ಕಿತ್ತೂರು ಕೋಟೆ-ಅರಮನೆ ವೀಕ್ಷಿಸಿದ ರಾಜ್ಯಪಾಲ
ವಿವಿಧ ಮಠಾಧಿಧೀಶರು ರಾಜ್ಯಪಾಲರಿಗೆ ರಾಣಿ ಚನ್ನಮ್ಮಾಜಿ ಪ್ರತಿಮೆ ನೀಡಿ ಸನ್ಮಾನಿಸಿದರು.
Team Udayavani, Mar 9, 2022, 5:47 PM IST
ಚನ್ನಮ್ಮನ ಕಿತ್ತೂರ: ಇಲ್ಲಿಯ ಐತಿಹಾಸಿಕ ರಾಣಿ ಚನ್ನಮ್ಮಾಜಿಯ ಕೋಟೆ ಆವರಣ, ಅರಮನೆ ಮತ್ತು ರಾಣಿ ಚನ್ನಮ್ಮಾಜಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಭೇಟಿ ನೀಡಿ ಕಿತ್ತೂರಿನ ಇತಿಹಾಸವನ್ನು ತಿಳಿದುಕೊಂಡರು.
ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಹಿರಿಯ ಅ ಧಿಕಾರಿಗಳು ಮತ್ತು ಸ್ಥಳೀಯ ಶಾಸಕ ಮಹಾಂತೇಶ ದೊಡಗೌಡರ ಸಾಥ್ ನೀಡಿದರು. ಅರಮನೆಗೆ ಭೇಟಿ ನೀಡಿದ ಅವರು, ದರ್ಬಾರ್ ಹಾಲ್, ಬತೇರಿ, ಅರಮನೆಯ ಮುಖ್ಯದ್ವಾರ, ಅತಿಥಿ ಕೋಣೆಗಳು, ಸಭಾಗೃಹ, ಭೋಜನಾಲಯ, ಪೂಜಾ ಕೊಠಡಿ, ಬಾವಿಗಳು, ಸ್ನಾನದ ಮನೆ ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ನಂತರ ಕಿತ್ತೂರು ರಾಣಿ ಚೆನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ
ಭೇಟಿ ನೀಡಿ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಶಸ್ತ್ರಾಸ್ತ್ರಗಳು, ಕತ್ತಿಗಳು, ಕೋಟ್, ಗುರಾಣಿ, ಕೆತ್ತಿದ ಮರದ ಬಾಗಿಲುಗಳು ಮತ್ತು ಕಿತ್ತೂರು ಅರಮನೆಯ ಕಿಟಕಿಗಳು, ಶಾಸನಗಳನ್ನು ಮತ್ತು ಪ್ರಾಚೀನ ವಸ್ತುಗಳ ಸಂಗ್ರಹವನ್ನು ವೀಕ್ಷಿಸಿದರು.
ಇದಕ್ಕೂ ಮೊದಲು ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಣಿ ಚನ್ನಮ್ಮಾಜಿ ಪ್ರತಿಮೆಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಶಾಸಕ ಮಹಾಂತೇಶ ದೊಡಗೌಡರ ಮಾಲಾರ್ಪನೆ ಮಾಡಿ ಗೌರವ ಸಲ್ಲಿಸಿದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳಲು ಉದ್ದೇಶಿಸಿರುವ ಅರಮನೆ ಮರು ನಿರ್ಮಾಣ ಯೋಜನೆಯ ನೀಲನಕ್ಷೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ವಿಕ್ಷಿಸಿದರು. ಶಾಸಕ ಮಹಾಂತೇಶ ದೊಡಗೌಡರ, ವಿವಿಧ ಮಠಾಧಿಧೀಶರು ರಾಜ್ಯಪಾಲರಿಗೆ ರಾಣಿ ಚನ್ನಮ್ಮಾಜಿ ಪ್ರತಿಮೆ ನೀಡಿ ಸನ್ಮಾನಿಸಿದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಶಾಸಕ ಮಹಾಂತೇಶ ದೊಡಗೌಡರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಉಳವಪ್ಪ ಉಳ್ಳಾಗಡ್ಡಿ, ಬಸನಗೌಡ ಸಿದ್ರಾಮನಿ, ಕಿರಣ ಪಾಟೀಲ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ತಾಪಂ ಇಓ ಸುಭಾಸ ಸಂಪಗಾಂವಿ, ಸಿಪಿಐ ಮಹಾಂತೇಶ ಹೊಸಪೇಟ್, ಲೋಕೋಪಯೋಗಿ ಅಭಿಯಂತರ ಪ್ರವೀಣ ಹುಲಜಿ, ವಸ್ತು ಸಂಗ್ರಹಾ ಲಯದ ಕ್ಯೂರೇಟರ್ ರಾಘವೇಂದ್ರ, ಪಪಂ ಮುಖ್ಯಾ ಧಿಕಾರಿ ಪ್ರಕಾಶ ಮಠದ, ವಿವಿಧ ಇಲಾಖೆ ಅಧಿ ಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ರಾಜ್ಯಪಾಲರು ಮಾತನಾಡಿ, ಮಹಿಳಾ ದಿನದಂದು ಕಿತ್ತೂರಿಗೆ ಆಗಮಿಸಿರುವದು ಬಹಳ ಸಂತೋಷ ತಂದಿದೆ. ರಾಣಿ ಚನ್ನಮ್ಮಾಜಿ ಕರ್ಮಭೂಮಿಗೆ ಭೇಟಿ ನೀಡುವ ಉದ್ದೇಶವಿತ್ತು. ಅದು ಈಗ ಸಾಧ್ಯವಾಯಿತು. ದೇಶದ ಸ್ವಾತಂತ್ರ್ಯದ ಕಿಡಿ ಹಚ್ಚಿ ಜನರಲ್ಲಿ ಜಾಗೃತಿ ಮೂಡಿಸಿದ ವೀರ ಮಹಿಳೆ ರಾಣಿ ಚನ್ನಮ್ಮಾಜಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಅನೇಕ ಮಹನೀಯರು ಹೋರಾಟ ಮಾಡಿದರು.ಅವರ ತ್ಯಾಗ-ಬಲಿದಾನ-ಸಂಘರ್ಷದಿಂದ ಸ್ವಾತಂತ್ರ್ಯ ದೊರೆಯಿತು. ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದೆ. ನಮ್ಮ ದೇಶದ ಸ್ವಾತಂತ್ರ್ಯ ಮತ್ತಷ್ಟು ಗಟ್ಟಿಗೊಳ್ಳಲಿ ಎಂದು ಹಾರೈಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.