ದೊಡ್ಡಹೆಜ್ಜೂರು ಹೆಚ್ಚುವರಿ ಕಾಮಗಾರಿಗೆ ಶಾಸಕ ಮಂಜುನಾಥ್ ಚಾಲನೆ
Team Udayavani, Mar 5, 2022, 6:59 PM IST
ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಹನಗೋಡು ಹೋಬಳಿಯ ದೊಡ್ಡಹೆಜ್ಜೂರು ಏತನೀರಾವರಿ ಯೋಜನೆಯ ಹೆಚ್ಚುವರಿ ಕಾಮಗಾರಿಗೆ ಕಪ್ಪನಕಟ್ಟೆ ಹಾಡಿ ಬಳಿ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು.
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕರು ಈ ಹಿಂದೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ವಿಶೇಷ ಘಟಕ ಯೋಜನೆಯಡಿ 5.20 ಕೋಟಿ ವೆಚ್ಚದಲ್ಲಿ ಲಕ್ಷ್ಮಣತೀರ್ಥ ನದಿಯಿಂದ ನದಿಯಿಂದ ದೊಡ್ಡಹೆಜ್ಜೂರು, ಕಪ್ಪನಕಟ್ಟೆ ಹಾಡಿಯ ಪರಿಶಿಷ್ಟ ಜಾತಿ- ವರ್ಗಗಳ ಸಮುದಾಯದವರ 700 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಯೋಜನೆ ಅನುಷ್ಟಾನಗೊಳಿಸಲಾಗಿತ್ತು. ಆದರೆ ಇನ್ನೂ ಸಾಕಷ್ಟು ಮಂದಿ ರೈತರ ಭೂಮಿಗೆ ನೀರು ಪೂರೈಸಲು ಪೈಪ್ ಅಳವಡಿಕೆ ಹಾಗೂ ಕಾಲುವೆ ನಿರ್ಮಾಣದ ಕಾಮಗಾರಿ ಅಗತ್ಯತೆ ಇತ್ತು. ಇದರಿಂದ ಯೋಜನೆ ಉದ್ಘಾಟನೆಗೊಂಡಿರಲಿಲ್ಲ.
ಇದೀಗ ವಿಶೇಷ ಘಟಕ ಯೋಜನೆಯಡಿ ಹೆಚ್ಚುವರಿಯಾಗಿ 1.90ಕೋಟಿರೂ ವೆಚ್ಚದಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಯನ್ನು 2 ತಿಂಗಳೊಳಗೆ ಮುಗಿಸಿ, ಯೋಜನೆ ಉದ್ಘಾಟನೆ ಮೂಲಕ ರೈತರಿಗೆ ಇಂಜಿನಿಯರ್‌ಗಳಿಗೆ ಹಾಗೂ ಗುತ್ತಿಗೆದಾರನಿಗೆ ಸೂಚಿಸಿದರು. ಕಾಮಗಾರಿ ನಡೆಯುವ ವೇಳೆ ರೈತರು ಭೂಮಿಯನ್ನು ಬಿಟ್ಟುಕೊಟ್ಟು ಸಹಕರಿಸುವಂತೆ ಮನವಿ ಮಾಡಿದರು.
ಸಣ್ಣ ನೀರಾವರಿಇಲಾಖೆ ಎಇಇ ಯೋಗೀಶ್ ಮಾತನಾಡಿ ಮೈಸೂರಿನ ವಿಜಯಲಕ್ಷಿö್ಮ ಕನ್ಟçಕ್ಷನ್ಸ್ರವರು ಟೆಂಡರ್ ಪಡೆದಿದ್ದು, ಕಾಲಮಿತಿಯೊಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ. ಈ ಏತನೀರಾವರಿ ಯೋಜನೆಯಿಂದ ರಾಗಿ, ಜೋಳ, ಕಡ್ಲೆಕಾಯಿ ಮತ್ತಿತರ ದ್ವಿದಳಧಾನ್ಯದ ಬೆಳೆಗಳನ್ನು ಬೆಳೆಯಲು ನೀರೊದಗಿಸಲಾಗುವುದೆಂದರು. ಸಹಾಯಕ ಇಂಜಿನಿಯರ್ ಸುರೇಶ್ ಸಹ ಮಾಹಿತಿ ನೀಡಿದರು.
ದೊಡ್ಡಹೆಜ್ಜೂರು ಗ್ರಾ.ಪಂ.ಅಧ್ಯಕ್ಷ ಶಿವಶಂಕರ್, ಸದಸ್ಯರಾದ ಯಶೋಧಾ, ನಟರಾಜ್, ವಿಜಯ್, ಕಾಂಗ್ರೆಸ್ ಅಧ್ಯಕ್ಷ ನಾರಾಯಣ್, ಎಪಿಎಂಸಿ ಅಧ್ಯಕ್ಷ ಕೆಂಪೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಮುದಗನೂರುಸುಭಾಷ್, ಮುಖಂಡರಾದ ಹೊಂಬೇಗೌಡ, ಗಣೇಶ್, ಕಸ್ತೂರಿಗೌಡ, ಬಸವಣ್ಣ, ಸಾವರ್, ನವೀನ್ ಮತ್ತಿತರರಿದ್ದರು.
ಕಾರ್ಯಕ್ರಮ ಬಹಿಷ್ಕರಿಸಿದ ಆದಿವಾಸಿಗಳು:
ದೊಡ್ಡಹೆಜ್ಜೂರಿನ ಟ್ಯಾಂಕ್ ಬಳಿಯಿಂದ ಕಪ್ಪನಕಟ್ಟೆ ಹಾಡಿವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಎಚ್.ಪಿ.ಮಂಜುನಾಥರು ಗುದ್ದಲಿ ಪೂಜೆ ನೆರವೇರಿಸಿ ಎರಡು ತಿಂಗಳಾಗಿದ್ದರೂ ಕಾಮಗಾರಿ ಆರಂಭಿಸದಿದ್ದರಿಂದ ಮುನಿಸಿಕೊಂಡ ಹಾಡಿಯ ಗಿರಿಜನರು ಕಾರ್ಯಕ್ರಮವನ್ನು ಬಹಿಷ್ಕರಿಸಿದರು. ಈ ಬಗ್ಗೆ ಶಾಸಕ ಮಂಜುನಾಥರು ಪಿಎಂಜಿಎಸ್‌ವೈ ಯೋಜನೆಯಡಿ 70 ಲಕ್ಷ ವೆಚ್ಚದ ಕಾಮಗಾರಿಗೆ ಪೂಜೆ ನೆರವೇರಿಸಿದ್ದರೂ ಟೆಂಡರ್ ಪಡೆದಿರುವ ಗುತ್ತಿಗೆದಾರ ಅನುದಾನ ಬಂದಿಲ್ಲವೆಂಬ ಕಾರಣವೊಡ್ಡಿ ಕಾಮಗಾರಿ ಆರಂಭಿಸಿಲ್ಲವೆಂದು ಬೇಸರ ವ್ಯಕ್ತಪಡಿಸಿ ಅಲ್ಲಿಂದಲೇ ಮುಖ್ಯ ಇಂಜಿನಿಯರ್ ಜೊತೆ ಚರ್ಚಿಸಿ, ತಕ್ಷಣವೇ ಕಾಮಗಾರಿ ಆರಂಭಿಸುವಂತೆ ತಾಕೀತು ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.