ಆರೋಗ್ಯ ಸಚಿವ ಸುಧಾಕರ ಕ್ಷಮೆಯಾಚನೆಗೆ ಆಗ್ರಹ
Team Udayavani, Mar 3, 2022, 5:37 PM IST
ವಿಜಯಪುರ: ಆರೋಗ್ಯ ಸಚಿವ ಕೆ.ಸುಧಾಕರ ಬೌದ್ಧ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದನ್ನು ವಿಜಯಪುರ ಜಿಲ್ಲೆಯ ಬೌದ್ಧ ಧರ್ಮಿಯರೂ ಸೇರಿದಂತೆ ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿವೆ.
ಬುಧವಾರ ಈ ಕುರಿತು ನಗರದ ಸಾರಿಪುತ್ರ ಬೌದ್ಧ ವಿಹಾರದಲ್ಲಿ ಸಭೆ ಸೇರಿದ ಮುಖಂಡರು, ಚಿಕ್ಕಬಳ್ಳಾಪುರದ ಬ್ರಾಹ್ಮಣರ ಸಮಾವೇಶದಲ್ಲಿ ಬ್ರಾಹ್ಮಣರು ಭಾರತ ದೇಶವನ್ನು ಬೌದ್ಧ ಧರ್ಮದ ಪಾಷದಿಂದ ಕಾಪಾಡಿದರು ಎಂದು ಸಚಿವ ಸುಧಾಕರ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದು ಖಂಡನಾರ್ಹ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸರ್ಕಾರದಲ್ಲಿ ಸಚಿವ ಸ್ಥಾನದಂಥ ಜವಾಬ್ದಾರಿ ಸ್ಥಾನದಲ್ಲಿರುವ ಸುಧಾಕರ, ಜನಪ್ರತಿನಿ ಧಿಯಾಗಿ ಬ್ರಾಹ್ಮಣರನ್ನು ವೈಭವೀಕರಿಸಿ ಹೊಗಳಿಕೆ ಮಾತು ಅಜ್ಞಾನದ ಸಂಕೇತ. ಸುಮಾರು 500 ವರ್ಷಗಳ ಹಿಂದೆ ಗೌತಮ ಬುದ್ಧ ಅವರು ಸ್ಥಾಪಿಸಿದ ಬೌದ್ಧ ಧರ್ಮದ ಸತ್ಯ, ಶಾಂತಿ, ಕರುಣೆ, ಸ್ವತ್ಛ ಚರಿತ್ರೆಯನ್ನು, ತತ್ವಗಳನ್ನು ಜನಸಾಮಾನ್ಯರಿಗೆ ಉಣಬಡಿಸಿದೆ ಎಂಬುದನ್ನು ಸಚಿವ ಸುಧಾಕರ ಅರಿವಿಗಿಲ್ಲ ಎಂದು ಟೀಕಿಸಿದ್ದಾರೆ.
ಭಾರತದಲ್ಲಿ ಜನ್ಮ ತಳೆದ ಬೌದ್ಧ ಧರ್ಮ ಇದೀಗ 53 ದೇಶಗಳಲ್ಲಿ ಪ್ರಮುಖ ಧರ್ಮವಾಗಿ ಹೊರ ಹೊಮ್ಮಿದೆ. ಬ್ರಾಹ್ಮಣರು ಬೌದ್ಧ ಧರ್ಮದ ಯಾವ ನೀತಿಯನ್ನು ಖಂಡಿಸಿ ಭಾರತವನ್ನು ಸಂರಕ್ಷಿಸಿದರು ಎಂಬುವುದಕ್ಕೆ ಸುಧಾಕರ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಧಾಕರ ಅವರನ್ನು ಕೂಡಲೇ ತಮ್ಮ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ವಿವಿಧ ಸಂಘಟನೆಗಳು ಸೇರಿ ಸುಧಾಕರರ ವಿರುದ್ಧ ಉಗ್ರ ಹೋರಾಟ ಮಾಡಲು ವಿವಿಧ ಸಂಘಟನೆಗಳ ಮುಖಂಡರು ಖಂಡನಾ ನಿರ್ಣಯ ತೆಗೆದುಕೊಂಡರು.
ಸಭೆಯಲ್ಲಿ ಚಂದ್ರಶೇಖರ ಕೊಡಬಾಗಿ, ಬಸವರಾಜ ಚಲವಾದಿ, ಗೋಪಾಲ ಅಥರ್ಗಾ, ಇರ್ಫಾನ್ ಶೇಖ್, ಪ್ರಭುಗೌಡ ಪಾಟೀಲ, ವೆಂಕಟೇಶ ವಗ್ಯಾನವರ, ಲಾಲಾಸಾಹೇಬ ಕೊರಬು, ಮತ್ತಿನಕುಮಾರ ದೇವದರ, ಯಾಸೀನ್ ಪಟೇಲ್, ಕೆ.ಎಂ. ಶಿವಶರಣ, ಬಿ.ಆರ್.ಹಿಪ್ಪರಗಿ, ಬಿ.ಎಸ್.ಬ್ಯಾಳಿ, ಪುನೀತ್ ಕಾಂಬಳೆ, ಲಕ್ಷ್ಮಣ ಚಲವಾದಿ, ಶಿವು ಹೊಸಮನಿ, ಬಿ.ಎಸ್. ಚನ್ನವೀರ, ಸಂತೋಷ ಶಹಾಪುರ, ಎಂ.ಬಿ.ಹಳ್ಳದಮನಿ, ಮಹೇಶ ಕ್ಯಾತನ್, ಗೋವರ್ಧನ ಚಲವಾದಿ, ಸಾಬು ಚಲವಾದಿ, ಅಕ್ಷಯಕುಮಾರ ಅಜಮನಿ, ಆನಂದ ಮುದೂರ, ಯಮನೂರಿ ಸಿಂದಗೇರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.