ಬೇಸಿಕ್‌ನಲ್ಲಿ ಯುಪಿಐ; ಇಂಟರ್ನೆಟ್ ಇಲ್ಲದೆಯೂ ವಹಿವಾಟು ನಡೆಸುವ ವ್ಯವಸ್ಥೆ
Team Udayavani, Mar 9, 2022, 11:35 AM IST
ಮುಂಬಯಿ: ಸ್ಮಾರ್ಟ್‌ಫೋನ್ ಇರುವವರು ಕಣ್ಣು ಮಿಟುಕಿಸುವಷ್ಟರಲ್ಲಿ ಬಿಲ್ ಕಟ್ಟುತ್ತಾರೆ, ಒಬ್ಬರಿಂದೊ ಬ್ಬರಿಗೆ ಹಣ ಪಾವತಿಸುತ್ತಾರೆ. ಆದರೆ ನಮ್ಮಂಥ ಬೇಸಿಕ್ ಫೋನ್ ಬಳಸುವ ವರಿಗೆ ಇಂಥ ಸೌಲಭ್ಯ ಇಲ್ಲ ವಲ್ಲಾ ಎಂದು ಕೊರಗುತ್ತಿ ದ್ದೀರಾ? ಇನ್ನು ಮುಂದೆ ಬೇಸಿಕ್ ಫೋನ್ ಬಳಕೆದಾ ರರು ಕೂಡ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ)ಯ ಅನು ಕೂಲತೆಯನ್ನು ಪಡೆಯಬಹುದು.
ಇಂಟರ್ನೆಟ್‌ನ ಅಗತ್ಯವಿಲ್ಲದೇ ಕ್ಷಣ ಮಾತ್ರದಲ್ಲಿ ಹಣ ಪಾವತಿಸುವ “ಯುಪಿಐ 123 ಪೇ’ ಎಂಬ ವ್ಯವಸ್ಥೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಮಂಗಳವಾರ ಲೋಕಾರ್ಪಣೆ ಮಾಡಿದ್ದಾರೆ. ಇದರಿಂದ ದೇಶದ 40 ಕೋಟಿ ಬೇಸಿಕ್ ಫೋನ್ ಬಳಕೆ ದಾರರಿಗೆ ನೆರವಾಗಲಿದೆ ಎಂದೂ ಅವರು ಹೇಳಿದ್ದಾರೆ. ಈವರೆಗೆ ಕೇವಲ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಾತ್ರ ಯುಪಿಐ ಮೂಲಕ ಹಣವನ್ನು ಸ್ವೀಕರಿಸುವ ಮತ್ತು ಪಾವತಿ ಸುವ ಅವಕಾಶ ಲಭ್ಯವಿತ್ತು.
ಡಿಜಿ ಸಾಥಿಗೂ ಚಾಲನೆ: ಡಿಜಿಟಲ್ ಪಾವತಿಗೆ ನೆರವಾ ಗುವ 24/7 ಸಹಾಯವಾಣಿ “ಡಿಜಿ ಸಾಥಿ’ಗೂ ಚಾಲನೆ ನೀಡಲಾಗಿದೆ. ಇದರ ಮೂಲಕ ಗ್ರಾಹಕರು ಡಿಜಿಟಲ್ ಪಾವತಿಗೆ ಸಂಬಂಧಿಸಿದ ಎಲ್ಲ ಸಂದೇಹ ಗಳಿಗೂ ಪರಿಹಾರ ಪಡೆಯಬಹುದು.
www.digisaathi.infoಗೆ ಭೇಟಿ ನೀಡಬಹುದು ಅಥವಾ 14431 ಮತ್ತು 1800 891 3333 ಗೆ ಕರೆ ಮಾಡಬಹುದು.
ಗ್ರಾಹಕರು ಏನು ಮಾಡಬೇಕು? ಆರಂಭದಲ್ಲಿ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಈ ಸೇವೆ ಲಭ್ಯವಿರಲಿದೆ. ಯುಪಿಐ 123 ಪೇ ಸೌಲಭ್ಯವನ್ನು ಪಡೆಯಬೇ ಕೆಂದರೆ ಮೊದಲು ಬಳಕೆದಾರರು ತಮ್ಮ ಬೇಸಿಕ್ ಫೋನ್‌ಗಳಿಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡ ಬೇಕು. ಬಳಿಕ ತಮ್ಮ ಡೆಬಿಟ್ ಕಾರ್ಡ್ ಬಳಸಿ ಕೊಂಡು ಯುಪಿಐ ಪಿನ್ ಸೆಟ್ ಮಾಡಬೇಕು. ಒಮ್ಮೆ ಯುಪಿಐ ಪಿನ್ ರಚನೆಯಾದರೆ ನಿಮ್ಮ ಬೇಸಿಕ್ ಫೋನ್‌ನಿಂದಲೇ ಯಾವುದೇ ವಹಿವಾಟು ನಡೆಸಬಹುದು.
ಬಳಕೆ ಹೇಗೆ?
ಬೇಸಿಕ್ ಫೋನ್ ಬಳಕೆದಾರರು ನಾಲ್ಕು ಪರ್ಯಾಯ ತಂತ್ರಜ್ಞಾನಗಳನ್ನು ಆಧರಿಸಿ ವಹಿವಾಟುಗಳನ್ನು ನಡೆಸಬಹುದು. ಅವೆಂದರೆ ಐವಿಆರ್(ಇಂಟರ್ಯಾಕ್ಟಿವ್ ವಾಯ್ಸ ರೆಸ್ಪಾನ್ಸ್) ಸಂಖ್ಯೆಗೆ ಕರೆ ಮಾಡುವ ಮೂಲಕ ಹಣ ಪಾವತಿಸುವುದು. ಹಣ ರವಾನೆ ಮಾಡಬೇಕೆಂದರೆ ಅದು ಯಾರಿಗೆ ತಲುಪಬೇಕೋ ಅವರ ಫೋನ್ ನಂಬರ್ ನಮೂದಿಸಿ, ಎಷ್ಟು ಮೊತ್ತ ಎಂದು ಬರೆದು, ಯುಪಿಐ ಪಿನ್ ಅನ್ನು ನಮೂದಿಸಬೇಕು.
ಬೇಸಿಕ್ ಫೋನ್‌ಗಳಲ್ಲಿ ಆ್ಯಪ್‌ಗ್ಳನ್ನು ಬಳಸಿಕೊಂಡು ವ್ಯವಹರಿಸುವುದು: ಇದರಲ್ಲಿ “ಸ್ಕ್ಯಾನ್ ಮಾಡಿ ಪಾವತಿಸುವ ಆಯ್ಕೆ’ ಹೊರತುಪಡಿಸಿ ಉಳಿದೆಲ್ಲ ಯುಪಿಐ ಫೀಚರ್‌ಗಳೂ ಇರುತ್ತವೆ.
ಮಿಸ್ಡ್ ಕಾಲ್ ಕೊಟ್ಟು ಸೇವೆ ಪಡೆಯು ವುದು: ಯಾವುದಾದರೂ ಮಳಿಗೆಗೆ ಹಣ ಪಾವತಿಸಬೇಕೆಂದಿದ್ದರೆ, ಆ ಮಳಿಗೆಯ ಹೊರಗೆ ಪ್ರಕಟಿಸಲಾದ ಸಂಖ್ಯೆಗೆ ನೀವು ಮಿಸ್ಡ್ ಕಾಲ್ ಕೊಡಬೇಕು. ತತ್‌ಕ್ಷಣ ಅತ್ತ ಕಡೆ ಯಿಂದ ಮರಳಿ ನಿಮಗೆ ಕರೆ ಬರುತ್ತದೆ. ಹಣ ಪಾವತಿಯ ಕುರಿತು ದೃಢೀಕರಣ ಕೇಳಲಾಗುತ್ತದೆ ಮತ್ತು ಯುಪಿಐ ಪಿನ್ ನಮೂದಿಸುವಂತೆ ಸೂಚಿಸಲಾಗುತ್ತದೆ. ಪಿನ್ ಹಾಕಿದೊಡನೆ ಹಣ ಪಾವತಿಯಾಗುತ್ತದೆ.ಧ್ವನಿ-ಆಧರಿತ ಪಾವತಿ. ಇಲ್ಲಿ ಧ್ವನಿಯ ತರಂಗಗಳ ಬಳಸಿ ಇತರರಿಗೆ ಸಂಪರ್ಕ ರಹಿತ ಪಾವತಿಯನ್ನು ಮಾಡಬಹುದು.
ಯಾವುದಕ್ಕೆ ಬಳಸಬಹುದು?
ಈ ವ್ಯವಸ್ಥೆ ಮೂಲಕ ಯಾರಿಗೇ ಆದರೂ ಹಣ ರವಾನೆ ಮಾಡಬಹುದು, ನೀರು, ವಿದ್ಯುತ್ ಸೇರಿ ಇತರ ಬಿಲ್‌ಗಳ ಪಾವತಿ, ಫಾಸ್ಟ್‌ಟ್ಯಾಗ್ ರೀಚಾರ್ಜ್, ಮೊಬೈಲ್ ಬಿಲ್ ಪಾವತಿ ಮಾಡಬಹುದು. ಖಾತೆಯಲ್ಲಿರುವ ಬ್ಯಾಲೆನ್ಸ್ ಎಷ್ಟೆಂದು ನೋಡಬಹುದು. ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು, ಯುಪಿಐ ಪಿನ್‌ಗಳನ್ನು ಸೆಟ್ ಮಾಡುವುದು ಅಥವಾ ಬದಲಾಯಿಸುವ ಕೆಲಸವನ್ನೂ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್ ಬೆಳೆಯಲು ಪ್ಲಾನ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.