ತಂತಿಗೆ ಸಿಲುಕಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯ ಇಲಾಖೆ
TheForestDepartment which rescued the wired leopard
Team Udayavani, Mar 3, 2022, 3:22 PM IST
ಜಾನ್ಮನೆ ವಲಯ ಅರಣ್ಯ ವ್ಯಾಪ್ತಿಯ ಶಿರಗುಣಿಯಲ್ಲಿ ಬೆಳೆ ರಕ್ಷಣೆಗೆ ಹಾಕಿದ್ದ ತಂತಿಗೆ ಸಿಲುಕಿದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿ, ಸಿಬಂದಿಗಳು ವೈದ್ಯರ ನೆರವಿನಿಂದ ರಕ್ಷಿಸಿ ಉಪಚರಿಸಿದ ಘಟನೆ ಬುಧವಾರ ನಡೆದಿದೆ. ಬುಧವಾರ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಇಂಥದೊಂದು ಘಟನೆ ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ತಕ್ಷಣ ಶಿವಮೊಗ್ಗದ ವನ್ಯಜೀವಿ ವೈದ್ಯ ಡಾ. ವಿನಯ ಅವರಿಗೆ ಮಾಹಿತಿ ತಲುಪಿಸಲಾಯಿತು. ಅವರು ಶಿರಗುಣಿಗೆ ಬಂದ ಬಳಿಕ ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಚಿರತೆ ರಕ್ಷಿಸಲಾಗಿದೆ. ಡಿಎಫ್ಓ ಎಸ್.ಜಿ.ಹೆಗಡೆ, ಆರೆಪ್ಪೋ ಪವಿತ್ರ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.