವರ್ಷ ಆದ ಕಾರಣ ಆಡಳಿತಾರೂಢ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ದೊಡ್ಡ ಮೊತ್ತದ ಅನುದಾನಕ್ಕಾಗಿ ಬೇಡಿಕೆ ಇಟ್ಟಿದ್ದು, ಇದೆಲ್ಲವನ್ನೂ ಸರಿದೂಗಿಸಲು ಮುಖ್ಯಮಂತ್ರಿ ಬೊಮ್ಮಾಯಿ ಶ್ರಮಿಸುತ್ತಿದ್ದಾರೆ.
ಸಾಲವೂ ಹೆಚ್ಚಾಗುವ ಸಾಧ್ಯತೆ
ಪ್ರಸ್ತುತ ರಾಜ್ಯದ ಸಾಲ ಮಾರ್ಚ್ ಅಂತ್ಯಕ್ಕೆ 4,57,899 ಕೋಟಿ ರೂ. ಇದ್ದು, 2022-23ನೇ ಸಾಲಿನಲ್ಲಿ 5 ಲಕ್ಷ ಕೋಟಿ ರೂ. ದಾಟಲಿದೆ. 2018-19ರಲ್ಲಿ 2,92,220 ಕೋ. ರೂ. ಇದ್ದ ಸಾಲ 2021-22ನೇ ಸಾಲಿನಲ್ಲಿ 4,57,899 ಕೋಟಿ ರೂ.ಗೇರಿದೆ. 2021-22ನೇ ಸಾಲಿನಲ್ಲಿ 71,332 ಕೋಟಿ ರೂ. ಸಾಲ ಪಡೆಯಲಾಗಿದೆ.
ಸಂಭಾವ್ಯ ಘೋಷಣೆಗಳು
01ಬಿಪಿಎಲ್ ಕಾರ್ಡ್ದಾರರಿಗೆ ಒಂದು ಕೆಜಿ ಹೆಚ್ಚುವರಿ ಅಕ್ಕಿ
02″ಮರಳಿ ತಾಯ್ನಾಡಿಗೆ’ ಯೋಜನೆ ಅನುಷ್ಠಾನ
03ಮುಂಬಯಿ – ಬೆಂಗ ಳೂರು- ಚೆನ್ನೈ ಕೈಗಾರಿಕಾ ಕಾರಿಡಾರ್ಗಳಲ್ಲಿ ಕೈಗಾರಿಕಾ ಟೌನ್ಶಿಪ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.