ಕೆಎಫ್‌ಡಿ ಬಾಧಿತ ಪ್ರದೇಶಕ್ಕೆ ಸ್ವದೇಶಿ ಕೀಟ ನಿವಾರಕ
Team Udayavani, Mar 3, 2022, 5:14 PM IST
ಶಿವಮೊಗ್ಗ: ಕೆಎಫ್‌ಡಿ ಬಾಧಿ ತ ಗ್ರಾಮದಜನರಿಗೆ ನೀಡುತ್ತಿದ್ದ ಡಿಎಂಪಿ ಆಯಿಲ್(ಕೀಟ ನಿವಾರಕ) ಕಮಟು ವಾಸನೆ, ಅಂಟು,ಶಕ್ತಿ ಕಡಿಮೆ ಕಾರಣಕ್ಕೆ ಜನರ ಬಳಕೆಯಿಂದದೂರವಿತ್ತು. ಇದಕ್ಕೆ ಪರಿಹಾರವಾಗಿಸರ್ಕಾರ ಈಗ ಸ್ವದೇಶಿ ಮಂತ್ರ ಜಪಿಸಿದೆ.ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಸೈನಿಕರುಬಳಸುತ್ತಿರುವ ಡಿಇಪಿಎ ಮಲೆನಾಡಿನಜನರಿಗೆ ಹತ್ತಿರವಾಗುವುದರಲ್ಲಿಅನುಮಾನವಿಲ್ಲ.
60 ವರ್ಷಗಳಿಂದ ಮಲೆನಾಡುಸೇರಿ 11 ಜಿಲ್ಲೆಗಳ 3 ಲಕ್ಷ ಜನರಿಗೆಬಾ ಧಿಸುತ್ತಿರುವ ಕೆಎಫ್‌ಡಿ (ಕ್ಯಾಸನೂರುಫಾರೆಸ್ಟ್ ಡಿಸೀಸ್) ನಿಯಂತ್ರಣಕ್ಕೆ ಸರ್ಕಾರಅನೇಕ ಉಪಕ್ರಮಗಳನ್ನು ಕೈಗೊಂಡಿದೆ.ಈ ಕಾಯಿಲೆ ಹರಡಲು ಮಂಗನ ಪಾತ್ರಇಲ್ಲದಿದ್ದರೂ ಮಂಗನ ಕಾಯಿಲೆ ಎಂದುಕುಖ್ಯಾತಿಯಾಗಿತ್ತು. ನಿಜವಾಗಿಯೂವೈರಸ್‌ಗಳು ಮನುಷ್ಯನಿಗೆ ಹರಡುತ್ತಿದ್ದದ್ದುಉಣುಗುಗಳಿಂದ.
ವೈರಸ್ ಬಾ ಧಿತಉಣುಗುಗಳು ಮನುಷ್ಯನಿಗೆ ಅಥವಾಮಂಗನಿಗೆ ಕಚ್ಚಿದರೆ ಕೆಎಫ್‌ಡಿ ಸೋಂಕುಲಕ್ಷಣಗಳು ಕಾಣಿಸಿಕೊಳ್ಳುತಿತ್ತು.ಕಾಡಂಚಿನ ಜನರು ನಿತ್ಯ ಕಾಡಿಗೆದನಕರು, ಸೌದೆಗೆ ಇತರೆ ಚಟುವಟಿಕೆಗಳಿಗೆಹೋಗಿ ಬರುತ್ತಿದ್ದರಿಂದ ಉಣುಗುಗಳುದನಕರು, ಬಟ್ಟೆ ಮೇಲೆ ಬರುವ ಸಾಧ್ಯತೆಇತ್ತು. ಉಣುಗುಗಳು ಮನುಷ್ಯನಿಗೆಕಚ್ಚುವುದನ್ನು ನಿಯಂತ್ರಿಸಲುಮನುಷ್ಯನಿಗೆ ಹಾನಿಕಾರಕವಲ್ಲದ ಕೀಟನಿವಾರಕಗಳನ್ನು ಬಳಸಲುಆರಂಭಿಸಲಾಯಿತು. ದಶಕದ ಹಿಂದೆಮೊದಲು ಮೈಲೋಲ್ ಸೊಳ್ಳೆ ನಿವಾರಕಆಯಿಲ್ ವಿತರಣೆ ಮಾಡಲಾಯಿತು.
ಇದು ಹೆಚ್ಚು ಉಪಯೋಗಕಾರಿ ಅಲ್ಲದಕಾರಣ ಡಿಎಂಪಿ ಬಳಕೆಗೆ ಬಂತು.ಡಿಎಂಪಿ ಕೂಡ ವಾಸನೆ, ಹೆಚ್ಚು ಸಮಯಹೋರಾಡದ ಕಾರಣ ನಿರ್ಲಕ್ಷಿಸಲಾಯಿತು.ಆರೋಗ್ಯ ಕಾರ್ಯಕರ್ತರು ಮನೆ-ಮನೆಗೆ ಎರಡು ಬಾಟಲ್ ಡಿಎಂಪಿಆಯಿಲ್ ಕೊಟ್ಟರೂ ಬಳಸುತ್ತಿರಲಿಲ್ಲ.ಇದಕ್ಕೆ ಪರಿಹಾರವಾಗಿ ಸ್ವದೇಶಿಮಂತ್ರದ ಅಡಿ ದೇಶದ ಪ್ರತಿಷ್ಠಿತ ಸಂಸ್ಥೆಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಡಿಇಪಿಎಬಳಸಲು ಸಿದ್ಧತೆ ನಡೆಸಲಾಗಿದೆ.ಈಗಾಗಲೇ ಟೆಂಡರ್ ಪ್ರಕ್ರಿಯೆಮುಗಿದಿದ್ದು ಈಗಿರುವ ಡಿಎಂಪಿ ಆಯಿಲ್‌ಸ್ಟಾಕ್ ಖಾಲಿಯಾದ ನಂತರ ಬಳಕೆಗೆಸಿಗಲಿದೆ.
ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.