ಇಂದು ಶ್ರೀ ರಾಘವೇಂದ್ರ ಜಯಂತಿ: ಕರೆದಲ್ಲಿಗೆ ಬರುವ ಗುರುರಾಯರು

ಕರ್ಮಜದೇವತೆ ಶಂಕು ಕರ್ಣನೆ ವ್ಯಾಸ ರಾಗಿ ಶ್ರೀ ರಾಘವೇಂದ್ರರಾಗಿ ಅವತರಿಸಿದವರು.

Team Udayavani, Mar 9, 2022, 10:55 AM IST

ಇಂದು ಶ್ರೀ ರಾಘವೇಂದ್ರ ಜಯಂತಿ: ಕರೆದಲ್ಲಿಗೆ ಬರುವ ಗುರುರಾಯರು

ಕರೆದಲ್ಲಿಗೆ ಬಂದು ನಿಂತು ಚಿಂತಾಸಂತಾಪ ಗಳನ್ನೆಲ್ಲ ಕಳೆದು ಮನದಭೀಷ್ಠೆಯನ್ನು ಪೂರೈಸುವ ಗುರುಗಳೆಂದರೆ ಕಲಿಯುಗ ಕಾಮಧೇನು ಶ್ರೀ ರಾಘವೇಂದ್ರ ಗುರುರಾಯರು.ಹರಿ ಮುನಿದರೂ ಗುರುತಾ ಒಲಿವ ಎಂಬಂತೆ ಭಗ ವಂತ ಮುನಿಸಿಕೊಂಡರೂ ಗುರುಗಳು ಪ್ರೀತಿ-ವಾತ್ಸಲ್ಯದಿಂದ ನಮ್ಮ ಮೇಲೆ ಅನು ಗ್ರಹದ ಧಾರೆಯನ್ನು ಸುರಿಸು ವರು. ಲೋಕದಲ್ಲಿ ತಿರಸ್ಕೃತರಾದರೂ ಮನದಾಳದಿಂದ ಭಜಿಸಿದಾಗ ತಾಯಿಯು ಕಂದನನ್ನು ಸಂತೈಸುವಂತೆ ಮಮ ತೆಯ ಮಡಿಲ ಲ್ಲಿರಿಸಿ ಭರವಸೆಯ ಬೆಳಕಾಗಿ ಅನುಗ್ರಹಿಸುವ ಗುರುಗಳೆಂದರೆ ಮಂಚಾಲೆಯ ಗುರುರಾಯರು. ರಾಯರನ್ನು ನೆನೆಯುವ ಮನ ಮನೆಯೇ ವೃಂದಾವನ ಮಂತ್ರಾಲಯ.

ಪ್ರಹ್ಲಾದನಾಗಿ ನರಸಿಂಹನಿಂದ ಅನುಗ್ರಹೀತ ನಾದ. ಕರ್ಮಜದೇವತೆ ಶಂಕು ಕರ್ಣನೆ ವ್ಯಾಸ ರಾಗಿ ಶ್ರೀ ರಾಘವೇಂದ್ರರಾಗಿ ಅವತರಿಸಿದವರು. ತಮಿಳುನಾಡಿನ ಭುವನಗಿರಿ ಸಣ್ಣ ಊರು.

1595ರಲ್ಲಿ ಫಾಲ್ಗುಣ ಶುದ್ಧ ಸಪ್ತಮಿ ಸಾತ್ವಿಕ ದಂಪತಿಯರಾದ ಗೋಪಿಕಾಂಬ ಮತ್ತು ತಿಮ್ಮಣ್ಣ ಭಟ್ಟರ ಮಡಿಲಲ್ಲಿ ವೆಂಕಟಾಚಲದ ತಿಮ್ಮಪ್ಪನ ಪ್ರಸಾದದಿಂದ ಭುವನಗಿರಿಯಲ್ಲಿ ಭುವನಪಾವನ ಕಾಮಧೇನುವಾಗಿ ಅವತರಿಸಿದವರೆ ಶ್ರೀ ರಾಘವೇಂದ್ರರು. ವೆಂಕಟನಾಥ ನೆಂದು ನಾಮ ಪಡೆದರು. ಉಪನಯನ್‌ ಅಧ್ಯಯನ ಸರಸ್ವತಿ ಎಂಬ ಕನ್ಯಾ ಜತೆ ವಿವಾಹವು ನಡೆಯಿತು. ಪ್ರತಿನಿತ್ಯ ಮಹಾಭಾಷ್ಯ ಚಂದ್ರಿಕಾದಂತಹ ಉದ್ಗ†ಂಥಗಳ ಅಧ್ಯಯನ ನಡೆದು ಮಹಾಭಾಷ್ಯ ವೆಂಕಟ ನಾಥನೆಂದು ಬಿರುದು ಪಡೆದರು.

ಆಶ್ರಮ ಪೂರ್ವದಲ್ಲೇ ಭಗವದನುಗ್ರಹ ಪರಿ ಪೂರ್ಣವಿದ್ದ ರಾಯರು ಅನೇಕ ಮಹಿಮೆಗಳನ್ನು ತೋರಿದರು. ಪದ್ಮನಾಭತೀರ್ಥ ಪರಂಪರೆಯ ಶ್ರೀ ಸುಧೀಂದ್ರರು ಸ್ವಪ್ನದಲ್ಲಿ ಆದೇಶ ಬಂದಂತೆ ಆನಂದತೀರ್ಥರ ವೇದಾಂತ ಸಾಮ್ರಾಜ್ಯಕ್ಕೆ ಇವರನ್ನೇ ಉತ್ತರಾಧಿಕಾರಿಗಳಾಗಿ ನೇಮಿಸಬೇಕೆಂದು ಇವರ ವಿನಯ ಪಾಂಡಿತ್ಯಕ್ಕೆ ಮನಸೋತು ವೆಂಕಟ ನಾಥನನ್ನು ಪ್ರಾರ್ಥಿಸು ವರು. (ಬಾಲಾ ಭಾರ್ಯಾ ಬಾಲಕೋನೊ ಪಾನೀತ) ಇನ್ನೂ ಹರೆಯದ ಹೆಂಡತಿ ಪುತ್ರನೂ ಅನುಪನೀತ ನನಗೆಲ್ಲಿಯ ಸನ್ಯಾಸ ಎಲ್ಲಿಯ ವೇದಾಂತ ಸಾಮ್ರಾಜ್ಯ? ಭಾರವನ್ನು ಹೊತ್ತು ಸಮುದ್ರದಾಟುವ ಪ್ರಯತ್ನವಿದು ನಾನೊಲ್ಲೆ ಎಂದು ಚಿಂತಾ ಕ್ರಾಂತರಾಗಿದ್ದಾಗ ಸರಸ್ವತಿ ದೇವಿಯೇ ಅಂದು ಕನಸಿನಲ್ಲಿ ಬಂದು ವೇದಾಂತ ಸಾಮ್ರಾಜ್ಯದ ಉತ್ತರಾಧಿಕಾರಿಯಾ ಗಲೇ ಬೇಕು, ಆಚಾರ್ಯ ಮಧ್ವರ, ವೇದವ್ಯಾಸರ ತಣ್ತೀವನ್ನು ಜಗದಗಲದಲ್ಲಿ ಪಸರಿಸಲು ನೀನೇ ಸಮರ್ಥ, ಒಪ್ಪಿಕೋ ಅಂದಾಗ ಭಗವದಣತಿಯಂತೆ ಸುಧೀಂದ್ರರಿಂದ ಸನ್ಯಾಸ ಸ್ವೀಕರಿಸಿ ಶ್ರೀ ರಾಘವೇಂದ್ರ ತೀರ್ಥರಾದರು. ತಂಜಾವೂರಿನ ರಘುನಾಥ ಭೂಪಾಲನ್‌ ಸಂಸ್ಥಾನದಲ್ಲಿ ವೇದಾಂತ ಸಾಮ್ರಾಜ್ಯದ ಪಟ್ಟಾಭಿಷೇಕವಾಗಿ ತಣ್ತೀಜ್ಞಾನ ಪ್ರಸಾರ, ಭಕ್ತರಾನುಗ್ರಹದ ದೀಕ್ಷೆ ತೊಟ್ಟರು.

ಸತ್ಯನಾಮಕ ಭಗವಂತನನ್ನು ನಿತ್ಯವು ಹೃದಯದಿ ಧರಿಸಿ ಸತ್ಯಧರ್ಮರತರಾಗಿ ಭಜಕರ ಕಾಮನೆ  ಗಳನ್ನು ಪೂರೈಸುತ್ತಾ ಕಲ್ಪವೃಕ್ಷ ಕಾಮಧೇನು ವಿನಂತೆ ಬೆಳಗಿದರು ಶ್ರೀ ರಾಯರು.

ಬ್ರಹ್ಮಸೂತ್ರ, ಗೀತೆ, ಉಪನಿಷತ್ತುಗಳಿಗೆ ಟಿಪ್ಪಣಿ ಗಳನ್ನು ಸರಳ ಸುಂದರ ಭಾಷೆಯಲ್ಲಿ ರಚಿಸಿ ಅಧ್ಯೇತೃ ಗಳಿಗೆ ಮಾಡಿದ ಇವರ ಉಪಕಾರ ಅಸದೃಶ. ರಾಮಕೃಷ್ಣರ ಬಗ್ಗೆ ಚಾರಿತ್ರ್ಯಮಂಜರಿ, ಗೀತಾವಿ ವೃತ್ತಿ, ಸಂಕಲ್ಪಗದ್ಯ, ಸಮರ್ಪಣಗದ್ಯ ಹೀಗೆ ಅನೇಕ ಸ್ತೋತ್ರ ಸಾಹಿತ್ಯಗಳನ್ನು ರಚಿಸಿ ವ್ಯಾಸರ ಸೇವೆಯನ್ನು ಬಹುಮುಖದಲ್ಲಿ ನಡೆಸಿದರು. ಪರಿಮಳಾಚಾರ್ಯ ರೆನಿಸಿದ ಇವರು ಉಡುಪಿ ಯಲ್ಲಿ ಕೃಷ್ಣನನ್ನು ಸಾಕ್ಷಾತ್ತಾಗಿ ಕಂಡು ರಚಿಸಿದ “ಇಂದು ಎನಗೆ ಗೋವಿಂದ’ ಕೃತಿ ಪ್ರಸಿದ್ಧವಾಗಿದೆ.

ಭಗವದನುಗ್ರಹದಿಂದ ಭಕ್ತರ ಕಾಮನೆ ಗಳನ್ನು ಪೂರೈಸುತ್ತಾ ರಾಯರು 1671ರಲ್ಲಿ ಶ್ರಾವಣ ಬಹುಳ ದ್ವಿತೀಯದಂದು ಸಶರೀರರಾಗಿ ವೃಂದಾವನ ಪ್ರವೇಶಿಸಿ ಅಲ್ಲಿಂದಲೇ ಇಂದಿಗೂ ಅನುಗ್ರಹಿಸುತ್ತಿರುವರು. ರಾಮ, ಕೃಷ್ಣ, ವ್ಯಾಸ, ನರಸಿಂಹ ಮುಂತಾದ ಭಗ ವಾದ್ರೂಪಗಳಿಂದ ಕೂಡಿ ಕಂಗೊಳಿಸುತ್ತಿರುವ ತುಂಗಾ ತೀರದ ವೃಂದಾವನ “ಆವೃತ್ತ ಚಕ್ಷು: ಅಮೃತಣ್ತೀ¤$ಮಿತ್ಛನ್‌’ ಎಂಬಂತೆ ಒಳಕಣ್ಣಿನಿಂದ ನೋಡುವವರಿಗೆ ಇಂದಿಗೂ ಸಾಕ್ಷಾತ್‌ ದರ್ಶನ ನೀಡುತ್ತಿರುವುದು.

– ಚಿಪ್ಪಗಿರಿ ನಾಗೇಂದ್ರ ಆಚಾರ್ಯ

ಟಾಪ್ ನ್ಯೂಸ್

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.