ಅಕ್ರಮ ಮದ್ಯ ಮಾರಾಟಕ್ಕಿಲ್ಲ ಕಡಿವಾಣ
Team Udayavani, Mar 8, 2022, 4:24 PM IST
ತಿಪಟೂರು: ತಾಲೂಕಿನಾದ್ಯಂತ ಮೂಲೆ ಮೂಲೆಗಳ ಹಳ್ಳಿಗಳೆಲ್ಲೆಲ್ಲಾ ಅಕ್ರಮ ಮದ್ಯಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದರೂ ಕಂಡೂ ಕಾಣದಂತಿರುವ ಅಬಕಾರಿಹಾಗೂ ಪೊಲೀಸ್ ಅಧಿಕಾರಿಗಳವಿರುದ್ಧ ತಾಲೂಕಿನ ಬಹುತೇಕಮಹಿಳಾ ಸಂಘಟನೆಗಳು,ಮಹಿಳಾ ಸ್ವಸಹಾಯ ಸಂಘಗಳ ಮುಖಂಡರು ಈಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೋವಿಡ್-19ನಿಂದ ಬದುಕು ನಡೆಸುವುದೇ ದುಸ್ತರವಾಗಿರುವಇಂತಹ ಸಮಯದಲ್ಲಿ ಒಂದೊಂದು ಗ್ರಾಮದಲ್ಲಿ 2, 3 ಅಂಗಡಿ, ಮನೆಗಳಲ್ಲಿ ಅಕ್ರಮವಾಗಿಮದ್ಯ ಮಾರುತ್ತಿರುವುದರಿಂದ ಬಡ, ಕೂಲಿಹಾಗೂ ಮಧ್ಯಮ ಕುಟುಂಬಗಳು ಬೀದಿ ಪಾಲಾಗುತ್ತಿರುವ ಬಗ್ಗೆ ಅಬಕಾರಿ, ಪೊಲೀಸ್‌ಇಲಾಖೆಗಳಿಗೆ ತಿಳಿಸಿದರೂ ನಿಯಂತ್ರಣ ಆಗದಿರುವುದು ಸಂಶಯಕ್ಕೆ ಕಾರಣವಾಗಿದೆ.
ಆರ್ಥಿಕ ಸಂಕಷ್ಟದಲ್ಲಿ ಕುಟುಂಬಗಳು: ಕೋವಿಡ್-19ನಿಂದಾಗಿ ಕೂಲಿ ಕೆಲಸಗಳೇವಿರಳವಾಗಿದೆ. ಆದರೂ ವಾರದಲ್ಲಿ ಸಿಗುವಒಂದೆರಡು ಕೂಲಿ ಕೆಲಸಮಾಡಿಕೊಂಡು ಜೀವನನಡೆಸುತ್ತಾರೆ. ಕೂಲಿ ಹಣವನ್ನೇಕುಡಿತಕ್ಕೆ ಖರ್ಚು ಮಾಡುತ್ತಿದ್ದು,ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಕಷ್ಟಕರವಾಗುತ್ತಿದೆ ಎಂದುಮಹಿಳೆಯರು ಅಳಲಾಗಿದೆ.
ಕೆಲ ಬಾರ್‌ಗಳವರು ಹುಡುಗರನ್ನುಇಟ್ಟುಕೊಂಡು ಹಳ್ಳಿಗಳಲ್ಲಿ ಮಾರುವವರಿಗೆ ರಾತ್ರಿ ವೇಳೆ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಮಾರುವವರು ಪ್ರತಿ ಪ್ಯಾಕೆಟ್‌ಗೆ 20-25 ರೂ. ಹೆಚ್ಚಿನ ಲಾಭಇಟ್ಟುಕೊಂಡು ಮಾರಾಟ ಮಾಡುತ್ತಿರುವಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹಾಗೂ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ಇದ್ದರೂನಿಯಂತ್ರಣ ಮರೀಚಿಕೆಯಾಗಿದೆ.
ಹಳ್ಳಿಗಳನ್ನು ಉಳಿಸಿಕೊಡಿ: ತಾಲೂಕಿನ ಬಹುತೇಕ ಹಳ್ಳಿಗಳಲ್ಲಿನ ಅಕ್ರಮ ಮದ್ಯ ಮಾರಾಟವನ್ನು ಕೂಡಲೇ ಜಿಲ್ಲಾಧಿಕಾರಿಗಳು,ಜಿಲ್ಲಾ, ತಾಲೂಕು ಅಬಕಾರಿ ಅಧಿಕಾರಿಗಳಮೇಲೆ ಹಾಗೂ ಅಕ್ರಮ ಮದ್ಯದಂಗಡಿಗಳವಿರುದ್ಧ ಕಠಿಣ ಕಾನೂನು ಕ್ರಮ ತೆಗೆದು ಕೊಂಡು ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದಂಧೆಯನ್ನು ನಿಲ್ಲಿಸಬೇಕೆಂದು ಮಹಿಳಾ ಸಂಘಟನೆಯವರು ಒತ್ತಾಯಿಸಿದ್ದಾರೆ.
35 ರೂ. ರಾಜಾ ಪ್ಯಾಕೆಟ್ 55-60ಕ್ಕೆ ಮಾರಾಟ :
ಎಂಎಸ್‌ಐಎಲ್ ಮಳಿಗೆಯಲ್ಲಿ ಮಾರಾಟವಾಗುವ ಒಂದು ರಾಜಾಪ್ಯಾಕೆಟ್ ಎಣ್ಣೆಗೆ 35 ರೂ. ಇದ್ದರೆ, ಹಳ್ಳಿಗಳಲ್ಲಿ ಅಕ್ರಮವಾಗಿ ಮಾರಾಟವಾಗುವ ಇದೇ ಪ್ಯಾಕೆಟ್ 55ರಿಂದ 60ರೂ. ತನಕ ಮಾರಾಟ ಮಾಡಲಾಗುತ್ತಿದೆ. ಮನೆ ಮುಂದೆ, ಗ್ರಾಮಗಳಲ್ಲಿಯೇ ಸಿಗುತ್ತಲ್ಲ ಎಂಬ ಮನೋಭಾವನೆಯಿಂದ ಮದ್ಯವ್ಯಸನಿಗಳು ದುಪ್ಪಟ್ಟು ಹಣ ನೀಡಿ ಖರೀದಿಸುತ್ತಾರೆ.
ನಗರ ಅಥವಾ ಹಳ್ಳಿಗಳಲ್ಲಿಪರವಾನಿಗೆ ಇಲ್ಲದೆ ಮದ್ಯಮಾರಾಟ ಮಾಡುವುದುಅಪರಾಧವಾಗಿದ್ದು, ತಾಲೂಕಿನಹಳ್ಳಿಗಳಲ್ಲಿ ಅಕ್ರಮ ಮದ್ಯಮಾರಾಟ ನಡೆಯುತ್ತಿರುವವಿಷಯ ನಮ್ಮ ಇಲಾಖೆಯಗಮನಕ್ಕೂ ಬಂದಿದೆ. ನಮ್ಮ ಕೆಲಅಧಿಕಾರಿಗಳೇ ಇವರಿಗೆ ಕುಮ್ಮಕ್ಕುನೀಡಿ ದಾಳಿ ಮಾಡುವಂತೆ ನಟಿಸಿಮತ್ತೆ ಬಿಟ್ಟು ಕಳಿಸಿ ಮಾರಲು ದಾರಿಸುಗಮಗೊಳಿಸು ತ್ತಿದ್ದಾರೆ. ನಮ್ಮಹಾಗೂ ಪೊಲೀಸ್ ಅಧಿಕಾರಿಗಳುಲಂಚದಾಸೆಗೆ ಬಿದ್ದು ಅಕ್ರಮಮಾರಾಟಗಾರರಿಗೇ ರಕ್ಷಣೆಒದಗಿಸಿ ಹಳ್ಳಿಗಳನ್ನು ಕುಡುಕರ ತಾಣಗಳಾಗಿಸುತ್ತಿರುವುದು ನೋವಿನ ಸಂಗತಿ.-ಹೆಸರೇಳಲಿಚ್ಚಿಸದ ಅಬಕಾರಿ ಅಧಿಕಾರಿ, ತಿಪಟೂರು
– ಬಿ.ರಂಗಸ್ವಾಮಿ, ತಿಪಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.