ಯಡಿಯೂರಪ್ಪನವರಂತಹ ನಾಯಕ ಹುಡುಕಿದರೂ‌ ಸಿಗುವುದಿಲ್ಲ: ಸಿಎಂ ಬೊಮ್ಮಾಯಿ

ಶಿಕಾರಿಪುರದಲ್ಲಿ‌ ರೈತಾಭಿಮಾನ‌ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹಾಡಿ ಹೊಗಳಿದ ಹಾಲಿ ಸಿಎಂ

Team Udayavani, Mar 5, 2022, 5:34 PM IST

1-sdds

ಶಿಕಾರಿಪುರ : ನಾನು ರಾಜಕಾರಣದಲ್ಲಿ ಇಷ್ಟರಮಟ್ಟಿಗೆ ಬೆಳೆದಿದ್ದರೆ ಅದಕ್ಕೆ ಆಶೀರ್ವಾದ ಮಾಡಿದ್ದು ಯಡಿಯೂರಪ್ಪ ಅವರು, ಇಂಥ ದೊಡ್ಡ‌ ಮನಸ್ಸಿನ ನಾಯಕ ಹುಡುಕಿದರೂ‌ ಸಿಗುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಅವರನ್ನು ಶನಿವಾರ ಹಾಡಿ ಹೊಗಳಿದ್ದಾರೆ.

ಶಿಕಾರಿಪುರದಲ್ಲಿ‌ ನಡೆದ ರೈತಾಭಿಮಾನ‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ಯಡಿಯೂರಪ್ಪ ಅವರು ಬಡವರು ಬಗ್ಗೆ ದೀನ‌ದಲಿತರ ಬಗ್ಗೆ ಕಾಳಜಿ ಇರುವವರಾಗಿದ್ದಾರೆ. ನನ್ನನ್ನು ಪ್ರೀತಿ ವಿಶ್ವಾಸದಿಂದ ಬೆಳೆಸಿ ಅಧಿಕಾರವನ್ನು ನೀಡಿದ್ದಾರೆ. ನನ್ನನ್ನು ಜಲಸಂಪನ್ಮೂಲ‌ ಸಚಿವವನ್ನು ಮಾಡಿ ನೀರಾವರಿ ಯೋಜನೆ ರೂಪಿಸುವ ಕೆಲಸ ಮಾಡಿಸಿದವರು.ಭದ್ರಾ ಮೇಲ್ದಂಡೆ ಯೋಜನೆಯನ್ನು ನನ್ನ ಅವಧಿಯಲ್ಲೇ ಮಾಡಿದ್ದು ಎಂಬ ಸಂತಸ ನನಗಿದೆ. ಭದ್ರಾ ಮೇಲ್ದಂಡೆ ಯೋಜನೆ ಇದೀಗ ರಾಷ್ಟ್ರೀಯ ಯೋಜನೆಯಾಗುತ್ತಿದೆ. ಇದರ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.

ದೂರದೃಷ್ಟಿಯ ನಾಯಕತ್ವ ಇದ್ದವರು ಇದ್ದರೆ ರಾಜ್ಯ ಸುಭೀಕ್ಷವಾಗುತ್ತದೆ ಎಂಬುದಕ್ಕೆ ಯಡಿಯೂರಪ್ಪ ಅವರೇ ನಿದರ್ಶನ.ಶಿಕಾರಿಪುರ ತಾಲೂಕು ಸಂಪೂರ್ಣ ನೀರಾವರಿಯಾಗುತ್ತಿದೆ.ನಾನು ನೀರಾವರಿ ಸಚಿವನಾದಾಗ ನಾನು ಚಾಮರಾಜ ನಗರಕ್ಕೆ ಹೋಗಿದ್ದೆ.ಆಗ ಸುತ್ತೂರು ಶ್ರೀಗಳು ನೀರಾವರಿ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.ಆಗ ಕಬಿನಿ ಸೆಕೆಂಡ್ ಸ್ಟೇಜ್ ಯೋಜನೆ ರೂಪಿಸಲು ಕಾರಣಿಕರ್ತರಾದವರು ಯಡಿಯೂರಪ್ಪ ಅವರು.ಬಳಿಕ ನಾವು ಅಧಿಕಾರ ಕಳೆದುಕೊಂಡೆವು. ಆದರೂ ಜನ ಯಡಿಯೂರಪ್ಪ ಅವರನ್ನು ಹುಡುಕಿಕೊಂಡು ಬಂದು ಸನ್ಮಾನ ಮಾಡುತ್ತಿದ್ದರು.ಈ ರೀತಿಯ ಪ್ರೀತಿ ಸಿಗಬೇಕು ಎಂದರೆ ಹಾಗೆ ಕೆಲಸವನ್ನೂ ಮಾಡಬೇಕು. ಯಡಿಯೂರಪ್ಪ ರಾಜ್ಯದ ಮೂಲೆ ಮೂಲೆಯಲ್ಲಿ ಕೆಲಸ ಮಾಡಿದ್ದಾರೆ. ಅವರ ಕೆಲಸಗಳು ಇಂದು ಮಾತನಾಡುತ್ತಿವೆ ಎಂದರು.

ಯಾವುದೇ ಕೆಲಸ ಮಾಡಬೇಕು ಎಂದು ಕೊಂಡರೆ ಅದನ್ನು ಮಾಡಿಯೇ ತೀರುವವರು ಯಡಿಯೂರಪ್ಪ ಅವರು.ನಾಯಕನಿಗೆ ಸೂಕ್ಷ್ಮತೆ ಇರಬೇಕು ಎಂಬುದನ್ನು ನಾವು ಯಡಿಯೂರಪ್ಪ ಅವರನ್ನು ನೋಡಿ ಕಲಿಯಬೇಕಿದೆ. ರೈತರಿಗೆ ಹತ್ತು ಎಚ್ ಪಿ ಪಂಪ್ ವರೆಗೆ ಉಚಿತ ವಿದ್ಯುತ್ ನೀಡಿದ್ದು ಯಡಿಯೂರಪ್ಪ ಅವರು. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 58 ಲಕ್ಷ ರೈತರಿಗೆ ತಲಾ 4 ಸಾವಿರ ರೂಪಾಯಿ ರಾಜ್ಯದ ಪಾಲನ್ನು ನೀಡಿದ್ದು ಯಡಿಯೂರಪ್ಪ ಅವರು.ಅವರು ಎಂದು ವೈಯಕ್ತಿಕವಾಗಿ ಯೋಚಿಸುವುದಿಲ್ಲ‌. ಅವರು ಅಧಿಕಾರ ಬಿಟ್ಟಾಗಲೂ ಅವರಲ್ಲಿ ಕಹಿ ಎಂಬುದಿರಲಿಲ್ಲ‌. ಮತ್ತೆ ರಾಜ್ಯ ಸುತ್ತಿ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂಬುದ ಅವರ ಬದ್ಧತೆ ತೋರುತ್ತಿದೆ ಎಂದರು.

ರಾಜ್ಯದಲ್ಲಿ ಕೋವಿಡ್ ಯಶಸ್ವಿಯಾಗಿ ನಿಭಾಯಿಸಿದ್ದು ಯಡಿಯೂರಪ್ಪ ಅವರು‌.ಬಜೆಟ್ ನಲ್ಲಿ ಇದನ್ನು‌ನಾನು ಹೇಳಿದ್ದೇನೆ.ಯಡಿಯೂರಪ್ಪ ಹಾಕಿಕೊಟ್ಟ ಯೋಜನೆಗಳು ಹಾಗೂ ಹಾದಿಯಲ್ಲಿ ನಾವು ನಡೆಯುತಿದ್ದೇವೆ.ನಾನು ಬಜೆಟ್ ನಲ್ಲಿ ದುಡಿಮೆಯೇ ದೊಡ್ಡಪ್ಪ ಎಂದು ಹೇಳಿದ್ದೇನೆ.
ನಾನು‌ ಜನರಲ್ಲಿ ನಂಬಿಕೆ ಇಟ್ಟಿದ್ದೇನೆ. ಅವರಿಗೆ ಸಹಾಯ ಮಾಡಿದಾರೆ ದುಡಿದು ಹೆಚ್ಚಿನ ಆದಾಯ ಗಳಿಸುತ್ತಾರೆ ಎಂಬ ನಂಬಿಕೆ ನನಗಿದೆ. ಕರ್ನಾಟಕ ಇಡೀ ದೇಶದಲ್ಲಿ ಮಾದರಿಯಾಗಬೇಕು‌ ಎಂಬ ಯಡಿಯೂರಪ್ಪ ಅವರ ಆಸೆಯಂತೆಯೇ ನಾನು ಕೆಲಸ ಮಾಡುತ್ತೇನೆ ಎಂದರು.

ಟಾಪ್ ನ್ಯೂಸ್

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆDelhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆDelhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.