ಪಾಕಿಸ್ತಾನ ನೀಡಿದ ಗೋಧಿ ತಿನ್ನಲು ಯೋಗ್ಯವಲ್ಲ,ಭಾರತದ ಗೋಧಿ ಉತ್ತಮವಾಗಿದೆ: ತಾಲಿಬಾನ್ ಅಧಿಕಾರಿ
Team Udayavani, Mar 5, 2022, 12:06 PM IST
ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ಕಳಪೆ ಗುಣಮಟ್ಟದ ಗೋಧಿಯನ್ನು ದಾನ ಮಾಡಿದೆ ಎಂಬ ಆರೋಪ ಕೇಳಿಬಂದಿದ್ದು, ಟ್ವಿಟರ್ ನಲ್ಲಿ ಮಾತಿನ ಸಮರಕ್ಕೆ ಕಾರಣವಾಗಿದೆ.
ತಾಲಿಬಾನ್ ಅಧಿಕಾರಿಯೊಬ್ಬರು ಭಾರತ ಕಳುಹಿಸಿದ ಗೋಧಿಯ ಗುಣಮಟ್ಟವನ್ನು ಶ್ಲಾಘಿಸುವಾಗ ಕಳಪೆ ಗುಣಮಟ್ಟದ ಗೋಧಿಯನ್ನು ದಾನ ಮಾಡಿದ್ದಕ್ಕಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಗೋಧಿಯ ಗುಣಮಟ್ಟದ ಬಗ್ಗೆ ತಾಲಿಬಾನ್ ಅಧಿಕಾರಿಯೊಬ್ಬರು ದೂರುತ್ತಿರುವುದನ್ನು ತೋರಿಸುವ ವೀಡಿಯೊದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಅಗಿದೆ.
“ಅಫ್ಘಾನ್ ಜನರಿಗೆ ನಿಮ್ಮ ನಿರಂತರ ಬೆಂಬಲಕ್ಕಾಗಿ ಭಾರತಕ್ಕೆ ಧನ್ಯವಾದಗಳು. ನಮ್ಮ ಸಾರ್ವಜನಿಕ ಸ್ನೇಹಿ ಸಂಬಂಧಗಳು ಶಾಶ್ವತವಾಗಿರುತ್ತವೆ. ಜೈ ಹಿಂದ್” ಎಂದು ಹಮ್ದುಲ್ಲಾ ಅರ್ಬಾಬ್ ಟ್ವೀಟ್ ಮಾಡಿದ್ದಾರೆ.
“ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ನೀಡಿದ ಗೋಧಿ ಸವೆದು ಹಾಳಾಗಿವೆ, ಅದನ್ನು ಬಳಸಲು ಯೋಗ್ಯವಾಗಿಲ್ಲ. ಭಾರತ ಯಾವಾಗಲೂ ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಿದೆ” ಎಂದು ನಜೀಬ್ ಫರ್ಹೋಡಿಸ್ ಎಂಬವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಝಪೊರಿಝಿಯಾ ಪರಮಾಣು ಸ್ಥಾವರದ ಮೇಲೆ ಮತ್ತೆ ಉಕ್ರೇನ್ ನಿಯಂತ್ರಣ; ಆಸ್ಪತ್ರೆ ಮೇಲೆ ರಷ್ಯಾ ದಾಳಿ!
ಆದರೆ ಪಾಕಿಸ್ಥಾನದಿಂದ ಬಂದ ಗೋಧಿಯ ಗುಣಮಟ್ಟದ ಬಗ್ಗೆ ಹೇಳಿಕೆ ನೀಡಿದ್ದ ತಾಲಿಬಾನ್ ಅಧಿಕಾರಿಯನ್ನು ಹುದ್ಧೆಯಿಂದ ವಜಾ ಮಾಡಲಾಗಿದೆ. ಮಾನವೀಯ ನೆಲೆಯಲ್ಲಿ ಕಳೆದ ತಿಂಗಳಿನಿಂದ ಭಾರತವು ಅಫ್ಘಾನಿಸ್ಥಾನಕ್ಕೆ ಗೋಧಿಯನ್ನು ಕಳುಹಿಸುತ್ತಿದೆ. ಭಾರತವು ಅಫ್ಘಾನಿಸ್ಥಾನಕ್ಕೆ 50,000 ಮೆಟ್ರಿಕ್ ಟನ್ ಗೋಧಿಯನ್ನು ಅಫ್ಗಾನಿಸ್ಥಾನದ ನೆರವಿಗೆ ಕಳುಹಿಸಲಿದೆ. 2000 ಮೆಟ್ರಿಕ್ ಟನ್ ಗೋಧಿಯನ್ನು ಹೊತ್ತ ಭಾರತದ ಪಡೆ ಗುರುವಾರ ಅಮೃತಸರದ ಅಟ್ಟಾರಿಯಿಂದ ಅಫ್ಘಾನಿಸ್ತಾನದ ಜಲಾಲಾಬಾದ್‌ಗೆ ಹೊರಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.