ಪಾಕ್ ಪಂದ್ಯ: ಮಿಥಾಲಿ ಪಡೆಗೆ ಗುಡ್ ಲಕ್
ಇಂದಿನಿಂದ ಭಾರತದ ವನಿತಾ ವಿಶ್ವಕಪ್ ಅಭಿಯಾನ ಆರಂಭ
Team Udayavani, Mar 6, 2022, 6:55 AM IST
ಮೌಂಟ್ ಮೌಂಗನುಯಿ: ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಬಹು ದೊಡ್ಡ ಗುರಿ ಯೊಂದಿಗೆ ಮಿಥಾಲಿ ರಾಜ್ ನಾಯಕತ್ವದ ಭಾರತದ ವನಿತಾ ತಂಡ ರವಿವಾರದಿಂದ ತನ್ನ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯದಲ್ಲೇ ಭಾರತ ಬದ್ಧ ಎದುರಾಳಿ ಪಾಕಿಸ್ಥಾನವನ್ನು ಎದುರಿ ಸಲಿರುವುದು ವಿಶೇಷ!
ಪಾಕಿಸ್ಥಾನ ವಿರುದ್ಧ ಭಾರತದ್ದು ಈವರೆಗೆ ಅಜೇಯ ದಾಖಲೆ ಎಂಬುದನ್ನು ಮರೆಯುವಂತಿಲ್ಲ. ಆಡಿದ ಹತ್ತೂ ಪಂದ್ಯಗಳನ್ನು ಭಾರತ ಜಯಿಸಿದೆ. ಇದರಲ್ಲಿ ಎರಡು ಗೆಲುವು ಏಕದಿನ ವಿಶ್ವಕಪ್‌ನಲ್ಲಿ ಬಂದಿವೆ.
ಬೌಲಿಂಗ್ ಸುಧಾರಣೆ ಅಗತ್ಯ
2005 ಮತ್ತು ಕಳೆದ ಸಲದ ರನ್ನರ್ ಅಪ್ ಆಗಿರುವ ಭಾರತಕ್ಕೆ ಕಪ್ ಒಲಿಯಬೇಕಾದರೆ ಬೌಲಿಂಗ್ ವಿಭಾಗದಲ್ಲಿ ಸುಧಾರಣೆ ಕಂಡುಬರಬೇಕಾದ ಅಗತ್ಯವಿದೆ. ಮೌಂಟ್ ಮೌಂಗನುಯಿ ಟ್ರ್ಯಾಕ್ ಬ್ಯಾಟಿಂಗಿಗೆ ನೆರವಾಗುವ ಸಾಧ್ಯತೆ ಹೆಚ್ಚು. ಹಾಗೆಯೇ ಚೇಸಿಂಗ್ ಕೂಡ ಕಠಿನವಲ್ಲ. ಇಂಥ ಸ್ಥಿತಿಯಲ್ಲಿ ಬೌಲಿಂಗ್ ಹೆಚ್ಚು ಪರಿಣಾಮಕಾರಿ ಆಗಿರಬೇಕು. ವೇಗದ ವಿಭಾಗದಲ್ಲಿ ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್; ಸ್ಪಿನ್ ವಿಭಾಗದಲ್ಲಿ ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮ ಅವರಂಥ ಸ್ಟಾರ್ ಬೌಲರ್ ಇದ್ದಾರೆ.
ಬ್ಯಾಟಿಂಗ್‌ನಲ್ಲಿ ಶಫಾಲಿ ವರ್ಮ, ಹರ್ಮನ್‌ಪ್ರೀತ್ ಕೌರ್ ಲಯ ಕಂಡುಕೊಂಡರೆ ಭಾರತಕ್ಕದು ಬೋನಸ್. ಮಂಧನಾ, ಮಿಥಾಲಿ, ಯಾಸ್ತಿಕಾ, ದೀಪ್ತಿ, ರಿಚಾ ಈಗಾಗಲೇ ನ್ಯೂಜಿಲ್ಯಾಂಡ್ ಟ್ರ್ಯಾಕ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.