ತಂತ್ರಜ್ಞಾನದ ಸಮರ್ಪಕ ಬಳಕೆ ಆತ್ಮನಿರ್ಭರತೆಗೆ ಆದ್ಯತೆ: ನಿರ್ಮಲಾ ಸೀತಾರಾಮನ್

“ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಲ್ಲ ರಾಜ್ಯಗಳಿಗೂ ತಲುಪಿದೆ

Team Udayavani, Mar 8, 2022, 4:33 PM IST

1-ggg

ಬೆಂಗಳೂರು: ತಂತ್ರಜ್ಞಾನದ ಸಮರ್ಪಕ ಬಳಕೆ ಮೂಲಕ ಆತ್ಮನಿರ್ಭರತೆಗೆ ಒತ್ತು ನೀಡಲಾಗುವುದು. ಈ ಬಜೆಟ್ ನಲ್ಲಿ ಅಂಥ ಪ್ರಯತ್ನ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.

ನಗರದ “ಜೆ.ಡಬ್ಲ್ಯು ಮೆರಿಯೋಟ್ ಹೋಟೆಲ್”ನಲ್ಲಿ ಇಂದು ಸಂವಾದ ಕಾರ್ಯಕ್ರಮದಲ್ಲಿ “ಆತ್ಮನಿರ್ಭರ ಅರ್ಥವ್ಯವಸ್ಥೆಯ ಭಾರತ” ವಿಷಯದ ಕುರಿತು ಅವರು ಮಾತನಾಡಿದರು. ಸ್ಥಳೀಯವಾಗಿ ಉತ್ಪಾದಿಸಿ ವಿಶ್ವಕ್ಕೆ ಸರಬರಾಜು ಮಾಡುವ ಚಿಂತನೆಯೊಂದಿಗೆ ಆತ್ಮನಿರ್ಭರತೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಕೋವಿಡ್ ಲಸಿಕೆ ವಿವರವನ್ನು ಆ್ಯಪ್ ಮೂಲಕ ಪಡೆಯುವ ಪದ್ಧತಿಯನ್ನು ಜಾರಿಗೊಳಿಸಲಾಗಿದೆ ಎಂದರು.

75 ಡಿಜಿಟಲ್ ಬ್ಯಾಂಕ್ ಸ್ಥಾಪನೆ, ಡಿಜಿಟಲ್ ಕರೆನ್ಸಿ, ದೂರ ಶಿಕ್ಷಣ ವಿಶ್ವವಿದ್ಯಾಲಯ ಮಾತ್ರವಲ್ಲದೆ ಡಿಜಿಟಲ್ ಯುನಿವರ್ಸಿಟಿ, ಇ ಪಾಸ್‍ಪೋರ್ಟ್ ಮೊದಲಾದವುಗಳ ಮೂಲಕ ಭಾರತವನ್ನು ಬ್ರ್ಯಾಂಡೆಡ್ ಆಗಿ ಬದಲಾಯಿಸಲಾಗುತ್ತಿದೆ ಎಂದು ವಿವರಿಸಿದರು. ಸಾವಿರ ಪುರುಷರಿಗೆ 900ರ ಆಸುಪಾಸಿನಲ್ಲಿದ್ದ ಮಹಿಳೆಯರ ಸಂಖ್ಯೆ ಇದೀಗ 1026ಕ್ಕೆ ಹೆಚ್ಚಾಗಿದೆ. ಈ ಅನುಪಾತವೇ ನಮ್ಮ ಸಾಧನೆಯ ಪ್ರತಿಬಿಂಬ ಎಂದರು. ಉನ್ನತ ಶಿಕ್ಷಣದಲ್ಲೂ ಮಹಿಳಾ ಸಂಖ್ಯೆ ತೀವ್ರ ಹೆಚ್ಚಳ ಕಂಡಿದೆ. ಎನ್‍ಸಿಸಿ, ಸೇನೆ ಸೇರಿ ರಕ್ಷಣಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ಸಿಗುತ್ತಿದೆ ಎಂದು ತಿಳಿಸಿದರು. ಹೆರಿಗೆ ಸಂಬಂಧ ರಜೆಯನ್ನು 12 ವಾರದಿಂದ 26 ವಾರಕ್ಕೆ ಏರಿಸಲಾಗಿದೆ ಎಂದರು.

ತಂತ್ರಜ್ಞಾನವನ್ನು ಉತ್ತಮ ಜೀವನಕ್ಕಾಗಿ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು. 12 ವರ್ಷದೊಳಗಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದವರಿಗೆ ಮರಣದಂಡನೆ ನೀಡುವಂತೆ ಕಾಯ್ದೆಯಲ್ಲಿ ಬದಲಾವಣೆ ಮಾಡಿದ್ದೇವೆ. 16 ವರ್ಷದೊಳಗಿನ ಯುವತಿ ಮೇಲೆ ಅತ್ಯಾಚಾರ ಮಾಡಿದವರಿಗೆ ಹಿಂದೆ 10 ವರ್ಷ ಶಿಕ್ಷೆ ಇದ್ದುದನ್ನು 20 ವರ್ಷಕ್ಕೆ ಏರಿಸಲಾಗಿದೆ ಎಂದರು. ಕೃಷಿ ಪದ್ಧತಿ ಸುಧಾರಣೆಗೆ ತಂತ್ರಜ್ಞಾನ ಬಳಸಲಾಗುವುದು ಎಂದು ತಿಳಿಸಿದರು.

ಶೇ 50ರಷ್ಟಿರುವ ಮಹಿಳೆಯರಿಗೆ ಸಮಾನ ಅವಕಾಶ ಕೊಡದಿದ್ದರೆ ಆತ್ಮನಿರ್ಭರತೆ ಸಾಧ್ಯವಿಲ್ಲ. ಆದ್ದರಿಂದ ಮಹಿಳೆಯರಿಗೆ ರಕ್ಷಣೆ, ಹೆಚ್ಚು ಅವಕಾಶ ಕೊಡಲು ಮುಂದಾಗಿದ್ದೇವೆ. 2014ರಲ್ಲಿ ಪಂಚಾಯತ್ ಕಾಯ್ದೆಗೆ ತಿದ್ದುಪಡಿ ತಂದು ಮಹಿಳೆಯರಿಗೆ ಶೇ 36 ಹೆಚ್ಚಿನ ಅವಕಾಶ ಕಲ್ಪ್ಪಿಸಲಾಯಿತು. ಆದರೆ, ಮೋದಿಯವರ ಸೂಚನೆಯಂತೆ ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಶೇ 50ರಷ್ಟು ಮಹಿಳೆಯರಿಗೆ ಅವಕಾಶ ಕೊಡಲಾಗಿದೆ. ಪಂಚಾಯತ್‍ಗೆ ಮಹಿಳೆಯರನ್ನೇ ಅವಿರೋಧವಾಗಿ ಆಯ್ಕೆ ಮಾಡಿದರೆ ಹೆಚ್ಚುವರಿ ಅನುದಾನ ಕೊಡುವುದಾಗಿ ಮೋದಿಯವರು ಪ್ರಕಟಿಸಿದ್ದಾರೆ. ಈಗ ಮಹಿಳಾ ಆಡಳಿತದ ಪ್ರಮಾಣ ಶೇ 46ಕ್ಕೆ ಏರಿಕೆ ಕಂಡಿದೆ ಎಂದರು.

ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡಿದ್ದೇವೆ. ಸಾಂಕ್ರಾಮಿಕದ ಅವಧಿಯಲ್ಲೂ ಆತ್ಮನಿರ್ಭರತೆಯ ತತ್ವವನ್ನು ಜಾರಿಗೊಳಿಸಿದ್ದೇವೆ. ಆರಂಭದಲ್ಲಿ ಒಂದೆಡೆ ಮಾಸ್ಕ್, ಪಿಪಿಇ ಕಿಟ್, ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಂಡು ಬಿಕ್ಕಟ್ಟನ್ನು ನಿಭಾಯಿಸಿದ ಸರಕಾರವು, ಸ್ಥಳೀಯವಾಗಿ ಅವುಗಳ ಉತ್ಪಾದನೆ ಸಾಧ್ಯತೆ ಕಡೆಗೂ ಗಮನ ಹರಿಸಿತು. ಈ ಉಪಕರಣಗಳ ಜೊತೆ ಆಮ್ಲಜನಕ ಉತ್ಪಾದನೆ, ಆಸ್ಪತ್ರೆಗಳ ಸೌಕರ್ಯ ಹೆಚ್ಚಳಕ್ಕೂ ಗಮನ ನೀಡಲಾಯಿತು ಎಂದರು. ಉತ್ಪಾದನೆ ಹೆಚ್ಚಳದ ಮೂಲಕ ಉದ್ಯೋಗಾವಕಾಶವನ್ನೂ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.

ಭಾರತದಲ್ಲಿ ಸಿಗುವ ವಸ್ತುವಿಗೆ ಕಡಿಮೆ ಸುಂಕ ಮತ್ತು ಅದೇ ವಸ್ತು ಆಮದಾಗುತ್ತಿದ್ದರೆ ಹೆಚ್ಚು ತೆರಿಗೆ ಎಂಬ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಆದರೆ, ಇಲ್ಲಿ ಅವಶ್ಯವಾಗಿ ಬೇಕಾದ ಹಾಗೂ ಆಂತರಿಕವಾಗಿ ಉತ್ಪಾದಿಸಲಾಗದ ವಸ್ತುಗಳಿಗೆ ಹೆಚ್ಚು ತೆರಿಗೆ ವಿಧಿಸುತ್ತಿಲ್ಲ. ಸಮರ್ಪಕ ಚಿಂತನೆ ಮತ್ತು ದೂರದೃಷ್ಟಿಯೊಂದಿಗೆ ಆತ್ಮನಿರ್ಭರತೆಯ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

ಉತ್ಪಾದಕತೆಗೆ ಸಂಬಂಧಿಸಿದ ಪ್ರೋತ್ಸಾಹ (ಪಿಎಲ್‍ಐ) ಕಾರ್ಯಕ್ರಮದಲ್ಲಿ 14 ಕ್ಷೇತ್ರಗಳಡಿ ಅತಿ ಹೆಚ್ಚು ಹಣ ಬಳಸುತ್ತಿದ್ದು, ಅಲ್ಲೂ ಇದೇ ಮಾನದಂಡವನ್ನು ಅನುಸರಿಸಲಾಗುತ್ತಿದೆ ಎಂದರು. ಕೌಶಲ ಇರುವ ಕ್ಷೇತ್ರಗಳು, ದೇಶದೊಳಗೇ ಮಾರುಕಟ್ಟೆ ಅವಕಾಶ, ಸ್ಥಳೀಯವಾಗಿ ಉತ್ಪಾದಿಸಬಹುದಾದ ಉಪಕರಣ, ವಸ್ತುಗಳಿಗೆ ಈ 14 ಕ್ಷೇತ್ರಗಳಲ್ಲಿ ಆದ್ಯತೆ ನೀಡಿದ್ದೇವೆ ಎಂದು ವಿವರಿಸಿದರು. ಉತ್ಪಾದನೆಗೆ ಅವಕಾಶ, ದೇಶದೊಳಗೆ ಮತ್ತು ವಿದೇಶದಲ್ಲಿ ಮಾರುಕಟ್ಟೆ ಸಾಧ್ಯತೆ, ಉದ್ಯೋಗ ಅವಕಾಶವನ್ನು ಗಮನದಲ್ಲಿ ಇಟ್ಟುಕೊಂಡು ಈ 14 ಕ್ಷೇತ್ರಗಳನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು.

ಔಷಧಿ ಕ್ಷೇತ್ರದ ಕಚ್ಚಾ ವಸ್ತುಗಳನ್ನು ಹಿಂದೆ ಇಲ್ಲಿಯೇ ಉತ್ಪಾದಿಸಲಾಗುತ್ತಿತ್ತು. ನಿಧಾನವಾಗಿ ಅದನ್ನು ವಿದೇಶದಿಂದ ಆಮದು ಮಾಡಲಾಯಿತು. ವಿದೇಶದ ಬೇಡಿಕೆಯ ಶೇ 66 ಲಸಿಕೆಗಳನ್ನು ಭಾರತದಲ್ಲೇ ಉತ್ಪಾದಿಸಿ ಕಳುಹಿಸುತ್ತಿದ್ದೇವೆ ಎಂದರು.

ಔಷಧಿ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸಲು ಉದ್ದೇಶಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ನಮಗಿರುವ ಅವಕಾಶ ಬಳಕೆ ಮತ್ತು ಸ್ವಾವಲಂಬಿ ಆಗುವುದರತ್ತ ಮುನ್ನಡೆಯುತ್ತಿದ್ದೇವೆ. ಜಾಗತಿಕ ಸರಬರಾಜುದಾರ ಆಗಲು ಪ್ರಯತ್ನ ನಡೆದಿದೆ ಎಂದು ವಿವರಿಸಿದರು.

ಪೋಲಿಯೋ ಲಸಿಕೆಗೆ ಆರು ತಿಂಗಳು ಕಾಯುವ ಸ್ಥಿತಿ ಹಿಂದೆ ಇತ್ತು. ಈಗ ಕೋವಿಡ್‍ಗೆ ಹಲವು ಲಸಿಕೆಗಳನ್ನು ನಾವು ಉತ್ಪಾದಿಸುತ್ತಿದ್ದೇವೆ. ವಿದೇಶಗಳ ಮಾನ್ಯತೆಯೂ ಲಭಿಸಿದೆ ಎಂದು ಹೆಮ್ಮೆಯಿಂದ ನುಡಿದರು. ನಮ್ಮ ಶಕ್ತಿಯ ಅನಾವರಣದಿಂದ ಆತ್ಮನಿರ್ಭರತೆಯ ಸಾಧನೆ ಮಾಡಬೇಕಿದೆ ಎಂದು ತಿಳಿಸಿದರು.

ಜನ್‍ಧನ್ ಖಾತೆಯ ಮೂಲಕ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲೂ ಪರಿಹಾರ ವಿತರಣೆ ಕಷ್ಟವಾಗಲಿಲ್ಲ. ಆದರೆ, ಅಭಿವೃದ್ಧಿ ಹೊಂದಿದ ದೇಶಗಳೂ ಈ ವಿಚಾರದಲ್ಲಿ ಸವಾಲನ್ನು ಎದುರಿಸಿದ್ದವು ಎಂದು ತಿಳಿಸಿದರು. ಹಸಿವಿನಿಂದ ಯಾರೂ ಇರಬಾರದೆಂಬ ಉದ್ದೇಶದಿಂದ ಉಚಿತವಾಗಿ ಪಡಿತರವನ್ನೂ ನೀಡಲಾಯಿತು ಎಂದು ವಿವರಿಸಿದರು. “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಲ್ಲ ರಾಜ್ಯಗಳಿಗೂ ತಲುಪಿದೆ. ಬಿಜೆಪಿ ಆಡಳಿತ, ಬಿಜೆಪಿಯೇತರ ಆಡಳಿತದ ರಾಜ್ಯ ಎಂಬ ಭೇದಭಾವ ಇರಲಿಲ್ಲ ಎಂದರು.

ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಶುಭಾಶಯ ಕೋರಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು 2014-19ರ ನಡುವಿನ ಆಡಳಿತಾವಧಿಯಲ್ಲಿ ಮಾಡಿದ ಕಾರ್ಯಗಳಿಂದ ನಾವಿಂದು ಬದಲಾದ ಭಾರತವನ್ನು ನೋಡುತ್ತಿದ್ದೇವೆ ಎಂದು ವಿಶ್ಲೇಷಿಸಿದರು. ಪ್ರಧಾನಿಯವರು ನುಡಿದಂತೆ ನಡೆದರು. 8 ಕೋಟಿ ಸಿಲಿಂಡರ್ ಸಂಪರ್ಕ ನೀಡುವ ಭರವಸೆಯನ್ನು ಅನುಷ್ಠಾನಕ್ಕೆ ತಂದರು. ಕೆಲವು ಮಾಧ್ಯಮಗಳು ಇದರ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಿದರೂ ಅವರಿಗೆ “ಇದು ಬೋಗಸ್” ಎನ್ನಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದರು.

ಹಿಂದಿನ ಸರಕಾರದ ಆಡಳಿತಾವಧಿಯಲ್ಲಿ ಗರಿಷ್ಠ ಪ್ರಮಾಣದ ಭ್ರಷ್ಟಾಚಾರದಿಂದ ದೇಶವು ರೋಸಿಹೋಗಿತ್ತು. ಈ ಸಂದರ್ಭದಲ್ಲಿ ಸರಿಯಾದ ಫಲಾನುಭವಿಗೆ ಯೋಜನೆಯ ಲಾಭ ನೀಡಿದ್ದಲ್ಲದೆ ಭ್ರಷ್ಟಾಚಾರರಹಿತವಾಗಿ ಯೋಜನೆ ಜಾರಿ ಮಾಡಲಾಯಿತು ಎಂದು ತಿಳಿಸಿದರು.

ಭ್ರಷ್ಟಾಚಾರ ಇಲ್ಲದೆ ವಿದ್ಯುತ್ ಸಂಪರ್ಕ, ಸರಳ ರೀತಿಯಲ್ಲಿ ಭ್ರಷ್ಟತೆ ಇಲ್ಲದೆ ವ್ಯಾಪಾರ ವ್ಯವಹಾರ, ವ್ಯವಹಾರದಲ್ಲೂ ಅಭಿವೃದ್ಧಿ ಕಾಣಲು ಕಿರಿಕಿರಿ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಇದು ಗುಜರಾತ್ ಮಾದರಿಯಾಗಿ ಹೊರಹೊಮ್ಮಿದೆ. ಎಂಟು ವರ್ಷಗಳಲ್ಲಿ ಭ್ರಷ್ಟಾಚಾರದ ಪಿಸುಮಾತೂ ಕೇಳಿಸಿಲ್ಲ ಎಂದು ನುಡಿದರು.

ಪ್ರತಿ ಮನೆಗೂ ನಳ್ಳಿ ನೀರಿನ ಯೋಜನೆ ಬರಿಯ ಘೋಷಣೆಯಲ್ಲ. 5 ಕೋಟಿ ಮನೆಗಳು ಇದರ ಲಾಭ ಪಡೆದಿವೆ. ಉಳಿದ ಸುಮಾರು 3.8 ಕೋಟಿ ಸಂಪರ್ಕಕ್ಕೆ 60 ಸಾವಿರ ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು. 2014-19 ನಡುವಿನ ಅವಧಿಯಲ್ಲಿ ನವ ಭಾರತದ ನಿರ್ಮಾಣಕ್ಕಾಗಿ ಘೋಷಿಸಿದ ಕಾರ್ಯಕ್ರಮಗಳು ಅರ್ಹತೆಯ ಅಧಾರದಲ್ಲಿ ಸಕಾಲದಲ್ಲಿ ಅನುಷ್ಠಾನಕ್ಕೆ ಬಂದಿವೆ ಎಂದರು. ಕೆಲವರಿಗಷ್ಟೇ ಯೋಜನೆ ಜಾರಿ, ಇನ್ನೂ ಹಲವರಿಗೆ ಪ್ರಯೋಜನ ಸಿಗದಿರುವ ರಾಜಕೀಯ ನಮ್ಮದಲ್ಲ. ಎಲ್ಲರಿಗೂ ಪ್ರಯೋಜನ ಕೊಡುವ ಚಿಂತನೆ ಮತ್ತು ಅನುಷ್ಠಾನ ನಮ್ಮದಾಗಿತ್ತು ಎಂದು ತಿಳಿಸಿದರು.

ಎಲ್ಲ ಮನೆಗೆ ವಿದ್ಯುತ್, ಅರ್ಹರೆಲ್ಲರಿಗೂ ಗ್ಯಾಸ್ ಸಂಪರ್ಕ, ಕಡಿಮೆ ವಿದ್ಯುತ್ ಬಳಸುವ ಬಲ್ಬ್ ವಿತರಣೆ ಸಾಧ್ಯವಾಗಿದೆ. ಅಭಿವೃದ್ಧಿ ವಿಚಾರ ಬಂದಾಗ ಎಲ್ಲರೂ ಸಮಾನರು ಎಂಬ ಮಾನದಂಡವನ್ನು ಅನುಸರಿಸಲಾಗಿದೆ. 2014-19 ನಡುವೆ ಈ ರೀತಿಯ ಪ್ರಯತ್ನ ಸಾಗಿದ್ದರಿಂದ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲೂ ಅಭಿವೃದ್ಧಿ ಕಾರ್ಯ ಮುಂದುವರಿಸಲು ಸಾಧ್ಯವಾಯಿತು ಎಂದರು.

ಬಿಜೆಪಿಯಲ್ಲಿ ಮಹಿಳೆಯರಿಗೆ ಸುರಕ್ಷತೆಯ ವಾತಾವರಣವಿದೆ. ಪಕ್ಷದಲ್ಲಿ ಮಹಿಳೆಗೆ ಆದ್ಯತೆ ಕೊಡಲಾಗುತ್ತಿದೆ. ಬಿಜೆಪಿ ವಿಶಾಲವಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯದ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವರಾದ ಡಾ| ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣ, ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಸಮೀರ್ ಕಾಗಲ್ಕರ್ ಅವರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

Karnataka Govt.,: ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.