ಮುದೇನೂರಿನಲ್ಲಿ ಮಹಿಳಾ ಸಾರಥ್ಯದ ಪಾರ್ವತಿ ರಥೋತ್ಸವ ಸಂಭ್ರಮ
ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಂದೊಂದು ದಿನ ರಥ ಎಳೆಯುವ ಅವಕಾಶ
Team Udayavani, Mar 5, 2022, 1:28 PM IST
ದೋಟಿಹಾಳ: ಸಮೀಪದ ಮುದೇನೂರು ಮಠದಲ್ಲಿ ಶುಕ್ರವಾರ ಸಂಜೆ ಮಹಿಳಾ ಸಾರಥ್ಯದ ಪಾರ್ವತಿ ರಥೋತ್ಸವು ವಿಜೃಂಭಣೆಯಿಂದ ನಡೆಯುತು.
ಸಮೀಪದ ಮುದೇನೂರು ಗ್ರಾಮದ ಉಮಾಚಂದ್ರಮೌಳೇಶ್ವರ ಜಾತ್ರೋತ್ಸವ ಗುರುವಾರದಿಂದ ಆರಂಭವಾಗಿದ್ದು. ಗುರುವಾರ ಉಮಾಚಂದ್ರಮೌಳೇಶ್ವರ ರಥೋತ್ಸವಕ್ಕೆ ಹಂಪಸಾಗರ ಷ.ಬ್ರ ಅಭಿವನ ಶಿವಲಿಂಗೇಶ್ವರ ರುದ್ರಮುನಿಸ್ವಾಮಿ ಚಾಲನೆ ನೀಡುವ ಮೂಲಕ ಮೂರುದಿನಗಳ ಕಾಲ ನಡೆಯುವು ಜಾತ್ರೆ ಆರಂಭವಾಯಿತು. ಮೊದಲ ದಿನ ಪುರುಷರು ರಥೋತ್ಸವ, ಎರಡನೇ ದಿನ ಮಹಿಳಾ ರಥೋತ್ಸವ ಹಾಗೂ ಕೊನೆ ಮೂರನೇ ದಿನ ಮಕ್ಕಳಿಂದ ರಥೋತ್ಸವ ನಡೆಯುತ್ತಾ ಬಂದಿದೆ.
ಶುಕ್ರವಾರ ಗ್ರಾಮದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಸಂಜೆ 6ಗಂಟೆಗೆ ಸುಮಂಗಲಿಯರಿಂದ “ಪಾರ್ವತಿ ರಥೋತ್ಸವ” ವಿಜೃಂಭಣೆಯಿಂದ ನಡೆಯುತು.
ಮಹಿಳಾ ಸಬಲೀಕರಣಕ್ಕೆ ಪ್ರೋತ್ರಾಹ
ಮುದೇನೂರು ಮಠದಲ್ಲಿ ಸುಮಾರು ಐವತ್ತು ವರ್ಷಗಳಿಂದ “ಮಹಿಳಾ ದಿನಾಚರಣೆ” ಸದ್ದಿಲ್ಲದೆ ಸಾಗಿ ಬರುತ್ತಿದೆ. ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವ ಮತ್ತು ಅದಕ್ಕೆ ಪುರುಷರ ಮನ ಒಪ್ಪುವಂತೆ ಮಾಡುವ ಒಳ್ಳೆಯ ಉದ್ದೇಶದಿಂದಲೇ ‘ಮಹಿಳಾ ರಥೋತ್ಸವ’ದ ನೆಪದಲ್ಲಿ ಮಹಿಳಾ ಸಬಲೀಕರಣಕ್ಕೆ ಪ್ರೋತ್ರಾಹ ನೀಡುವ ಅರ್ಥಪೂರ್ಣ ಆಚರಣೆ ಇದಾಗಿದೆ. ಇಲ್ಲಿ ಮಹಿಳೆಯಿರಿಗಾಗಿಯೇ ವಿಶೇಷ ಆಚರಣೆಗಳು ಶ್ರೀಮಠದ ವತಿಯಿಂದ ವಿಜ್ರಂಭಣೆಯಿಂದ ನಡೆಯಿತು.
ಸಾಮಾನ್ಯವಾಗಿ ಕೆಲವು ಕಡೆಗಳಲ್ಲಿ ಒಂದೇ ದಿನ ರಥೋತ್ಸವ ನಡೆಯುತದೇ. ಆದರೇ ಇಲ್ಲಿ ಮೂರು ದಿನಗಳ ಕಾಲ ರಥೋತ್ಸವ ನಡೆಯುವತ್ತದೆ. ಇದರಲ್ಲಿ ಒಂದು ದಿನ ಮಹಿಳೆಯರು ತೆರೆಮರೆಯಲ್ಲಿ ಇರುತ್ತಾರೆ. ಶಿವರಾತ್ರಿಯ ಅಮವಾಸ್ಯೆಯಾದ ಮೊದಲ ದಿನ ಪುರುಷರು ರಥೋತ್ಸವ ನಡೆಯಿತು. ಎರಡನೇ ದಿನ ಗ್ರಾಮದ ಹಾಗೂ ಸುತ್ತಮುತ್ತಲ್ಲ ಗ್ರಾಮಗಳಿಂದ ಆಗಮಿಸಿದ ಸುಮಂಗಲಿಯರೆಲ್ಲರಿಗೂ ಮುತ್ತೆö್ಯದೆಯರು ಉಡಿ ತುಂಬಿವ ಕಾರ್ಯಕ್ರಮ ನಡೆಯುವದು. ಸಂಜೆ 6ಗಂಟೆಗೆ ದೇವಸ್ಥಾನದ ಮುಂದೆ ಹೆಂಗಳೆಯರು ಕೈಯಲ್ಲಿ ಬಣ್ಣ ಬಣ್ಣದ ಕೋಲು ಹಿಡಿದು ಸ್ವಾಮಿಗಳ ಹಾಡುವ ಹಾಡಿಗೆ ಹೆಜ್ಜೆ ಹಾಕುತ್ತಾರೆ. ‘ಹರ ಹರ ಮಹಾದೇವ’ ಎನ್ನುತ್ತಾ ವೀರಗಚ್ಚೆ ಹಾಕಿದ ನೂರಾರು ಮಹಿಳೆಯರು ರಥ ಎಳೆಯುತ್ತಾರೆ. ಅವರಿಗೆ ದಾರಿ ದೀಪವಾಗಿ ಉಳಿದ ಹೆಂಗಳೆಯರು ದೀವಟಿಗೆ ಹಿಡಿದು ಮುಂದೆ ಮುಂದೆ ಸಾಗುತ್ತಾರೆ. ರಥ ಉಮಾ ಚಂದ್ರಮೌಳೇಶ್ವರ ಮಠದಿಂದ ಸಾಗಿ. ಪಾದಕಟ್ಟಿ ಸ್ಥಳವನ್ನು ಮುಟ್ಟಿ ಬೆಳದಿಂಗಳಲ್ಲಿ ಮರಳುವಾಗ ರಥ ಎಳೆದ ಸಂತಸದ ನಗೆ ಮಹಿಳೆಯರ ಕಂಡುಬಂತು.
ಮಲ್ಲಿಕಾರ್ಜುನ ಮೆದಿಕೇರಿ, ದೋಟಿಹಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.