ಕೋವಿಡ್ ಹರಡಿದ್ದು, ಟ್ರಾಫಿಕ್ ಜಾಮ್ ಮಾಡಿದ್ದು ಪಾದಯಾತ್ರೆ ಸಾಧನೆ: ಕಾರಜೋಳ ವ್ಯಂಗ್ಯ
Team Udayavani, Mar 3, 2022, 7:18 PM IST
ಬೆಂಗಳೂರು: ಮೇಕೆದಾಟು ಮೊದಲ ಹಂತದ ಪಾದಯಾತ್ರೆ ಕೇವಲ ಕೋವಿಡ್ ಸೋಂಕು ಹರಡುವಿಕೆಯಲ್ಲಿ ಯಶಸ್ವಿಯಾದರೆ ಎರಡನೇ ಹಂತದ ಪಾದಯಾತ್ರೆ ಬೆಂಗಳೂರು ನಗರದಾದ್ಯಂತ ಮತ್ತು ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಿರಿಕಿಗೆ ಮಾತ್ರ ಸಾಕ್ಷಿಯಾಯಿತು ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷದವರು ಮೇಕೆದಾಟು ಯೋಜನೆಯ ಹೆಸರಿನಲ್ಲಿ ನಡೆಸಿದ ಪಾದಯಾತ್ರೆ ಕೇವಲ ಪ್ರಚಾರ ಯಾತ್ರೆ. ಅದೊಂದು ಜನರನ್ನು ಮೋಸಗೊಳಿಸುವ ವಿಫಲ ತಂತ್ರ ಎಂದು ಹೇಳಿದ್ದಾರೆ.
ಮೇಕೆದಾಟು ಯೋಜನೆ ಸಂಕಲ್ಪದಿಂದ ಸಾಕಾರಗೊಳ್ಳಬೇಕಾದರೆ ಹಾಗೂ ಈ ಯೋಜನೆಯ ಪರಿಣಾಮಕಾರಿ ಅನುಷ್ಟಾನ ಆಗುವುದು ಕೇವಲ ಭಾರತೀಐ ಜನತಾ ಪಕ್ಷ ಮತ್ತು ಅದರ ಸರ್ಕಾರದಿಂದ ಮಾತ್ರ ಸಾಧ್ಯ. ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ ಕಾವೇರಿ ಕೊಳ್ಳದ ಜನತೆಗೆ ಈ ವಿಷಯದ ಸತ್ಯ ದರ್ಶನವಾಗಿದೆ. ಅಧಿಕಾರದಲ್ಲಿದ್ದಾಗ ಯಾವುದೇ ಪರಿಣಾಮಕಾರಿ ಕ್ರಮಕ್ಕೆ ಮುಂದಾಗದೇ ಕಾಲಹರಣ ಮಾಡಿದ ಕಾಂಗ್ರೆಸ್ ಪಕ್ಷ ಇದೀಗ ಮತ್ತೆ ಮತ್ತೆ ಪಾದಯಾತ್ರೆ ಮಾಡುವ ಮೂಲಕ ಜನದ್ರೋಹ ಎಸಗುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸಿಗರ ಗಿಮಿಕ್ ಗೆ ನಾಡಿನ ಜನತೆ ಮೋಸ ಹೋಗುವುದಿಲ್ಲ ಎಂಬ ಸತ್ಯದ ಅರಿವು ಕಾಂಗ್ರೆಸ್ ಗೆ ಸಾಕ್ಷಾತ್ಕಾರವಾಗಬೇಕಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.