ಔಷಧಗಳ ಸಮಗ್ರ ವರದಿ ನೀಡುವಂತೆ ಡಿಸಿ ಸೂಚನೆ
ಎಂಡೋಸಲ್ಫಾನ್ ಸಂತ್ರಸ್ತರ ಕುಂದು ಕೊರತೆ: ಪ್ರಗತಿ ಪರಿಶೀಲನ ಸಭೆ
Team Udayavani, Mar 5, 2022, 5:50 AM IST
ಪುತ್ತೂರು: ಎಂಡೋಸಲ್ಫಾನ್ ಬಾಧಿತರು ಸರಕಾರಿ ಹಾಗೂ ಖಾಸಗಿಯಾಗಿ ಖರೀದಿಸುತ್ತಿರುವ ಔಷಧ/ಮಾತ್ರೆಗಳ ಬಗ್ಗೆ ಆರೋಗ್ಯ, ಆಶಾ ಕಾರ್ಯಕರ್ತೆಯರು ಅಥವಾ ಗ್ರಾಮ ಮಟ್ಟದ ಅಧಿಕಾರಿಗಳ ಮುಖೇನ ಸಮೀಕ್ಷೆ ನಡೆಸಿ ಮಾ. 17ರೊಳಗೆ ಸಮಗ್ರ ವರದಿ ನೀಡುವಂತೆ ದ.ಕ.ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ.
ಜಿಲ್ಲೆಯ ಎಂಡೋಸಂತ್ರಸ್ತರ ಪುನರ್ವ ಸತಿ ಕಾರ್ಯಕ್ರಮದಡಿ ಸಂತ್ರಸ್ತರ ಕುಂದು ಕೊರತೆಯ ಪ್ರಗತಿ ಪರಿಶೀಲನ ಸಭೆಯು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಪುತ್ತೂರು ನಡೆಯಿತು.
ನೋಟಿಸ್ ಜಾರಿ
ತಹಶೀಲ್ದಾರ್‌ಗಳು ಕೈಗೊಂಡ ಕ್ರಮದ ಬಗ್ಗೆ ಡಿಸಿ ಪ್ರಶ್ನಿಸಿದರು. ಬಂಟ್ವಾಳ ತಹಶಿ àಲ್ದಾರ್ ರಶ್ಮಿ ಎಸ್.ಆರ್. ಹೊರತುಪಡಿಸಿ ಉಳಿದ ತಹಶೀಲ್ದಾರ್‌ಗಳು ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ನೋ ಟಿಸ್ ನೀಡಲು ಸೂಚಿಸಿದರು. ವಿಟ್ಲ, ಕಾಣಿಯೂರು, ಬೆಳ್ಳಾರೆ, ಪಾಣಾಜೆ ಗಳಲ್ಲಿ ಎಂಡೋಪಾಲನ ಕೇಂದ್ರ ತೆರೆ ಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸರಕಾರದ ಮಂಜೂರಾತಿ ಸಿಕ್ಕ ಬಳàಕ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ನಿದ್ರೆ ಮಾತ್ರೆ: ಪಾಲನ ಕೇಂದ್ರದಲ್ಲಿ ಸಂತ್ರಸ್ತರಿಗೆ ನಿದ್ರೆ ಮಾತ್ರೆ ನೀಡುತ್ತಿರುವ ಆರೋಪದ ಬಗ್ಗೆ ಚರ್ಚೆ ನಡೆಯಿತು. ಕೆಲವೊಂದು ಔಷಧಗಳಲ್ಲಿ ನಿದ್ದೆಯ ಅಮಲು ಇರುತ್ತದೆ. ಈ ಬಗ್ಗೆ ಪೋಷಕರಿಗೆ ಮಾಹಿತಿ ಇಲ್ಲದಿರುವುದು ತಪ್ಪು ಅಭಿಪ್ರಾಯ ಮೂಡಲು ಕಾರಣ. ಪೋಷಕರ ಜತೆ ತಾಲೂಕು ಆರೋಗ್ಯಾಧಿಕಾರಿಗಳು ಕೌನ್ಸೆÕಲಿಂಗ್ ಮಾಡಿ ಮಾಹಿತಿ ನೀಡುವಂತೆ ಡಿಸಿ ಸೂಚಿಸಿದರು.
ಎಂಡೋಪೀಡಿತರಿಗೆ ನೀಡಲಾಗುತ್ತಿ ರುವ ಯೂನಿಕ್ ಡಿಸೇಬಿಲಿಟಿ ಐಡೆಂಟಿಟಿ ಕಾರ್ಡ್ (ಯುಡಿಐಡಿ) ಅನ್ನು ತ್ವರಿತವಾಗಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಅಂಗನವಾಡಿಗಳ ಮೂಲಕ ಪೌಷ್ಟಿಕ ಆಹಾರವನ್ನು ಎಂಡೋಪೀತರಿಗೂ ನೀಡುವ ಬಗ್ಗೆ, ಸಂತ್ರಸ್ತರ ಕುಟುಂಬ ಎಪಿಎಲ್ ಆಗಿದ್ದರೂ ಬಿಪಿಎಲ್ ಪಡಿತರ ಕೊಡಿಸಲು ಸರಕಾರಕ್ಕೆ ಪ್ರಸ್ತಾವನೆ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಸಮಸ್ಯೆ ಬಿಚ್ಚಿಟ್ಟ ಹೋರಾಟಗಾರ
ಎಂಡೋ ಪೀಡಿತರ ಪರ ಹೋರಾಟಗಾರ ಕೊಕ್ಕಡ ಶ್ರೀಧರ ಮಾತನಾಡಿ, ಅಧಿಕಾರಿಗಳು ಸುಳ್ಳು ಮಾಹಿತಿ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಸಾಕ್ಷಿ ಸಹಿತ ದಾಖಲೆ ನೀಡುತ್ತೇನೆ ಎಂದರು. ಪದೇಪದೆ ಸಮಸ್ಯೆಗಳನ್ನು ಪ್ರಸ್ತಾವಿಸಿದಾಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಋಣಾತ್ಮಕ ಸಂಗತಿ ಮಾತ್ರ ಹೇಳಬೇಡಿ, ಧನಾತ್ಮಕ ಬದಲಾವಣೆಯ ಬಗ್ಗೆಯೂ ಹೇಳಿ ಎಂದು ಸೂಚಿಸಿದರು. ಸಮಸ್ಯೆಯನ್ನು ಆಳವಾಗಿ ಅರಿತಿರುವ ಕಾರಣ ಪ್ರಸ್ತಾವಿಸಿದೆ ಎಂದು ಅವರು ಗದ್ಗದಿತರಾದ ಘಟನೆಯೂ ನಡೆಯಿತು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿಮ್ಮ ಹೋರಾಟ, ಕಾಳಜಿಯ ಬಗ್ಗೆ ನಮಗೆ ಅರಿವಿದೆ. ಇದನ್ನು ಎಲ್ಲ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.