ಆಪರೇಷನ್ ಗಂಗಾ ಹಿಂದಿದೆ ಯುವ ಶಕ್ತಿ
ಬುಡಾಪೆಸ್ಟ್‌ನಲ್ಲಿ ಭಾರತೀಯರ ಸ್ಥಳಾಂತರಕ್ಕೆ ಶ್ರಮಿಸುವ 30 ಐಎಫ್ಎಸ್ ಅಧಿಕಾರಿಗಳು
Team Udayavani, Mar 7, 2022, 7:10 AM IST
ಬುಡಾಪೆಸ್ಟ್: ಅದು ಬುಡಾಪೆಸ್ಟ್‌ನ ಹೊಟೇಲೊಂದರ ಸಣ್ಣ ಕೊಠಡಿ. ಕೆಲವು ದಿನಗಳಿಂದ ದಿನದ 24 ಗಂಟೆಯೂ ಗಿಜಿಗುಡುತ್ತಿದೆ. ಒಳಗಿರುವ ವರಲ್ಲಿ ಆತಂಕದ ಜತೆಗೆ ಧಾವಂತ, ನಿರಂತರ ಫೋನ್‌ಕರೆ, ಒಮ್ಮೆ ಏದುಸಿರು, ಮತ್ತೂಮ್ಮೆ ನಿಟ್ಟುಸಿರು!
ಉಕ್ರೇನ್‌ನ ನೆರೆರಾಷ್ಟ್ರವಾದ ಹಂಗೇರಿಯ ಬುಡಾ ಪೆಸ್ಟ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಸ್ಥಾಪಿ ಸಿರುವ ನಿಯಂತ್ರಣ ಕೊಠಡಿಯ ಚಿತ್ರಣವಿದು.
ಯುದ್ಧ ಆರಂಭವಾದಾಗಿನಿಂದಲೂ ಇಲ್ಲೇ “ಆಪರೇಷನ್ ಗಂಗಾ’ ಟೀಂ ಕಾರ್ಯ ನಿರ್ವಹಿಸು ತ್ತಿದ್ದು, ಸುಮಾರು 30 ಯುವ ಐಎಫ್ಎಸ್ (ಭಾರ ತೀಯ ವಿದೇಶಾಂಗ ಸೇವೆಗಳು) ಅಧಿಕಾರಿಗಳ ತಂಡವು ಉಕ್ರೇನ್‌ನಲ್ಲಿನ ಭಾರತೀಯರ ಸ್ಥಳಾಂತರಕ್ಕೆ ಹಗಲಿರುಳೆನ್ನದೆ ದುಡಿಯು ತ್ತಿದೆ. “ಆಪರೇಷನ್ ಗಂಗಾ’ ಯಶಸ್ವಿಯಾಗಲು ವಿಶೇಷವಾಗಿ ಶ್ರಮಿಸು ತ್ತಿದ್ದಾರೆ. ಹಲವು ತಾಂತ್ರಿಕ ಸಿಬಂದಿ ಮತ್ತು 150ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಸ್ವಯಂಸೇವಕರಾಗಿ ಈ ಕಾರ್ಯಕ್ಕೆ ಜತೆಯಾಗಿದ್ದಾರೆ.
ರಾಜ್ಯ ಅಧಿಕಾರಿಗಳ ತಂಡ
ಬೆಂಗಳೂರು: ಉಕ್ರೇನ್‌ನಿಂದ ಬರುವ ರಾಜ್ಯದ ವಿದ್ಯಾರ್ಥಿಗಳಿಗೆ ಸಕಲ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವೂ ಅನೇಕ ಕ್ರಮಗಳನ್ನು ಕೈಗೊಂಡಿದೆ. ದಿಲ್ಲಿ ಹಾಗೂ ಮುಂಬಯಿಯಲ್ಲಿ ಕರ್ನಾಟಕ ಭವನದ ಸ್ಥಳೀಯ ಆಯುಕ್ತರ ನೇತೃತ್ವದಲ್ಲಿ ವಿದ್ಯಾರ್ಥಿ ಗಳನ್ನು ಬರಮಾಡಿಕೊಳ್ಳಲಾಗುತ್ತಿದೆ. ರಾಜ್ಯ ಸರಕಾರ ಮನೋಜ್ ರಂಜನ್ ನೇತೃತ್ವದಲ್ಲಿ ವಿಶೇಷ ಆಯುಕ್ತ ರನ್ನು ನೇಮಿಸಿದೆ. ಅವರ ಮಾರ್ಗದರ್ಶನದಲ್ಲಿ ದಿಲ್ಲಿ, ಮುಂಬಯಿ ವಿಮಾನ ನಿಲ್ದಾಣದಲ್ಲಿ ಇಬ್ಬರು ಕರ್ನಾಟಕದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಉಕ್ರೇನ್‌ನಿಂದ ಯಾವ ವಿಮಾನದಲ್ಲಿ ಎಷ್ಟು ಕರ್ನಾಟಕದ ವಿದ್ಯಾರ್ಥಿಗಳು, ಜನರು ಆಗಮಿಸುತ್ತಾರೆ ಎನ್ನುವುದನ್ನು ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಸುರಕ್ಷಿತವಾಗಿ ಅವರ ಊರುಗಳಿಗೆ ತಲುಪಿ ಸುವ ಕೆಲಸವನ್ನು ಮಾಡುತ್ತಿದ್ದಾರೆ. ಫೆ.27ರಿಂದ ಮಾ.6ರ ವರೆಗೆ ರಾಜ್ಯದ 448 ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ.
ಹೇಗೆ ಕಾರ್ಯನಿರ್ವಹಿಸುತ್ತದೆ?
01 ಕಂಟ್ರೋಲ್ ರೂಂನಲ್ಲಿ ಕಮಾಂಡ್ ಸೆಂಟರ್ ಇದೆ. ಎಷ್ಟು ಮಂದಿ ಭಾರತೀಯರು ಗಡಿ ದಾಟಿ ಬಂದರು? ಇವರಲ್ಲಿ ಎಷ್ಟು ಜನರು ಬುಡಾಪೆಸ್ಟ್‌ಗೆ ಬರುತ್ತಾರೆ ಎಂಬ ಮಾಹಿತಿಯನ್ನು ಗಡಿಯಲ್ಲಿರುವ ತಂಡವು ಕಮಾಂಡ್ ಸೆಂಟರ್‌ಗೆ ರವಾನಿಸುತ್ತದೆ.
02 ತಂಡವನ್ನು ಸಾರಿಗೆ, ವಸತಿ, ಆಹಾರ ಮತ್ತು ವಿಮಾನ ಎಂಬ 4 ಭಾಗಗಳಾಗಿ ವಿಂಗಡಿಸಲಾಗಿದೆ. ಉಕ್ರೇನ್‌ನಿಂದ ಜನರು ರಸ್ತೆ, ರೈಲು, ಖಾಸಗಿ ವಾಹನಗಳು ಹಾಗೂ ಕಾಲ್ನಡಿಗೆಯಲ್ಲೂ ಬರುತ್ತಿದ್ದಾರೆ. ಗಡಿ ತಲುಪಿದ ಕೂಡಲೇ ಅಲ್ಲಿಂದ ಅವರನ್ನು ವಸತಿ ವ್ಯವಸ್ಥೆಯಿರುವ ಕಡೆಗೆ ಕಳುಹಿಸುವ ಕೆಲಸವನ್ನು ಸಾರಿಗೆ ತಂಡ ಮಾಡುತ್ತದೆ.
03 2ನೇ ತಂಡವು, ಗಡಿಯಿಂದ ಬಂದ ಜನರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಅದಕ್ಕೆಂದೇ 40 ಸ್ಥಳಗಳನ್ನು ನಿಗದಿಪಡಿಸಲಾಗಿದೆ.
04 3ನೇ ತಂಡವು ಅಲ್ಲಿ ತಂಗಿರುವ ಎಲ್ಲರಿಗೂ ದಿನಕ್ಕೆ 3 ಬಾರಿ ಆಹಾರ ಒದಗಿಸುತ್ತದೆ.
05 4ನೇ ತಂಡವನ್ನು ವಿಮಾನ ನಿಲ್ದಾಣದಲ್ಲಿ ನಿಯೋಜಿಸ ಲಾಗಿದೆ. ಏರ್‌ಪೋರ್ಟ್‌ನಲ್ಲಿ ಎಷ್ಟು ವಿಮಾನಗಳಿವೆ, ಯಾವ ಸಮಯಕ್ಕೆ ಎಷ್ಟು ಮಂದಿಯನ್ನು ಕಳುಹಿಸಬಹುದು ಎಂಬ ಮಾಹಿತಿಯನ್ನು ಈ ತಂಡ ರವಾನಿಸುತ್ತದೆ. ಅದರಂತೆ, ಸ್ಥಳಾಂತರ ಕಾರ್ಯ ನಡೆಯುತ್ತದೆ.
30 ಮಂದಿಯ ಪ್ರಮುಖ ತಂಡವು ನಿಯಂತ್ರಣ ಕೊಠಡಿ ಯಲ್ಲಿ ಕೆಲಸ ಮಾಡುತ್ತಿದೆ. ಜತೆಗೆ 150ಕ್ಕೂ ಹೆಚ್ಚು ಸ್ವಯಂ ಸೇವಕರು ದಿನ ವಿಡೀ ನಿಸ್ವಾರ್ಥವಾಗಿ ಸಹಾಯ ಮಾಡು ತ್ತಿದ್ದಾರೆ. ಕೆಲವರಂತೂ ಕಚೇರಿಗೆ ರಜೆ ಹಾಕಿ ಇಲ್ಲಿಗೆ ಬಂದಿ ದ್ದಾರೆ. ಎಲ್ಲರ ಸಮನ್ವಯತೆ ಯಿಂದಾಗಿ ಕೆಲಸ ಸುಲಭ ವಾಗಿ ಆಗುತ್ತಿದೆ.
– ರಾಜೀವ್ ಬೋಡ್ವಡೆ,
ಆಪರೇಷನ್ ಗಂಗಾ ಉಪ ಮುಖ್ಯಸ್ಥರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.