![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 8, 2022, 10:52 AM IST
ಸಾಗರ: ಇಲ್ಲಿಯ ಪರಸ್ಪರ ಸಾಹಿತ್ಯ ವೇದಿಕೆಯ 2022 ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಕಾಂತಾವರದ ಲೇಖಕ ಡಾ.ನಾ. ಮೊಗಸಾಲೆ, ಹೊನ್ನಾವರದ ಬರಹಗಾರ ವಿ.ಗ. ನಾಯಕ, ತರಿಕೆರೆಯ ಸಾಮಾಜಿಕ ಕಾರ್ಯಕರ್ತೆ ರುದ್ರಮ್ಮ ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಗೌರವಾಧ್ಯಕ್ಷ ಸಾಹಿತಿ ನಾ.ಡಿಸೋಜ ಸೋಮವಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾ.ಮೊಗಸಾಲೆ ಅವರಿಗೆ ‘ಸಂತ ಶಿಶುನಾಳ ಷರೀಫ’, ವಿ.ಗ.ನಾಯಕರಿಗೆ ‘ಎಫ್. ಕಿಟೆಲ್’, ರುದ್ರಮ್ಮಗೆ ‘ಅಕ್ಕಮಹಾದೇವಿ’ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ೧೦ ಸಾವಿರ ರೂ. ನಗದು ಒಳಗೊಂಡಿದೆ. ಮಾರ್ಚ್ 13 ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ವರದಶ್ರೀ ಹೋಟೆಲ್‌ನ ಮಲೆನಾಡು ಸಿರಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ’ ಎಂದರು.
ವೇದಿಕೆಯ ಸಂಚಾಲಕ ಡಾ.ಸರ್ಫ್ರಾಜ್ ಚಂದ್ರಗುತ್ತಿ ಅವರು, ಸಾಹಿತ್ಯ, ಸಂಘಟನೆ, ಸಾಮಾಜಿಕ ಸೇವಾ ಕ್ಷೇತ್ರಗಳ ಸಾಧಕರ ಗುರುತಿಸಿ ಸಂಸ್ಥೆಯು ಮೂರು ವರ್ಷಗಳಿಂದ ಪ್ರಶಸ್ತಿ ನೀಡುತ್ತಿದೆ ಎಂದರು. ಲೇಖಕ ಡಾ. ಜಿ.ಎಸ್.ಭಟ್, ಉಪನ್ಯಾಸಕ ಎಸ್.ಎಂ. ಗಣಪತಿ ಇದ್ದರು.
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
You seem to have an Ad Blocker on.
To continue reading, please turn it off or whitelist Udayavani.