ಜಲ ಮೂಲಗಳಿಗೆ ಸೀಲ್ಡೌನ್! ಚಿತ್ತಾಪುರ ತಾಲ್ಲೂಕಿನಲ್ಲಿ ಉಚಿತ ನೀರು ಗಗನಕುಸುಮ?

ಮೌಳಿ ತಾಂಡಾ ಮನೆಗಳಿಗೆ ಬಂತು ಮೀಟರ್ ನಳ!

Team Udayavani, Mar 5, 2022, 1:38 PM IST

1-asdasd

ವಾಡಿ (ಚಿತ್ತಾಪುರ): ಗ್ರಾಮೀಣ ಜನರ ಪ್ರತಿರೋಧದ ನಡುವೆಯೂ ಚಿತ್ತಾಪುರ ತಾಲ್ಲೂಕಿನಲ್ಲಿ ಜಲಜೀವನ ಮಿಷನ್ ಯೋಜನೆ ಜಾರಿಗೆ ತರಲು ಅಧಿಕಾರಿಗಳ ಪ್ರಯತ್ನ ಮುಂದು ವರೆದಿದ್ದು, ಕಮರವಾಡಿ ಗ್ರಾಪಂ ವ್ಯಾಪ್ತಿಯ ಮೌಳಿ ತಾಂಡಾದ ಮನೆಗಳಿಗೆ ಈಗ ಮೀಟರ್ ನಳಗಳ ಜೋಡಣೆ ಕಾರ್ಯ ಶೇ.100 ರಷ್ಟು ಪೂರ್ಣಗೊಂಡಿದೆ.

ಕೃಷಿ ಮತ್ತು ಕೂಲಿ ಕೆಲಸವನ್ನೇ ನಂಬಿ ಜೀವನ ಸಾಗಿಸುತ್ತಿರುವ ಮೌಳಿ ತಂಡಾದ ಬಂಜಾರಾ (ಲಂಬಾಣಿ) ಕುಟುಂಬಗಳು, ಮೀಟರ್ ನಳಗಳಿಂದ ಆತಂಕಕ್ಕೀಡಾಗಿದ್ದಾರೆ. ಕೇವಲ ೩೬ ಮನೆಗಳಿರುವ ಈ ಕಿರು ತಾಂಡಾದಲ್ಲಿ ಶೇ.೯೯ ರಷ್ಟು ಬಿಪಿಎಲ್ ಬಡವರಿದ್ದಾರೆ. ಸ್ವಾತಂತ್ರಾöತ್ರ್ಯಾ ನಂತರದಿಂದ ಇಲ್ಲಿನ ಜನರು ದೂರದಲ್ಲಿ ಹರಿಯುತ್ತಿದ್ದ ಹಳ್ಳದ ನೀರು ತಂದು ಕುಡಿದು ಬುದಿಕಿದ್ದಾರೆ. ನಂತರ ಪಂಚಾಯತಿ ಕೊರೆಸಿದ ಸಾರ್ವಜನಿಕ ಕೊಳವೆ ಬಾವಿ ಇವರಿಗೆ ಆಸರೆಯಾಗಿತ್ತು. ನಳಗಳ ಸೌಲಭ್ಯದಿಂದ ವಂಚಿತರಾಗಿದ್ದ ತಾಂಡಾದ ಜನರ ಪ್ರತಿಯೊಂದು ಮನೆಗೆ ೭೫ ವರ್ಷಗಳ ಬಳಿಕ ನಳ ಸಂಪರ್ಕ ನೀಡಲಾಗಿದೆ. ಮನೆಗೆ ಕುಡಿಯುವ ನೀರಿನ ನಳ ಬಂದಿದೆ ಎಂದು ಖುಷಿ ಪಡುತ್ತಿದ್ದ ಜನರೀಗ ನಳಕ್ಕೆ ಅಳವಡಿಸಲಾಗಿರುವ ಮೀಟರ್ ಕಂಡು ಚಿಂತಿತರಾಗಿದ್ದಾರೆ. ಮುಂದೊಂದು ದಿನ ಪ್ರತಿ ತಿಂಗಳು ಬಿಲ್ ಬಂದರೆ ಹೇಗೆ? ಎಂಬ ಆತಂಕ ಅವರನ್ನು ಕಾಡುತ್ತಿದೆ.

ಕೈಯಿಂದ ಪಂಪ್ ಮಾಡಿ ನೀರು ತರಲಾಗುತ್ತಿದ್ದ ತಾಂಡಾದ ಜಲಮೂಲ ಕೊಳವೆ ಬಾವಿಗೂ ಈಗ ಸೀಲ್ಡೌನ್ ಮಾಡಲಾಗಿದ್ದು, ಜಲಜೀವನ ಮಿಷನ್ ಮೀಟರ್ ನಳದ ಯೋಜನೆಯ ನಿಜಬಣ್ಣ ಬಯಲಾಗಿದೆ. ಕೊಳವೆ ಬಾವಿಯಿಂದ ಜನರ ಮನೆಗಳಿಗೆ ನೇರ ಪೈಪ್‌ಲೈನ್ ಜೋಡಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಒಂದು ತಾಸು ನೀರು ಕೊಡಲಾಗುತ್ತಿದೆ. ಸಾರ್ವಜನಿಕರಿಂದ ರೂ.೭೦೦ ಮೀಟರ್ ಶುಲ್ಕ ಪಡೆದಿರುವ ಜಲಜೀವನ್ ಮಿಷನ್ ಯೋಜನೆಯ ಅಧಿಕಾರಿಗಳು, ಶುದ್ಧ ನೀರು ಸರಬರಾಜು ಮಾಡದೆ ಪ್ಲೋರಾಯ್ಡ್ಯುಕ್ತ ಬೋರ್‌ವೆಲ್ ನೀರನ್ನೇ ನೇರವಾಗಿ ಪೂರೈಸಲಾಗುತ್ತಿದೆ ಎಂಬ ಆರೋಪ ತಾಂಡಾ ಜನರಿಂದ ಕೇಳಿಬಂದಿದೆ.

ನಳಗಳಿಗೆ ಬೀಗ ಹಾಕುತ್ತಿದ್ದಾರೆ ಜನರು: ಜಲಜೀವನ್ ಮಿಷನ್ ಯೋಜನೆಯ ನಳಗಳು ಮೀಟರ್ ಇಲ್ಲದೆ ಜೋಡಣೆ ಕಂಡಿಲ್ಲ. ಯೋಜನೆಯ ಬಗ್ಗೆ ಅರಿಯದ ಮೌಳಿ ತಂಡಾದ ಮುಗ್ದ ಜನರಿಗೆ ನಳ ಕೊಟ್ಟು ಅಧಿಕಾರಿಗಳು ಮೀಟರ್ ಅಳವಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹೆಚ್ಚು ನೀರು ಬಳಸಿದರೆ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಜನರು ಕೂಲಿ ಕೆಲಸಕ್ಕೆ ಹೋಗುವಾಗ ನಳಗಳಿಗೆ ಬೀಗ ಜಡಿದು ಹೋಗುತ್ತಿದ್ದಾರೆ. ಕೆಲವರು ಮೀಟರ್ ಕಿತ್ತುಹಾಕಿ ನೇರವಾಗಿ ಪೈಪ್‌ದಿಂದ ನೀರು ಪಡೆಯುತ್ತಿದ್ದಾರೆ. ಒಟ್ಟಾರೆ ನಿಗೂಢತೆ ಕಾಪಾಡಿಕೊಂಡಿರುವ ಮೀಟರ್ ನಳ ಯೋಜನೆ ಮಾತ್ರ ಗ್ರಾಮೀಣ ಜನರ ನಿದ್ದೆಗೆಡಿಸಿದೆ.

“ಮೀಟರ್ ಹಚ್ಚಿ ನಮಗೆ ನಿದ್ದೆ ಬರದಂಗೆ ಮಾಡಿದ್ದಾರೆ. ಕುಡಿಯಲು ಉಚಿತವಾಗಿ ನೀರು ಕೊಡಬೇಕಾದ ಸರ್ಕಾರ ವಿದ್ಯುತ್ ಬಿಲ್ ಮಾದರಿಯಲ್ಲಿ ನೀರಿಗೂ ದರ ನಿಗದಿಪಡಿಸಲು ಮುಂದಾಗಿದೆ. ಹೊಲಗಳಲ್ಲಿ ಕೂಲಿ ಕೆಲಸ ಮಾಡಿ ಬದುಕುವ ನಾವು ನೀರಿನ ಬಿಲ್ ಕಟ್ಟಲು ಸಾಧ್ಯವಿಲ್ಲ. ನಳ ಇರಲಿ ಪಂಚಾಯಿತಿಗೆ ವಾರ್ಷಿಕ ತೆರಿಗೆ ಪಾವತಿಸುತ್ತೇವೆ. ಆದರೆ ಈ ಮೀಟರ್ ಮಾತ್ರ ಬೇಡ”
-ಠಾಕೂರ ರಾಠೋಡ. ಮೌಳಿ ತಾಂಡಾ ನಿವಾಸಿ.

ವರದಿ : ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.