ಕರ್ನಾಟಕ ಶಾಸ್ರ್ತೀಯ ಸಂಗೀತದ ಅದ್ಬುತ ಪ್ರತಿಭೆ ಜಯಶ್ರೀ ರಮೇಶ್
Team Udayavani, Mar 9, 2022, 1:57 PM IST
ಕುದೂರು : ಒಂದೇ ಕಲೆಯಲ್ಲಿ ಪ್ರಾವೀಣ್ಯತೆ ಪಡೆಯುವುದು ಕಷ್ಟಕರ ಇನ್ನೂ ಎರಡೆರಡು ಸಂಗೀತ ಕಲೆಯಲ್ಲಿ ನೈಪುಣ್ಯತೆ ಪಡೆಯುವುದು ಅಪರೂಪದ ಸಂಗತಿ ಹೌದು. ಅಂತಹ ಪ್ರತಿಭಾವಂತರಿದ್ದಾರೆ ಅವರೇ ಕುದೂರಿನ ದಿ .ದಿವಂಗತ ಸಾಂಬಶಿವಯ್ಯ ನವರ ಮೊಮ್ಮಗಳು ಜಯಶ್ರೀ ರಮೇಶ್ ವಿದೂಷಿ ಜಯಶ್ರೀ ರಮೇಶ್ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ಬಹಳಷ್ಟು ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ವಿದೂಷಿ ಜಯಶ್ರೀ ರಮೇಶ್ ರವರು ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಕುಟುಂಬದಿಂದ ಬಂದವರು ಈ ಹೀಗಾಗಿ ಸಂಗೀತ ಕಲಿಯುವವರಿಗೆ ಜನ್ಮತಹ ಒಲಿದು ಬಂದಿದೆ ಎಂದರೆ ತಪ್ಪಾಗಲಾರದು. ಜಯಶ್ರೀ ಶ್ರೀಮತಿ ಮೀನಾಕ್ಷಿ ಮತ್ತು ಶ್ರೀ ರಾಮ ಮೂರ್ತಿ ಅವರ ಹಿರಿಯ ಪುತ್ರಿ. ಇವರಿಗೆ ಸಂಗೀತದ ಬಗ್ಗೆ ಆಸಕ್ತಿ ಹಾಗೂ ಪ್ರೇರಣೆ ನೀಡಿದವರು ಇವರ ತಂದೆ ರಾಮಮೂರ್ತಿ ರವರು ಇವರ ತಂದೆ ಪ್ರಸಿದ್ಧ ಮೃದಂಗ ವಾದಕರು ಹಾಗೂ ನಿವೃತ್ತಿ ಸಹಾಯಕ ಮುಖ್ಯ ಅಂಚೆ ಪಾಲಕರು .
ಜಯಶ್ರೀ ರವರು ತಮ್ಮ ಪ್ರಾರಂಭಿಕ ಸಂಗೀತ ಶಿಕ್ಷಣವನ್ನು ಟಿ.ಆರ್ ಗಂಗಾಧರಂ ಬೇತಮಂಗಲ ಇವರ ಬಳಿ ಆರಂಭಿಸಿದರು ಹಾಗೂ ಉನ್ನತ ಶಿಕ್ಷಣವನ್ನು ಶ್ರೀ ಕಂಚಿ ಕಾಮಕೋಟಿ ಪೀಠ ಆಸ್ಥಾನ ವಿದ್ವಾನ್ ವಿ .ರಮೇಶ್ ಬೇತಮಂಗಲ ಪ್ರಸಿದ್ಧ ನಾದಸ್ವರ ವಾದಕರು ಮತ್ತು ಶ್ರೀ ಗಂಗಾಧರ್ ಸ್ಮಾರಕ ಸಂಗೀತ ಪಾಠಶಾಲೆಯ ಪ್ರಾಂಶುಪಾಲರು ಮುಂದುವರಿಸಿದರು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಸಂಗೀತ ಪರೀಕ್ಷೆಗಳಲ್ಲಿಯೂ ಸಹ ಉತ್ತಮ ಅಂಕ ಪಡೆದಿದ್ದಾರೆ .
ಸಾವಿರದ 1998 ರಿಂದ ತಮ್ಮ ಸಂಗೀತ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.
ತ್ಯಾಗರಾಜ. ಪುರಂದರದಾಸರ .ಆರಾಧನೆಗಳಿಂದ ಅನೇಕ ಸಂಗೀತ ಕಚೇರಿಗಳನ್ನು ನಾಡಿನಾದ್ಯಂತ ಹಾಗೂ ಹೊರರಾಜ್ಯಗಳಲ್ಲಿ ನೀಡಿರುತ್ತಾರೆ. ಇವರ ಸಂಗೀತ ಸೇವೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಇದರಲ್ಲಿ ಸ್ವರ್ಣಕಲಾಶ್ರೀ ಎಂಬ ಬಿರುದು ಕೂಡ ಬಂದಿದೆ. ಸಂಗೀತ ಕಲಾವಿದರಾಗಿ ಯೇ ಅಲ್ಲದೆ ಸಂಗೀತ ಶಿಕ್ಷಕಿಯಾಗಿ ಮಾರ್ಗದರ್ಶಕರಾಗಿ ಅನೇಕ ಶಿಕ್ಷಕರನ್ನು ತಯಾರು ಮಾಡಿದ್ದಾರೆ ಹಾಗೂ ಮಾಡುತ್ತಲೇ ಇದ್ದಾರೆ.
– ಕೆ.ಎಸ್.ಮಂಜುನಾಥ್ ಕುದೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Illegal immigrants; ಬಂಧಿತ ಪಾಕ್ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?
Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್ ಪದವಿ ಕೊಡಲಿದೆ ವಿಟಿಯು!
Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ
CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ
Congress Government 11 ಲಕ್ಷ ಕುಟುಂಬಗಳ ಅನ್ನವನ್ನು ಕಿತ್ತುಕೊಳ್ಳುತ್ತಿದೆ: ಎಚ್‌ಡಿಕೆ
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.