ಜೈಲಿಂದ ಬಂದು ಕನ್ನ ಹಾಕುತ್ತಿದ್ದ ಮೂವರ ಸೆರೆ
ಕದ್ದ ಚಿನ್ನ ತಾಯಿ ಮೂಲಕ ಮಾರಾಟ
Team Udayavani, Mar 9, 2022, 11:37 AM IST
ಬೆಂಗಳೂರು: ಜೈಲಿನಲ್ಲಿ ಪರಿಚಯಿಸಿಕೊಂಡು ಸಮೀಪದ ನಿರ್ಮಾಣದ ಹಂತದ ಕಟ್ಟಡಗಳಲ್ಲಿವಾಸವಾಗಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಂದಿನಿಲೇಔಟ್ ಪೊಲೀಸರು ಬಂಧಿಸಿದ್ದಾರೆ.
ರಾಜಾನುಕುಂಟೆಯ ಸತೀಶ್ ಕುಮಾರ್(34), ಯಶವಂತಪುರದ ಶ್ರೀನಿವಾಸ (38), ಬಸವೇಶ್ವರನಗರದ ತೇಜಸ್ (23) ಬಂಧಿತರು. ಆರೋಪಿಗಳಿಂದ 55.18 ಲಕ್ಷ ರೂ. ಮೌಲ್ಯದ1.12 ಕೆ.ಜಿ. ಚಿನ್ನಾಭರಣ, 1.96 ಕೆ.ಜಿ. ಬೆಳ್ಳಿವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿದಾಖಲಾಗಿದ್ದ 14 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು. ಇತ್ತೀಚೆಗೆ ಆರೋಪಿಗಳು, ನಂದಿನಿ ಲೇಔಟ್‌ನ ಜೈಮಾರುತಿ ನಗರದಲ್ಲಿ ಗ್ಯಾರೆಜ್ ನಡೆಸುತ್ತಿರುವವ್ಯಕ್ತಿಯೊಬ್ಬರು ಕುಟುಂಬ ಸಮೇತ ಫೆ.15ರಂದುಸಂಬಂಧಿಕರ ಪುತ್ರನ ಮದುವೆಗೆ ಹೋಗಿದ್ದರು.
ಮಧ್ಯಾಹ್ನದ ವೇಳೆಗೆ ವಾಪಸ್ ಬಂದಾಗ ಕಳ್ಳತನಬೆಳಕಿಗೆ ಬಂದಿತ್ತು. ಈ ಸಂಬಂಧ ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಆರಂಭದಲ್ಲಿ ಮನೆಮಾಲಿಕರ ಸಂಬಂಧಿಕರೇ ಕಳ್ಳತನ ಎಸಗಿದ್ದಾರೆ ಎಂದು ಭಾವಿಸಲಾಗಿತ್ತು. ನಂತರ ತನಿಖೆಯಲ್ಲಿ ಆರೋಪಿಗಳು ಕೃತ್ಯ ಎಸಗಿರುವುದು ಪತ್ತೆಯಾಗಿತ್ತು. ಆರೋಪಿಗಳ ಪೈಕಿ ಸತೀಶ್ ಗಾರೆ ಕೆಲಸ ಮಾಡುತ್ತಿದ್ದ. ಶ್ರೀನಿವಾಸ್ ಬಾರ್ ಬೆಂಡಿಂಗ್ ಕೆಲಸಮಾಡುತ್ತಿದ್ದ. ತೇಜಸ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೋಜಿನ ಜೀವನಕ್ಕಾಗಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಜೈಲಿನಲ್ಲಿ ಪರಿಚಯ: ಸತೀಶ್ ಈ ಹಿಂದೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದರೋಡೆ ಹಾಗೂ ಹಗಲು-ರಾತ್ರಿ ಕನ್ನಹಾಕಿ ಕಳವುಪ್ರಕರಣದಲ್ಲಿ ಜೈಲು ಸೇರಿದ್ದ. ಶ್ರೀನಿವಾಸ್ ಕೂಡಕಳವು ಪ್ರಕರಣದಲ್ಲಿ ಜೈಲು ಸೇರಿದ್ದ. ತೇಜಸ್‌ನನ್ನೂಅಪಹರಣ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಹೀಗಾಗಿ ಮೂವರು ಜೈಲಿನಲ್ಲಿಯೇ ಪರಿಚಯಸ್ಥರಾಗಿದ್ದರು. 2021ರಲ್ಲಿ ಜಾಮೀನು ಪಡೆದು ಹೊರಬಂದು ಮನೆ ಕಳವು, ದರೋಡೆಗೆ ಸಂಚುರೂಪಿಸಿದ್ದರು. ತೇಜಸ್ ಬಸವೇಶ್ವರನಗರದ ಕಮಲಾನಗರದಲ್ಲಿ ತಾಯಿ ಜತೆ ವಾಸವಾಗಿದ್ದ.
ಆಗ ಸತೀಶ್ ಮತ್ತು ಶ್ರೀನಿವಾಸ್‌ನನ್ನು ಸ್ನೇಹಿತರೆಂದು ಪರಿಚಯಿಸಿದ್ದ. ಅಲ್ಲದೇ, ಅದೇಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ.ಮೂವರು ಒಂದೇ ಮನೆಯಲ್ಲಿ ಕುಳಿತುಮನೆಗಳ್ಳತನಕ್ಕೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದರು.
ನಿರ್ಮಾಣ ಹಂತದ ಕಟ್ಟಡಗಳಲ್ಲಿ ಬಚ್ಚಿಟ್ಟು ಕೊಂಡು ಕಳವು: ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ ಆರೋಪಿಗಳು ಕಳ್ಳತನಕ್ಕೂ ಐದಾರು ಗಂಟೆ ಮೊದಲು ಬೀಗ ಹಾಕಿರುವಮನೆಯ ಅಕ್ಕ- ಪಕ್ಕದಲ್ಲಿರುವ ನಿರ್ಮಾಣ ಹಂತದ ಖಾಲಿ ಕಟ್ಟಡಗಳಲ್ಲಿ ಅವಿತುಕೊಳ್ಳುತ್ತಿದ್ದರು. ಆ ಭಾಗದ ಜನರ ಚಲನವಲನ ಗಳನ್ನುಗಮನಿಸುತ್ತಿದ್ದ ಮೂವರು,ಮಧ್ಯರಾತ್ರಿ ನಕಲಿ ಕೀ ಬಳಸಿ ಅಥವಾ ರಾಡ್‌ನಿಂದಬಾಗಿಲು ಮುರಿದು ಕಳವುಮಾಡಿದ್ದರು ಎಂದು ಪೊಲೀಸರು ಹೇಳಿದರು.
ಇನ್ನು ಕದ್ದಚಿನ್ನಾಭರಣವನ್ನು ತೇಜಸ್ ತನ್ನ ತಾಯಿ ಬಳಿ ಸ್ನೇಹಿತ ಸತೀಶ್ ಹಾಗೂ ಶ್ರೀನಿವಾಸ್‌ಕಷ್ಟದಲ್ಲಿದ್ದಾರೆ. ಹೀಗಾಗಿ, ಚಿನ್ನಾಭರಣವನ್ನು ಗಿರವಿಯಲ್ಲಿ ಇಟ್ಟು ಹಣಕೊಡಿಸು ಕೊಡು ಎಂದು ಹೇಳುತ್ತಿದ್ದ. ಅದನ್ನುನಂಬುತ್ತಿದ್ದ ಆತನ ತಾಯಿ ತನ್ನ ಹೆಸರಿನಲ್ಲಿ ನಾನಾ ಗಿರವಿ ಅಂಗಡಿಗಳಲ್ಲಿ ಚಿನ್ನಾಭರಣ ಗಿರವಿ ಇಟ್ಟು ಹಣ ಕೊಡಿಸುತ್ತಿದ್ದರು. ಇದೀಗ ಗಿರವಿ ಇಟ್ಟಿದ್ದ ಬಹುತೇಕ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ನಂದಿನಿಲೇಔಟ್ ಠಾಣೆ ಇನ್‌ಸ್ಪೆಕ್ಟರ್ ವೆಂಕಟೇಗೌಡ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.