ಹಾಸನದ ರಸ್ತೆ ಬದಿ ಹೆಮ್ಮರಗಳ ಹನನ


Team Udayavani, Mar 8, 2022, 4:17 PM IST

Untitled-1

ಹಾಸನ: ನಗರದ ಮಹಾರಾಜ ಪಾರ್ಕ್‌ನ ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಹನನ ಮಾಡಲಾಗುತ್ತಿದೆ ಎಂಬ ಆತಂಕದಲ್ಲಿ ಹೋರಾಟ ನಡೆಯುತ್ತಿರುವುದರ ನಡುವೆಯೇ ರಸ್ತೆ ಅಭಿವೃದ್ಧಿಗಾಗಿ ಸಹ್ಯಾದ್ರಿ ರಸ್ತೆಯಲ್ಲಿದ್ದ ಬೃಹತ್‌ ಮರಗಳನ್ನು ಕಡಿದುರುಳಿಸಲಾಗಿದೆ.

ಸಹ್ಯಾದ್ರಿ ಚಿತ್ರಮಂದಿರ ಎದುರೇ ಇದ್ದ ಬೃಹತ್‌ಮರ ಹಾಗೂ ಕಲಾ ಭವನದ ಮುಂಭಾಗ ಇದ್ದಮರಗಳೂ ರಸ್ತೆ ಅಭಿವೃದ್ಧಿಗೆ ಬಲಿಯಾಗಿವೆ. ನಗರದ ಮಹಾವೀರ ವೃತ್ತದಿಂದ ಹಳೆ ಪೋಸ್ಟ್‌ ಆಫೀಸ್‌ರಸ್ತೆಯಲ್ಲಿದ್ದ ಬೃಹತ್‌ ಮರಗಳು ಈ ಹಿಂದೆಯೇಅಹುತಿಯಾಗಿದ್ದವು. ಈಗ ಮಹಾವೀರ ವೃತ್ತದಿಂದಹಾಸನಾಂಬ ಕಲಾ ಕ್ಷೇತ್ರ ಮುಂಭಾಗದಿಂದ ಸಹ್ಯಾದ್ರಿವೃತ್ತದವರೆಗೆ ಇದ್ದ ಮರಗಳೂ ರಸ್ತೆ ಅಭಿವೃದ್ಧಿಯ ಅವಸರಕ್ಕೆ ಬಲಿಯಾಗಿವೆ.

ರಸ್ತೆ ಬದಿ ಬೃಹತ್‌ ಮರಗಳೇ ಇಲ್ಲ: ಹಾಸನ ನಗರದ ರಸ್ತೆ ಬದಿ ಇದ್ದ ಬಹುತೇಕ ಬೃಹತ್‌ ಮರಗಳುಕಾಣೆಯಾಗುತ್ತಿವೆ. ಒಂದು ವರ್ಷದ ಹಿಂದೆಎಂ.ಜಿ.ರಸ್ತೆಯ ಬದಿಯಲ್ಲಿದ್ದ 10ಕ್ಕೂ ಹೆಚ್ಚು ಬೃಹತ್‌ಮರಗಳನ್ನು ಕಡಿದುರುಳಿಸಲಾಯಿತು. ಈಗ ಸಹ್ಯಾದ್ರಿರಸ್ತೆಯ ಬದಿಯಲ್ಲಿದ ಮರಗಳ ಹನನವಾಗಿದೆ.

ಗಂಧದ ಕೋಠಿ ಪಕ್ಕ ಸ್ಲೇಟರ್ ಹಾಲ್‌ನಿಂದ ಬಸೆಟ್ಟಿಕೊಪ್ಪಲುವರೆಗೂ ಮಾತ್ರ ಬೃಹತ್‌ಮರಗಳಿರುವುದನ್ನು ಬಿಟ್ಟರೆ, ಈಗ ಹಾಸನ ಯಾವರಸ್ತೆ ಬದಿಯಲ್ಲೂ ಬೃಹತ್‌ ಮರಗಳು ಇಲ್ಲದಂತಾಗಿವೆ.

ಅವೈಜ್ಞಾನಿಕ ಕ್ರಮದಿಂದ ಮರಗಳು ನಾಶ: ರಸ್ತೆ ಬದಿಯ ಮರಗಳನ್ನು ಉಳಿಸಿಕೊಂಡು ರಸ್ತೆಅಭಿವೃದ್ಧಿಪಡಿಸಬಹುದು. ಆದರೆ, ಮರಗಳನ್ನು ಬುಡಸಹಿತ ಕಿತ್ತು ಎರಡೂ ಚರಂಡಿವರೆಗೂ ರಸ್ತೆಅಭಿವೃದ್ಧಿಪಡಿಸುವ ಅವೈಜ್ಞಾನಿಕ ಕ್ರಮಗಳಿಂದ ಮರಗಳನ್ನು ನಾಶಪಡಿಸಲಾಗುತ್ತಿದೆ. ಇನ್ನು ರಸ್ತೆ ಬದಿ ವಾಣಿಜ್ಯ ಸಂಕೀರ್ಣದ ಮುಂದಿರುವ ಹಾಗೂಮನೆಗಳ ಮುಂದಿರುವ ಸಣ್ಣ ಮರಗಳನ್ನುನಾಶಪಡಿಸುವ ದುಷ್ಕೃತ್ಯ ಸದ್ದಿಲ್ಲದೆ ಸಾಗಿದೆ. ಮರಗಳ ಸುತ್ತ ತೊಗಟೆ ತೆಗೆದು ಅಥವಾ ಬರದ ಬುಡಕ್ಕೆ ಕಸದ ರಾಶಿ ಹಾಕಿ ಬೆಂಕಿ ಹಚ್ಚಿ ಮರ ಸತ್ತು ಒಣಗುವ ಕೃತ್ಯವನ್ನು ಮಾಡಲಾಗುತ್ತಿದೆ.

ರಸ್ತೆ ಬದಿಯ ಹೆಮ್ಮರಗಳನ್ನು ಅಭಿವೃದ್ಧಿಯಹೆಸರಿನಲ್ಲಿ ಕಡಿದುರುಳಿಸುತ್ತಿದ್ದರೂ ಅರಣ್ಯ ಇಲಾಖೆಮಾತ್ರ ಕುರುಡನಂತಿದೆ. ಅನಿವಾರ್ಯವಾಗಿ ಕಡಿಯಲೇಬೇಕಾದ ಸಂದರ್ಭಗಳಲ್ಲಿ ಮರಗಳನ್ನುಕಡಿಯಲು ಅರಣ್ಯ ಇಲಾಖೆ ಅನುಮತಿನೀಡಬಹುದು. ಆದರೆ, ರಸ್ತೆ ಬದಿಯಿರುವಹೆಮ್ಮರಳನ್ನೆಲ್ಲಾ ಕಡಿದುರುಳಿಸುತ್ತಾ ಹೋದರೆತಂಪಾದ ಹವಾಮಾನದಿಂದ ಬಡವರ ಊಟಿ ಎಂದುಹಾಸನ ನಗರ ಕಾಂಕ್ರೀಟ್‌ ಕಾಡಾಗುವ ದಿನಗಳು ದೂರವಿಲ್ಲ.

ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣಹೋಮ :

ಹಾಸನ: ಅಭಿವೃದ್ಧಿ ಹೆಸರಿನಲ್ಲಿ ಹಾಸನ ನಗರದಲ್ಲಿ ಮರಗಳ ಮಾರಣಹೋಮ ಮಾಡುತ್ತಿರುವುದು ಮುಂದಿನ ಪೀಳಿಗೆಗೆ ಕಂಟಕ ಒಡ್ಡುವ ಕೃತ್ಯವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಬಾಗೂರು ಮಂಜೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪರಿಸರ ನಾಶ ಮಾಡಿ ಅಭಿವೃದ್ಧಿಗೆ ಮುಂದಾಗಿರುವ ಶಾಸಕಪ್ರೀತಂಗೌಡ ಅವರ ನಡೆ ಖಂಡನೀಯ. ಮಹಾರಾಜ ಪಾರ್ಕ್‌ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನಕ್ಕೆ ಮುಂದಾಗಿದ್ದ ಶಾಸಕರು ಈಗ ಸಹ್ಯಾದ್ರಿ ರಸ್ತೆಯಲ್ಲಿದ್ದ ಹೆಮ್ಮರಗಳನ್ನು ನಾಶ ಮಾಡಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ಹಾಸನ ನಗರದ ವಿವಿಧ ರಸ್ತೆಗಳಲ್ಲಿ ಸದ್ದಿಲ್ಲದೆ ಹೆಮ್ಮರಗಳ ಹನನವಾಗುತ್ತಿದೆ. ಅರಣ್ಯ ಇಲಾಖೆಯು ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ ಎಂದಿದ್ದಾರೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.