ನ್ಯಾಟೋ ವಿರುದ್ಧ ಸಿಟ್ಟು: ವೊಲೋಡಿಮಿರ್ ಝೆಲೆನ್ಸ್ಕಿ
Team Udayavani, Mar 9, 2022, 7:45 AM IST
ನ್ಯಾಟೋ ರಾಷ್ಟ್ರಗಳನ್ನು ನಂಬಿ ಕೆಟ್ಟರೇ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ? ಹೊಸತಾಗಿ ಬಿಡುಗಡೆ ಮಾಡಿರುವ ವೀಡಿಯೋ ಸಂದೇಶದಲ್ಲಿ ಅವರ ಮಾತುಗಳನ್ನು ಕೇಳಿದರೆ ಹೀಗೆ ಅನ್ನಿಸದೆ ಇರದು “ಪಾಶ್ಚಾತ್ಯ ರಾಷ್ಟ್ರಗಳು ನಮಗೆ ನೆರವು ನೀಡುವುದಾಗಿ ವಾಗ್ಧಾನ ನೀಡಿದ್ದವು. ಆದರೆ ಅವು ನಮ್ಮ ನಗರಗಳನ್ನು ರಕ್ಷಿಸಲು ಸಹಕರಿಸದೆ ಸುಮ್ಮನೆ ಕುಳಿತಿವೆ. ಇದರಿಂದ ರಷ್ಯಾ ನಮ್ಮ ನಗರಗಳ ಮೇಲೆ ಬಾಂಬ್ ದಾಳಿ ನಡೆಸಿದೆ’ ಎಂದು ಝೆಲೆನ್ಸ್ಕಿ ಅಸಮಾಧಾನ ಹೊರಹಾಕಿದ್ದಾರೆ.
ಇದರ ಜತೆಗೆ ಉಕ್ರೇನ್‌ನಿಂದ ನಾನೆಲ್ಲಿಗೂ ಓಡಿ ಹೋಗಿಲ್ಲ. ನಾನು ಯಾರಿಗೂ ಹೆದರುವುದೂ ಇಲ್ಲ ಎಂದಿದ್ದಾರೆ. ಜತೆಗೆ ಅವರು ಇರುವ ಸ್ಥಳದ ವಿವರವನ್ನೂ ಪ್ರಕಟಿಸಿದ್ದಾರೆ.
“ನಾನು ಉಕ್ರೇನ್ ರಾಜಧಾನಿ ಕೀವ್‌ನ ಬಂಕೋವಾ ರಸ್ತೆಯಲ್ಲೇ ವಾಸವಿದ್ದೇನೆ. ಈಗ ನಮ್ಮಲ್ಲಿ ಪ್ರತೀ ದಿನ, ಪ್ರತೀ ರಾತ್ರಿಯೂ ಸೋಮವಾರವೇ. ನನ್ನ ತಂಡ ನನ್ನೊಂದಿಗಿದೆ. ವೈದ್ಯರು, ರಕ್ಷಕರು, ಸಾರಿಗೆ ಸಿಬಂದಿ, ಪತ್ರಕರ್ತರು ಹೀಗೆ ಎಲ್ಲರೂ ಯುದ್ಧದಲ್ಲಿದ್ದೇವೆ. ಈ ಯುದ್ಧವನ್ನು ಗೆದ್ದೇ ಗೆಲ್ಲುತ್ತೇವೆ. ಶತ್ರುಗಳಿಂದ ನಾಶವಾಗಿರುವ ನಗರಗಳನ್ನು ರಷ್ಯಾದ ನಗರಗಳಿಗಿಂತ ಚಂದವಾಗಿ ಮರುಸ್ಥಾಪಿಸುತ್ತೇವೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.