ಹಂಪಿ ಮಾದರಿಯಲ್ಲೇ ಕಾರ್ಕಳ ಉತ್ಸವಕ್ಕೆ ಸಕಲ ಸಿದ್ಧತೆ
70 ಕಿ.ಮೀ. ವ್ಯಾಪ್ತಿ ಯಲ್ಲಿ 1.20 ಲಕ್ಷ ವಿದ್ಯುತ್ ದೀಪ ಅಳ ವಡಿಕೆ
Team Udayavani, Mar 8, 2022, 1:10 PM IST
ಕಾರ್ಕಳ : ಕಾರ್ಕಳ ಉತ್ಸವ ಅಧಿಕೃತ ಆರಂಭಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿಯಿವೆೆ. ಸಿದ್ಧತೆ ಅಂತಿಮ ಹಂತಕ್ಕೆ ತಲುಪಿದ್ದು, ಕಾರ್ಕಳ ಉತ್ಸವಕ್ಕೆ ಮದುವಣಗಿತ್ತಿಯಂತೆ ಕಾರ್ಕಳ ಸಿಂಗಾರಗೊಳ್ಳುತ್ತಿದೆ. ತಾಲೂಕಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಂಪಿ ಮಾದರಿಯಲ್ಲೇ ಸಕಲ ಸಿದ್ಧತೆಗಳಾಗುತ್ತಿವೆ.
ಉತ್ಸವ ಹಿನ್ನೆಲೆಯಲ್ಲಿ ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸ ಲಾಗುತ್ತಿದೆ. ಮೈಸೂರಿನ ಚೆಸ್ಕಾಂ ವಿಭಾಗದ 170 ಕಾರ್ಮಿಕರು ಅಳವಡಿಕೆ ಕಾರ್ಯ ನಡೆಸುತ್ತಿದ್ದಾರೆ. 70 ಕಿ.ಮೀ. ವ್ಯಾಪ್ತಿಯಲ್ಲಿ 1.20 ಲಕ್ಷ ವಿದ್ಯುತ್ ದೀಪಗಳು ಅಳವಡಿಕೆಯಾಗಲಿದೆ. ಇದಲ್ಲದೆ ಮನೆ, ಕಟ್ಟಡ, ಕಚೇರಿಗಳು ವಿವಿಧ ಬಣ್ಣಗಳ ವಿದ್ಯುತ್ ದೀಪಗಳಿಂದ ಅಲಂಕೃತಗೊಳ್ಳಲಿದೆ.
ವರ್ಲಿ ಚಿತ್ರದ ಮೆರುಗು
ಉತ್ಸವಕ್ಕೆ ಅಲ್ಲಲ್ಲಿ ಬಣ್ಣ ಬಳಿದು ಶೃಂಗರಿಸುವ ಕೆಲಸ ನಡೆಯುತ್ತಿದೆ. ರಸ್ತೆಗಳ ಡಿವೈಡರ್, ಗೋಡೆಗಳಲ್ಲಿ ವರ್ಲಿ ಚಿತ್ರದ ಚಿತ್ತಾರ ಮೂಡುತ್ತಿದೆ. ಸ್ವರಾಜ್ ಮೈದಾನದಲ್ಲಿ ವೇದಿಕೆ, ಮಳಿಗೆಗಳು ಅತ್ಯಾಕರ್ಷಕವಾಗಿ ನಿರ್ಮಾಣಗೊಳ್ಳುತ್ತಿವೆ. ಈ ಬಾರಿ ವಿಶೇಷ ಗಮನ ಸೆಳೆಯುತ್ತಿರುವ ಹೆಲಿಕಾಪ್ಟರ್ ವಿಹಾರಕ್ಕಾಗಿ ತಾಲೂಕು ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ.
ನಿರಂತರ ಸಾಂಸ್ಕೃತಿಕ ಸವಿ
ಮಾ.10ರಂದು ಕಾರ್ಕಳ ಉತ್ಸವವು ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ಯಕ್ಷ ರಂಗಾಯಣಕ್ಕೆ ಭೂಮಿ ಪೂಜೆ ನಡೆಯುವ ಮೂಲಕ ಉದ್ಘಾಟನೆಯಾಗಲಿದೆ. ಬಳಿಕ ನಿರಂತರ ಸ್ವರಾಜ್ ಮೈದಾನ, ಗಾಂಧಿ ಮೈದಾನದಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಕಾರ್ಕಳ ಉತ್ಸವದೊಂದಿಗೆ ಕನ್ನಡ ಸಾಹಿತ್ಯದ ಚಿಂತನೆಗಳ ವಿಚಾರ ಸಂಕಿರಣ, ಉತ್ಸವ ಚಲನ ಚಿತ್ರೋತ್ಸವ, ಕರಕುಶಲ ವಸ್ತು ಪ್ರದರ್ಶನ, ನೂರಾರು ಮಳಿಗೆಗಳಲ್ಲಿ ನಡೆಯಲಿದೆ. ಚಿತ್ರ ಸಂತೆ, ಆಹಾರೋತ್ಸವ, ಗಾಳಿಪಟ ಉತ್ಸವ ಹಾಗೂ ಶ್ವಾನ ಪ್ರದರ್ಶನ ಇರಲಿದೆ. ಗೂಡುದೀಪ ಉತ್ಸವ ಹಾಗೂ ಮಾ. 18ರಿಂದ 20ರ ವರೆಗೆ ಬಸ್ ನಿಲ್ದಾಣ-ಆನೆಕೆರೆ- ಜೋಡುರಸ್ತೆ ಉಪ ವೇದಿಕೆಗಳಲ್ಲಿ ನಾಗಪುರ ಮತ್ತು ತಂಜಾವೂರು ಕೇಂದ್ರಗಳ ಹೊರರಾಜ್ಯದ ಕಲಾವಿದರಿಂದ ಜಾನಪದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆೆ.
ಇದನ್ನೂ ಓದಿ : ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಜಯ ಖಚಿತ: ಸಿಎಂ ಬೊಮ್ಮಾಯಿ ವಿಶ್ವಾಸ
ಬ್ಯಾನರ್ ಅಬ್ಬರ!
ತಾಲೂಕು ಹಾಗೂ ಹೊರಭಾಗದಲ್ಲಿ ಭರ್ಜರಿ ಪ್ರಚಾರ ನಡೆದಿದ್ದು ತಾಲೂಕಿನ ಪ್ರತೀ ಮನೆಗೂ ಆಮಂತ್ರಣ ತಲುಪಿಸುವ ಅಭಿಯಾನ ನಡೆಯುತ್ತಿದೆ. ತಾಲೂಕಿನಲ್ಲಿ ಬ್ಯಾನರ್ ಅಬ್ಬರ ಹೆಚ್ಚಾಗಿದ್ದು ಎಲ್ಲೆಲ್ಲೂ ಬ್ಯಾನರ್ ರಾರಾಜಿಸುತ್ತಿದೆ. ವಿಶೇಷವಾಗಿ ಪ್ರಮುಖ ಕಡೆಗಳಲ್ಲಿ ರಸ್ತೆಗಳಲ್ಲಿ ದ್ವಾರಗಳನ್ನು ನಿರ್ಮಿಸಲಾಗಿದೆ. ಕಾರ್ಕಳ ತಾಲೂಕಿನಲ್ಲಿ ಸಂಪೂರ್ಣ ಹಬ್ಬದ ವಾತಾವರಣ ಸೃಷ್ಟಿಗೊಂಡಿದ್ದು. ಹತ್ತು ದಿನಗಳಲ್ಲಿ ನಾಡಿನ ವಿವಿಧ ಗಣ್ಯರು ಕೂಡ ಕಾರ್ಕಳಕ್ಕೆ ಆಗಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.