ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಲಿದೆಯೇ ಯುದ್ಧ?
Team Udayavani, Mar 7, 2022, 8:00 AM IST
ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಆರಂಭಿಸಿ ರುವ ಯುದ್ಧವು ಜಾಗತಿಕ ಆರ್ಥಿಕತೆಯಲ್ಲಿ ಅನಿಶ್ಚತತೆಗೆ ಕಾರಣವಾಗಿದೆ. ಪುತಿನ್ ನಡೆಯನ್ನು ಖಂಡಿಸಿ ಹಲವು ರಾಷ್ಟ್ರಗಳು ಈಗಾ ಗಲೇ ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ಹೇರಿವೆ. ಆದರೆ ಈ ಕ್ರಮಗಳು ಕೇವಲ ರಷ್ಯಾ ಮೇಲೆ ಮಾತ್ರ ವಲ್ಲದೆ ಜಗತ್ತಿನ ಇತರ ರಾಷ್ಟ್ರಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುವುದು ಖಚಿತ.
ವಿದೇಶಿ ಬ್ಯಾಂಕುಗಳಲ್ಲಿ ರಷ್ಯಾದ ಸುಮಾರು 100 ಶತಕೋಟಿ ಡಾಲರ್ ಸಾಲವಿದೆ. ಆರ್ಥಿಕ ದಿಗ್ಬಂಧನದಿಂದಾಗಿ ರಷ್ಯಾದ ಹೊರಗಿರುವ ಬ್ಯಾಂಕುಗಳೇನಾದರೂ ಸುಸ್ತಿದಾರರಾಗಿ ಬದ ಲಾದರೆ 2008ರ ಮಾದರಿಯ ಬಿಕ್ಕಟ್ಟು ಎದು ರಾಗುವ ಸಾಧ್ಯತೆಯಿದೆ. ಅಂದರೆ, ಬ್ಯಾಂಕುಗಳ ನಡುವೆಯೇ ದಿವಾಳಿಯ ಭೀತಿ ಮೂಡಿ, ಪರಸ್ಪರ ಹಣ ವಿನಿಮಯ ಮಾಡುವುದನ್ನೇ ಸ್ಥಗಿತಗೊಳಿಸಬಹುದು.
ಇದಲ್ಲದೇ ಸ್ವಿಜರ್ಲೆಂಡ್, ಸೈಪ್ರಸ್, ಯುಕೆಯಂಥ ರಾಷ್ಟ್ರಗಳಲ್ಲಿ ರಷ್ಯಾದ ಕೋಟ್ಯಧಿಪತಿಗಳು ತಮ್ಮ ಹಣವನ್ನು ಠೇವಣಿಯಿಟ್ಟಿದ್ದಾರೆ. ಆರ್ಥಿಕ ದಿಗ್ಬಂಧನ ದಿಂದಾಗಿ ಈ ದೇಶಗಳ ಹಣಕಾಸು ಸಂಸ್ಥೆಗಳ ವಹಿವಾಟು ತಗ್ಗಲಿದೆ. ಈಗಾಗಲೇ ಯುಕೆ ಬ್ಯಾಂಕ್ ಲಾಯ್ಡ್ಸ್ ಮತ್ತು ನ್ಯಾವೆಸ್ಟ್ ಷೇರುಗಳು ಶೇ.10ರಷ್ಟು ಕುಸಿದಿವೆ.
ಬ್ಯಾಂಕುಗಳು ಮಾತ್ರವಲ್ಲದೆ, ಇನ್ನೂ ಹಲವಾರು ಉದ್ಯಮಗಳ ಮೇಲೂ ಯುದ್ಧವು ವ್ಯತಿರಿಕ್ತ ಪರಿಣಾಮ ಬೀರಲಿವೆ. ರಷ್ಯಾದ ಉದ್ದಿಮೆಗಳೊಂದಿಗೆ ವಹಿವಾಟು ನಡೆಸುತ್ತಿ ರುವ ಕಂಪೆನಿಗಳು ಭಾರೀ ಸಂಕಷ್ಟ ಅನುಭವಿ ಸಲಿವೆ. ರಷ್ಯಾ ಕರೆನ್ಸಿ ರೂಬಲ್ ಶೇ.30ರಷ್ಟು ಪತನಗೊಂಡಿರುವುದು, ಸ್ವಿಫ್ಟ್ ಹಣಕಾಸು ಜಾಲದ ಮೇಲಿನ ನಿರ್ಬಂಧವು ಪಾವತಿ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲವಾಗಿಸ ಲಿದೆ. ಒಟ್ಟಿನಲ್ಲಿ ರಷ್ಯಾ-ಉಕ್ರೇನ್ ಯುದ್ಧವು ಹಲವು ಕ್ಷೇತ್ರಗಳನ್ನು ಕಂಗೆಡಿಸಲಿದ್ದು, ಮುಂಬರುವ ದಿನಗಳಲ್ಲಿ ಇದರ ಫಲಿತಾಂಶ ಕಂಡು ಬರಲಿದೆ ಎನ್ನುತ್ತಾರೆ ವಿಶ್ಲೇಷಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.