ಮಾ.10 ರ ಗುರುವಾರದಂದು ಶ್ರೀ ಮಸಣೀಕಮ್ಮ ಬ್ರಹ್ಮರಥೋತ್ಸವ


Team Udayavani, Mar 8, 2022, 6:47 PM IST

ಮಾ.10 ರ ಗುರುವಾರದಂದು ಶ್ರೀ ಮಸಣೀಕಮ್ಮ ಬ್ರಹ್ಮರಥೋತ್ಸವ

ಪಿರಿಯಾಪಟ್ಟಣ: ಪಿರಿಯಾಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಮಸಣೀಕಮ್ಮ ನವರ ಬ್ರಹ್ಮ ರಥೋತ್ಸವ ಮಾ.10 ರ ಗುರುವಾರದಂದು ಅದ್ದೂರಿಯಾಗಿ ನೆರವೇರಲಿದೆ.

ಸ್ಥಳೀಯವಾಗಿ ಹಾಗೂ ನೆರೆಯ ಕೇರಳ, ತಮಿಳುನಾಡು, ಆಂದ್ರಪ್ರದೇಶ ಹಾಗೂ ಮಹರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಲ್ಲಿ ಭಕ್ತರನ್ನು ಹೊಂದಿರುವ ಈ ದೇವಿಯೂ ಸ್ಥಳೀಯರ ಗ್ರಾಮದೇವತೆಯಾಗಿದ್ದು,ಶ್ರೀ ಪಿರಿಯಾಪಟ್ಟಣದಮ್ಮ ಎಂದೇ ಪ್ರಸಿದ್ಧಿಯಾಗಿದೆ.

ಬ್ರಹ್ಮ ರಥೋತ್ಸವ:

ಶ್ರೀ ಅಮ್ಮನವರ ರಥೋತ್ಸವಕ್ಕಾಗಿ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದ್ದು.   ಬೆಳಗ್ಗೆ 10.30 ರಿಂದ 12.15 ಗಂಟೆಯೊಳಗೆ ಸಲ್ಲುವ ವೃಷಭಲಗ್ನದಲ್ಲಿ ಬ್ರಹ್ಮರಥೋತ್ಸವ ಜರುಗಲಿದೆ. ಮಾ.11ರ ಶುಕ್ರವಾರರಂದು ಪಟ್ಟಣದ ಒಳಕೋಟೆ, ಕರಿಬಸಪ್ಪ ಬಡಾವಣೆ, ಪೇಟೆಬೀದಿ, ಸಣ್ಣಯ್ಯನಬೀದಿ, ಬಿ.ಎಂ.ರಸ್ತೆ, ದೇವೇಗೌಡನಕೊಪ್ಪಲು, ಉಪ್ಪಾರಬೀದಿಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಿ ಮಾ.12 ರ ಶನಿವಾರರಂದು ರಾತ್ರಿ 8 ಗಂಟೆಗೆ ಪಟ್ಟಣದ ಚಿಕ್ಕಕೆರೆಯಲ್ಲಿ ತೆಪ್ಪೋತ್ಸವ ಜರುಗಲಿದೆ.

ವಿದ್ಯುತ್ ದೀಪಲಂಕಾರಗಳಿಂದ ಕಂಗೊಳಿಸುತ್ತಿರುವ ಪಟ್ಟಣ:

ಶ್ರೀ ಮಸಣಿಕಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಬಿ.ಎಂ.ರಸ್ತೆ, ಹಾಗೂ ಅಂಗಡಿ ಮುಗಂಟ್ಟುಗಳು ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು, ಅತ್ಯುತ್ತಮವಾಗಿ ತಮ್ಮ  ಅಂಗಡಿ ಮುಗ್ಗಟ್ಟುಗಳಿಗೆ ದೀಪಾಲಂಕಾರ ಮಾಡಿದವರಿಗೆ ಪುರಸಭೆ ವತಿಯಿಂದ ವಿಶೇಷ ಬಹುಮಾನವನ್ನು ನೀಡುವುದಾಗಿ ಪುರಸಭಾ ಆಡಳಿತ ಮಂಡಳಿ ಘೋಷಿಸಿದೆ.

ಇತಿಹಾಸ:

ಈ ದೇವಾಲಯವು ಹೋಯ್ಸಳ ಶೈಲಿಯಲ್ಲಿ ನಿರ್ಮಿತವಾಗಿದೆ. 12ನೇ ಶತಮಾನದ ಆದಿ ಭಾಗದಲ್ಲಿ ನಿರ್ಮಾಣಗೊಂಡ ದೇವಾಲಯದಲ್ಲಿ ಕಂಠೀರವ ನರಸರರಾಜ ಓಡೆಯರ ಕಾಲದಲ್ಲಿ ದಾಳಿ ನಡೆದ ಸಂದರ್ಭ ಯುದ್ಧದ ಗೆಲುವಿನ ಸಂಕೇತವಾಗಿ ದೇವಾಲಯದ ಮೂಲ ಮೂರ್ತಿಯನ್ನು ಕೊಂಡ್ಯೋದನೆಂದು ಇತಿಹಾಸ ತಿಳಿಸುತ್ತದೆ.

ಪ್ರಸ್ತುತ ಈ ದೇವಾಲಯ ಮೂಲಮೂರ್ತಿಯನ್ನು ಮೈಸೂರಿನ ತ್ರಿನೇಶ್ವರ ದೇವಾಲಯದ ಹಿಂಭಾಗದಲ್ಲಿ ಪಿರಿಯಾಪಟ್ಟಣದ ಚಾಮುಂಡೇಶ್ವರಿ ಎಂದು ಬರೆದು ಇಡಲಾಗಿದೆ ಎಂದು ಇತಿಹಾಸ ತಿಳಿಸುತ್ತದೆ. 1644 ಯುದ್ಧದ ನಂತರ ಪಾಳಾಬಿದ್ದ ದೇವಾಲಯವನ್ನು ನಾರಸಿಂಗ ಪಟ್ಟಣ ನಿರ್ಮಾಣವಾಗಿ ಕೋಟೆ ನಿರ್ಮಿಸಿದಾಗ ಕೋಟೆ ಹೊರಗೆ ಶಕ್ತಿ ದೇವತೆಯನ್ನು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಈ ದೇವಾಲಯವು ಮಸಣೀಕಮ್ಮ ದೇವರಾಗಿ ಪ್ರಸಿದ್ದಿ ಹೊಂದಿದ್ದು ಇದನ್ನು ಪಿರಿಯಾಪಟ್ಟಣದಮ್ಮ ಎಂದು ಕರೆಯುವುದುಂಟು.

ಜಿಲ್ಲೆಯಲ್ಲಿ ಅಧಿಕ ಆದಾಯ ಹೊಂದಿರುವ ಈ ದೇವಾಲಯಗಳಲ್ಲಿ ಮೂರನೆ ಸ್ಥಾನದಲ್ಲಿದ್ದು, ಪ್ರಸ್ತುತ ಈ ದೇವಾಲಯವು ಮುಜಾರಾಯಿ ಇಲಾಖೆಯ ಅಧೀನದಲ್ಲಿದೆ.

 

-ಪಿ.ಎನ್.ದೇವೇಗೌಡ, ಪಿರಿಯಾಪಟ್ಟಣ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ ಮಹೇಶ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

22-hunsur-1

Hunsur: ಕಾರು ಪಲ್ಟಿಯಾಗಿ ಎಳನೀರು ವ್ಯಾಪಾರಿ ಸಾವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.