ಇವಿಎಂ ಪ್ರೋಟೋಕಾಲ್ ಉಲ್ಲಂಘನೆಯಾಗಿದೆ
ವಾರಾಣಸಿ ಜಿಲ್ಲಾ ಚುನಾವಣಾಧಿಕಾರಿ ಸ್ಪಷ್ಟನೆ; ತರಬೇತಿಗೆ ಬಳಸಿದ್ದ ಇವಿಎಂ ಸ್ಥಳಾಂತರದಲ್ಲಿ ದೋಷ
Team Udayavani, Mar 10, 2022, 7:45 AM IST
ಲಖನೌ: ಉತ್ತರ ಪ್ರದೇಶ ಚುನಾವಣೆ ಫಲಿತಾಂಶಕ್ಕೆ 48 ಗಂಟೆಗಳಿರುವಾಗ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಇವಿಎಂ ಮತಯಂತ್ರಗಳ ಸಾಗಣೆಯಲ್ಲಿ ಅನ್ಯಾಯವಾಗಿರುವ ಬಗ್ಗೆ ದೂರಿರುವ ಬಗ್ಗೆ ವಾರಾಣಸಿ ಜಿಲ್ಲಾ ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಇವಿಎಂ ಸಾಗಣೆ ಪ್ರೋಟೋಕಾಲ್‌ನ ಉಲ್ಲಂಘನೆಯಾಗಿದೆ, ಆದರೆ ಅವುಗಳು ತರಬೇತಿಗೆಂದು ಬಳಸಲಾಗಿದ್ದ ಇವಿಎಂಗಳಷ್ಟೇ ಎಂದು ಆಯುಕ್ತರಾಗಿರುವ ದೀಪಕ್ ಅಗರ್ವಾಲ್ ತಿಳಿಸಿದ್ದಾರೆ.
ಮತಗಟ್ಟೆಗಳಲ್ಲಿ ಇವಿಎಂಗಳ ರಕ್ಷಣೆಗಾಗಿಯೇ ಸಿಸಿಟಿವಿ ಹಾಕಲಾಗಿರುತ್ತದೆ, ಕಾವಲು ಕೂಡ ಇರುತ್ತದೆ. ಅದನ್ನು ಸುಲಭವಾಗಿ ಬೇರೆಯವರು ಹೊತ್ತೂಯ್ಯಲು ಸಾಧ್ಯವಿಲ್ಲ. ಬೇಕಾದರೆ ಪಕ್ಷಗಳ ನಾಯಕರು ಇವಿಎಂ ಸಾಗಣೆ ಎಷ್ಟು ಕಟ್ಟುನಿಟ್ಟಾಗಿ ನಡೆಯುತ್ತದೆ ಎನ್ನುವುದನ್ನು ಹೊರಗಿನಿಂದ ನೋಡಬಹುದು ಎಂದು ದೀಪಕ್ ಹೇಳಿದ್ದಾರೆ.
ಅಧಿಕಾರಿ ಅಮಾನತು?
ತರಬೇತಿ ಇವಿಎಂಗಳ ಸಾಗಣೆಯಲ್ಲಿ ದೋಷವಾಗಿರುವುದು ಬೆಳಕಿಗೆ ಬಂದ ಬೆನ್ನಲ್ಲೇ, ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ ಎಂದು ವಾರಾಣಸಿ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ವಾರಾಣಸಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್.ಕೆ.ಸಿಂಗ್‌ರನ್ನು ಅಮಾನತು ಮಾಡಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಸಮೀಕ್ಷೆಯಲ್ಲೂ ಬಿಜೆಪಿ ತೆಕ್ಕೆಗೆ ಉ.ಪ್ರ.
ನವದೆಹಲಿ: ಇದೇ ತಿಂಗಳ 7ರಂದು ಪ್ರಕಟವಾದ ನಾನಾ ಮತಗಟ್ಟೆಗಳ ಸಮೀಕ್ಷೆಗಳ ನಂತರ ಮತ್ತೂಂದು ಚುನಾವಣೋತ್ತರ ಸಮೀಕ್ಷೆಯೊಂದು ಬಹಿರಂಗವಾಗಿದೆ. ಲೋಕನೀತಿ ಮತ್ತು ಸಿಎಸ್‌ಡಿಎಸ್ ಸಂಸ್ಥೆಗಳು ಈ ಸಮೀಕ್ಷೆ ನಡೆಸಿದ್ದು, ಅದರ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಜಯ ಸಾಧಿಸಲಿದೆ ಎಂದು ಅದರಲ್ಲಿ ಹೇಳಿಕೊಳ್ಳಲಾಗಿದೆ.
ಉತ್ತರ ಪ್ರದೇಶಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ಶೇ.43, ಸಮಾಜವಾದಿ ಪಕ್ಷಕ್ಕೆ ಶೇ.35, ಬಿಎಸ್‌ಪಿ ಶೇ.15, ಕಾಂಗ್ರೆಸ್‌ಗೆ ಶೇ. 3 ಮತಗಳು ಪ್ರಾಪ್ತಿಯಾಗಲಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ 403 ಕ್ಷೇತ್ರಗಳ ಪೈಕಿ 241, ಸಮಾಜವಾದಿ ಪಕ್ಷ 142 ಕ್ಷೇತ್ರಗಳಲ್ಲಿ ಜಯ ಸಾಧಿಸಲಿವೆ. ಉ.ಪ್ರ.ದಲ್ಲಿ ಸರಳ ಬಹುಮತಕ್ಕೆ 202 ಸ್ಥಾನ ಬೇಕಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಮೈತ್ರಿ ವಿಚಾರ ಇಂದು ನಿರ್ಧಾರ: ಎಂಜಿಪಿ
ಗೋವಾದಲ್ಲಿ ಅತಂತ್ರ ಫಲಿತಾಂಶ ಪ್ರಕಟವಾಗಲಿದೆ ಎಂಬ ಸಮೀಕ್ಷೆಗಳ ಬೆನ್ನಲ್ಲಿಯೇ ಮಾತುಕತೆಗಳು ಬಿರುಸಾಗಿವೆ. ಮಹಾರಾಷ್ಟ್ರ ಗೋಮಂತಕ್ ಪಕ್ಷದ ಮುಖಂಡ ಸುಧಿನ್ ಧವಳೀಕರ್ ಮಾತನಾಡಿ, “ಕಾಂಗ್ರೆಸ್ ಮತ್ತು ಬಿಜೆಪಿ ಜತೆಗೆ ಸಂಪರ್ಕದಲ್ಲಿದ್ದೇನೆ. ಬೆಂಬಲ ನೀಡುವ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಕೋರಿಕೊಂಡಿದ್ದಾರೆ’ ಎಂದಿದ್ದಾರೆ. ಪ್ರಮೋದ್ ಸಾವಂತ್ ಬದಲಿಗೆ ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿಸಿದರೆ ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ
Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
MUST WATCH
ಹೊಸ ಸೇರ್ಪಡೆ
BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Punjalkatte: ಗುಂಡಿಗಳು ಸಾರ್ ಗುಂಡಿಗಳು
Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Ramayana: ಎರಡು ಭಾಗಗಳಾಗಿ ಬರಲಿದೆ ಬಿಗ್ ಬಜೆಟ್ ʼರಾಮಾಯಣʼ; ರಿಲೀಸ್ ಡೇಟ್ ಅನೌನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.