ಟೆಸ್ಟ್ ತಂಡದಿಂದ ಕುಲದೀಪ್ ಯಾದವ್ ಬಿಡುಗಡೆ
Team Udayavani, Mar 8, 2022, 6:50 AM IST
ಹೊಸದಿಲ್ಲಿ: ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನು ಭಾರತದ ಟೆಸ್ಟ್ ತಂಡದಿಂದ ಬಿಡುಗಡೆ ಮಾಡಲಾಗಿದೆ.
ಸಂಪೂರ್ಣ ಚೇತರಿಕೆ ಕಂಡು ಫಿಟ್ ಆಗಿರುವ ಅಕ್ಷರ್ ಪಟೇಲ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಕುಲದೀಪ್ ಯಾದವ್ ಅವರೇನೂ ಗಾಯಾಳು ಅಕ್ಷರ್ ಪಟೇಲ್‌ಗೆ ಬ್ಯಾಕ್-ಅಪ್ ಆಗಿ ಟೆಸ್ಟ್ ತಂಡದಲ್ಲಿ ಇದ್ದವರಲ್ಲ. ಆದರೆ ತಂಡಕ್ಕೆ ಮೂರು ಮಂದಿ ಎಡಗೈ ಸ್ಪಿನ್ನರ್ ಅಗತ್ಯವಿಲ್ಲ ಎಂದು ಆಡಳಿತ ಮಂಡಳಿ ನಿರ್ಧರಿಸಿತು.ಹೀಗಾಗಿ ಕುಲದೀಪ್ ಯಾದವ್ ಹೊರಬಿದ್ದರು.
ಇನ್ನೂ ನಾಲ್ವರು ಸ್ಪಿನ್ನರ್
ಭಾರತದ ಟೆಸ್ಟ್ ತಂಡ ಇನ್ನೂ ನಾಲ್ವರು ಸ್ಪಿನ್ನರ್‌ಗಳನ್ನು ಹೊಂದಿದೆ. ಆರ್. ಅಶ್ವಿನ್, ರವೀಂದ್ರ ಜಡೇಜ, ಜಯಂತ್ ಯಾದವ್ ಮತ್ತು ಸೌರಭ್ ಕುಮಾರ್. ಇವರಲ್ಲಿ ಎಡಗೈ ಸ್ಪಿನ್ನರ್ ಸೌರಭ್ ಹೊಸಬರಾಗಿದ್ದು, ಇನ್ನೂ ಅಂತಾರಾಷ್ಟ್ರೀಯ ಪಂದ್ಯವನ್ನಾಡಿಲ್ಲ.
ಇವರನ್ನು ಉಳಿಸಿಕೊಂಡು ಕುಲದೀಪ್ ಯಾದವ್‌ಗೆ ಅನ್ಯಾಯ ಮಾಡಲಾಗಿದೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.
ಅಕ್ಷರ್ ಕಳೆದ ವರ್ಷ ಕಿವೀಸ್ ವಿರುದ್ಧ ತವರಿನಲ್ಲಿ ಆಡಿದ್ದರು. 2 ಪಂದ್ಯಗಳಿಂದ 9 ವಿಕೆಟ್ ಕೆಡವಿದ್ದರು. ಅನಂತರ ಗಾಯಾಳಾಗಿ ತಂಡದಿಂದ ಬೇರ್ಪಟ್ಟಿದ್ದರು. ಸದ್ಯ ಜಡೇಜ ಮತ್ತು ಅಶ್ವಿನ್ ಘಾತಕವಾಗಿ ಪರಿಣಮಿಸುತ್ತಿ ದ್ದಾರೆ. ಇವರ ಪರಾಕ್ರಮಕ್ಕೆ ಮೊಹಾಲಿ ಟೆಸ್ಟ್ ಪಂದ್ಯವೇ ಸಾಕ್ಷಿ. ಬೆಂಗಳೂರಿನಲ್ಲಿ ನಡೆಯುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಅಕ್ಷರ್ ಆಡುವ ಸಾಧ್ಯತೆ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.