ಇಂಡೋ- ಉಕ್ರೇನ್ ದಂಪತಿಯ ಹೊಸ ಮನೆ ಕನಸು ಭಗ್ನ
Team Udayavani, Mar 10, 2022, 7:50 AM IST
ಕೂಡಿಟ್ಟ ಹಣದಿಂದ ಹೊಸದಾಗಿ ಪಡೆಯಲಾಗಿದ್ದ ಅಪಾರ್ಟ್ಮೆಂಟ್ ಮೇಲೆ ಬಾಂಬ್ ಬಂದು ಬಿದ್ದರೆ ಹೇಗಿರುತ್ತೆ? ಉಕ್ರೇನ್ನಲ್ಲಿರುವ ಇಂಡೋ-ಉಕ್ರೇನ್ ದಂಪತಿ ಮಯಾಂಕ್ ಛಾಬ್ರಾ ಹಾಗೂ ಟೆಟಿಯಾನಾ ರಿಖ್ಲಿಕ್ ರವರ ಪರಿಸ್ಥಿತಿಯೂ ಇದೇ ಆಗಿದೆ. ಟೆಟಿಯಾನಾ ಅವರಿಗೆ ಟಾನ್ಯಾ ಎಂಬ ಮತ್ತೂಂದು ಹೆಸರಿದೆ.
ಉಕ್ರೇನ್ನ ರಾಜಧಾನಿ ಕೀವ್ನಲ್ಲಿ ಹೊಸದಾಗಿ ನಿರ್ಮಾಣವಾಗಿದ್ದ ಏರ್ಪೋರ್ಟ್ ಟೌನ್ಶಿಪ್ನಲ್ಲಿನ ವಸತಿ ಸಮುತ್ಛಯದಲ್ಲಿ ಈ ದಂಪತಿ ಒಂದು ಫ್ಲಾಟ್ ಖರೀದಿಸಿದ್ದರು. ಅದೇ ಫ್ಲಾಟ್ ಮೇಲೆ ಶೆಲ್ ದಾಳಿಯಾಗಿ, ಅಲ್ಲಿನ ಕೆಲವು ಮನೆಗಳು ಭಾಗಶಃ ಹಾಳಾಗಿದವು. ಹಾಗೆ ಹಾಳಾಗಿದ್ದ ಮನೆಗಳಲ್ಲಿ ಮಯಾಂಕ್- ರಿಖ್ಲಿಕ್ ದಂಪತಿಯ ಮನೆಯೂ ಒಂದು.
ಟಾನ್ಯಾ ಅವರು, ಫೆಬ್ರವರಿ ಅಂತ್ಯದ ಹೊತ್ತಿಗೆ ಸಂಸಾರ ಸಮೇತ ಈ ಫ್ಲಾಟ್ಗೆ ಸ್ಥಳಾಂತರಗೊಳ್ಳಲು ಸಿದ್ಧರಿದ್ದರು. ಆದರೆ, ಅಷ್ಟರಲ್ಲಿ ಯುದ್ಧ ಆರಂಭವಾಯಿತು. ಫ್ಲಾಟ್ಗೆ ಹೋಗುವ ಬದಲು ಬಂಕರ್ಗಳಲ್ಲಿ ಆಶ್ರಯ ಪಡೆಯುವಂತಾಯಿತು ಈ ಕುಟುಂಬದ ಪರಿಸ್ಥಿತಿ. ಅಷ್ಟರಲ್ಲಿ ಅವರು ಕೊಂಡಿದ್ದ ಫ್ಲಾಟ್ ಮೇಲೆ ಬಾಂಬ್ ದಾಳಿಯೂ ಆಯಿತು. ಅಲ್ಲಿಗೆ, ಅವರ ಕನಸಿನ ಮನೆಯ ಕನಸು ಭಗ್ನಗೊಂಡಿತು.
ಅಷ್ಟೇ ಅಲ್ಲ, ಕುಟುಂಬ ಸಮೇತ ನಿರಾಶ್ರಿತರಾಗಿ ನೆರೆರಾಷ್ಟ್ರಗಳಿಗೆ ಹೊರಡುವ ಪ್ರಸಂಗ ಬಂದೊದಗಿದೆ. ನಾಲ್ಕು ದಿನಗಳ ಸತತವಾಗಿ ಕಾರು ಓಡಿಸುವ ಮೂಲಕ ನಾವು ಉಕ್ರೇನ್ನ ಪಶ್ಚಿಮ ಭಾಗದಲ್ಲಿರುವ ಚೋಪ್ ಎಂಬ ನಗರಕ್ಕೆ ಬಂದಿದ್ದೇವೆ. ಇಲ್ಲಿಂದ ನಾವು ಬುಕಾರೆಸ್ಟ್ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ಗೆ ಹೋಗಬೇಕು. ಅಲ್ಲಿಂದ ನಾವು ಭಾರತಕ್ಕೆ ವಿಮಾನದಲ್ಲಿ ಪ್ರಯಾಣಿಸಬೇಕಿದೆ ಎಂದು ದಂಪತಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.