ಕ್ಯಾನ್ಸರ್ ನಿಂದ ನೊಂದು, ಬೆಂದಿದ್ದ ತಾಯಿಗೆ ಮರು ಮದುವೆ ಮಾಡಿಸಿದ ಪುತ್ರ!
ಎಲ್ಲಕ್ಕಿಂತ ದೊಡ್ಡದು ಮಾನಸಿಕ ಆರೋಗ್ಯ, ಪೋಸ್ಟ್ ಸಾಮಾಜಿಕ ತಾಣದಲ್ಲಿ ವೈರಲ್
Team Udayavani, Mar 3, 2022, 11:38 AM IST
ಮುಂಬಯಿ : ಬದುಕಿನಲ್ಲಿ ಮಾರಕವಾಗಿ ಕಾಡಿದ ಅನಾರೋಗ್ಯ, ಪತಿಯನ್ನು ಕಳೆದುಕೊಂಡು ನೊಂದು ಬೆಂದಿದ್ದ ಮಹಿಳೊಬ್ಬರ ಹೊಸ ಬದುಕಿಗೆ ಇನ್ನೊಂದು ಮದುವೆಗೆ ಪುತ್ರ ಸಹಕಾರಿಯಾಗಿ ಜೀವನ ಉತ್ಸಾಹ ಮೂಡಿಸಿದ ಘಟನೆ ನಡೆದಿದೆ.
ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿರುವ ಜಿಮೀತ್ ಗಾಂಧಿ ಎನ್ನುವವರು ತನ್ನ ತಾಯಿಯ ನೋವಿನ ಕ್ಷಣಗಳು ಮತ್ತು ಹೊಸ ಭರವಸೆಯ ಬದುಕಿನ ಆರಂಭದ ಕುರಿತು ಲಿಂಕ್ಡ್ ಇನ್ ನಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿದ್ದಾರೆ.
ಜಿಮೀತ್ ಪೋಸ್ಟ್ ನಲ್ಲಿ, ”ನನ್ನ ತಾಯಿ ಅ 44 ವರ್ಷದವರಾಗಿದ್ದಾಗ (2013) ಪತಿಯನ್ನು ಕಳೆದುಕೊಂಡರು.ಆಕೆಗೆ 2019 ರಲ್ಲಿ 3 ನೇ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು.ಅವರು ಅನೇಕ ಕೀಮೋ ಸೆಷನ್‌ಗಳಿಗೆ ಒಳಗಾದರು ಮತ್ತು 2 ವರ್ಷಗಳ ನಂತರ ಮತ್ತೆ ಚೇತರಿಸಿಕೊಂಡರು. ಅವರು ಕ್ಯಾನ್ಸರ್ ಚಿಕಿತ್ಸೆಯಲ್ಲಿದ್ದಾಗ ಡೆಲ್ಟಾ ರೂಪಾಂತರವನ್ನು ಪಡೆಡಿದ್ದರು.ನನಗೆ ನೆನಪಿಲ್ಲದ ಸಮಯದಿಂದ ಅವರು ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು. ಹೆಚ್ಚಿನ ಸಮಯ, ನಾವು ಬೇರೆಡೆ ನಮ್ಮ ವೃತ್ತಿಯನ್ನು ಮುಂದುವರಿಸಿದ್ದರಿಂದ ಅವರು ಭಾರತದಲ್ಲಿ ಒಬ್ಬಂಟಿಯಾಗಿದ್ದರು. ಆದರೆ ಅವಳು ಬದುಕಿನ ಉತ್ಸಾಹ ಬಿಡಲಿಲ್ಲ. ಅವರು ಪ್ರೀತಿಯನ್ನು ಕಂಡುಕೊಂಡರು. ಭಾರತೀಯ ಸಮಾಜದಲ್ಲಿನ ಎಲ್ಲಾ ಕಳಂಕಗಳನ್ನು, ಎಲ್ಲಾ ನಿಷೇಧಗಳನ್ನು ಮುರಿಯಲು ನಿರ್ಧರಿಸಿದರು. ಮತ್ತು ಅವಳು ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾದರು. ಅವರು 52 ನೇ ವಯಸ್ಸಿನಲ್ಲಿ ಪ್ರೀತಿಯನ್ನು ಕಂಡುಕೊಂಡರು. ಅವಳು ಯೋಧ. ಅವಳು ಹೋರಾಟಗಾರ್ತಿ.ಅವಳು ನನ್ನ ತಾಯಿ.ಭಾರತದಲ್ಲಿ ನನ್ನ ತಲೆಮಾರಿನ ಎಲ್ಲಾ ಜನರಿಗೆ, ನೀವು ಒಬ್ಬ ಪೋಷಕರನ್ನು ಹೊಂದಿದ್ದರೆ, ಒಡನಾಟವನ್ನು ಕಂಡುಕೊಳ್ಳುವ ಅವರ ನಿರ್ಧಾರವನ್ನು ದಯವಿಟ್ಟು ಬೆಂಬಲಿಸಿ. ಎಲ್ಲಕ್ಕಿಂತ ಹೆಚ್ಚು ಪ್ರೀತಿ ಮತ್ತು ಮಾನಸಿಕ ಆರೋಗ್ಯ!” ಎಂದು ಬರೆದಿದ್ದಾರೆ.
ಜಿಮೀತ್, ತನ್ನ ತಾಯಿ ತನ್ನ ಪ್ರೇಮ ಸಂಬಂಧದ ಬಗ್ಗೆ ಹಂಚಿಕೊಳ್ಳಲು ಆರಂಭದಲ್ಲಿ ಹಿಂಜರಿದಿದ್ದರು, ಆದ್ದರಿಂದ ಮೊದಲು, ಅವಳು ತನ್ನ ಹೆಂಡತಿಗೆ ತಿಳಿಸಿದ್ದರು ಎಂದು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಫೆಬ್ರವರಿ 14 ರಂದು ಮುಂಬಯಿಯಲ್ಲಿ ದಂಪತಿಗಳು ವಿವಾಹವಾಗಿದ್ದಾರೆ. ಪೋಸ್ಟ್ ಗೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಹಲವಾರು ಮಂದಿ ಪ್ರತಿಕ್ರಿಯೆ ನೀಡಿ ಶುಭ ಹಾರೈಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.