ಕಾರ್ಕಳ ಉತ್ಸವಕ್ಕೆ ಇಂದು ಚಾಲನೆ, ಸಾಂಸ್ಕೃತಿಕ ಲೋಕ ಅನಾವರಣ

ನೂರು ವರ್ಷ ದಾಟಿದ ನೆನಪಿನ ನೆಲದಲ್ಲಿಂದು ಇತಿಹಾಸ ಸೃಷ್ಟಿ !

Team Udayavani, Mar 10, 2022, 12:20 PM IST

ಕಾರ್ಕಳ ಉತ್ಸವಕ್ಕೆ ಇಂದು ಚಾಲನೆ, ಸಾಂಸ್ಕೃತಿಕ ಲೋಕ ಅನಾವರಣ

ಕಾರ್ಕಳ : ಕಾರ್ಕಳ ತಾ|ಗೆ 105 ದಾಟಿದ ಹರೆಯ. 1916ರಲ್ಲಿ ಆಂಗ್ಲರ ಕಾಲದಲ್ಲಿ ನಿರ್ಮಾಣವಾದ ಸ್ವರ್ಣ ಕಾರ್ಕಳದ ನೆಲ ಸುವರ್ಣಾಕ್ಷರಗಳಲ್ಲಿ ಬರೆದಿಡು ವಂತಹ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ.

ಶಿಲ್ಪಕಲೆ, ಸಂಸ್ಕೃತಿ, ಪ್ರವಾಸೋದ್ಯಮ ಕ್ಷೇತ್ರಗಳ ತವರು ನೆಲದಲ್ಲಿ ಭಾಷೆ, ಕಲೆ, ಸಂಸ್ಕೃತಿಗಳ ಕಲರವದ ಕಾರ್ಕಳ ಉತ್ಸವ ಮಾ.10ರಂದು ಚಾಲನೆಗೊಂಡು 10 ದಿನಗಳ ಕಾಲ ನಡೆಯಲಿದೆ.

ತಾ| ಘೋಷಣೆಯಾಗಿ ಪ್ರಸಕ್ತ ವರ್ಷಕ್ಕೆ 106 ವರ್ಷಗಳಾಗಿವೆ. ಸುವರ್ಣ ವರ್ಷವಾಗಿ ಈ ಹಿಂದೆಯೇ ಆಚರಿಸಲ್ಪಡಬೇಕಾಗಿತ್ತು. ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಶಾಸಕ ಸುನಿಲ್‌ಕುಮಾರ್‌ ಅವರು ತಾ| ಅನ್ನು ಸ್ವರ್ಣ ಕಾರ್ಕಳ, ಸ್ವತ್ಛ ಕಾರ್ಕಳ ಎಂದು ಘೋಷಿಸಿ, ಸ್ವರ್ಣ ಕಾರ್ಕಳದ ಬಗ್ಗೆ ದೊಡ್ಡ ಕನಸು ಕಂಡಿದ್ದರು. ಸಾಕಾರಕ್ಕಾಗಿ ಹಲವು ದೂರದೃಷ್ಟಿಯ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಲ್ಲದೆ ಘೋಷಣೆಯನ್ನು ಮಾಡಿದ್ದರು.

19ನೇ ಶತಮಾನದ ಆದಿ ಭಾಗದಲ್ಲಿ ಆಂಗ್ಲರ ಆಡಳಿತಕ್ಕೆ ತಾ| ಸೇರಿತ್ತು. ಆಡಳಿತ ಕಾರಣಗಳಿಗಾಗಿ ತಾ| ರಚನೆ ಮತ್ತು ವಿಭಜನೆಗೊಂಡಿತ್ತು. ಕಾರ್ಕಳ ಉಪ್ಪಿನಂಗಡಿಗೆ ಸೇರಿಕೊಂಡಿತ್ತು. 1910ರಲ್ಲಿ ಮೂಡುಬಿದಿರೆಗೆ ಸೇರಿತು. 1912ರಲ್ಲಿ ಕಾರ್ಕಳ ಸ್ವತಂತ್ರ ತಾ| ಕೇಂದ್ರವಾಯಿತು. 105 ಗ್ರಾಮಗಳು ಕಾರ್ಕಳ ವ್ಯಾಪ್ತಿಗೆ ಸೇರಿದ್ದವು. ಅನಂತರದಲ್ಲಿ ಒಂದಷ್ಟು ಗ್ರಾಮ, ಹೋಬಳಿಗಳು ಅದಲು ಬದಲಾದವು. 2017ರಲ್ಲಿ ಹೆಬ್ರಿ ತಾಲೂಕು ರಚನೆಗೊಂಡಿತು.

ಕಾರ್ಕಳ ತಾ| ಆಗಿ 105 ವರ್ಷ ದಾಟಿದ ನೆನಪು ಜನರ ಮನದಲ್ಲಿ ಶಾಶ್ವತ ನೆಲೆಯೂರುವಂತೆ ಮಾಡುವುದು, ಇಲ್ಲಿನ ಸಮಗ್ರ ಸಾಂಸ್ಕೃತಿಕ ಪರಂಪರೆಯನ್ನು ನಾಡಿನ ಉದ್ದಗಲಕ್ಕೂ ಪಸರಿಸುವುದು, ನಾಡಿನ ಕಲೆಗಳನ್ನು ಇಲ್ಲಿನ ಜನರಿಗೆ ಪರಿಚಯಿಸುವುದು, ವೈರಸ್‌ನಿಂದ ನೊಂದ ಜೀವಗಳಿಗೆ ಜೀವನೋತ್ಸಾಹ ತುಂಬು ವುದು, ಆರ್ಥಿಕ ಪುನಃಶ್ಚೇತನಕ್ಕೂ ದಾರಿ ಮಾಡಿಕೊಡುವುದು ಎಲ್ಲವನ್ನು ಕಾರ್ಕಳ ಉತ್ಸವ-2022 ಬೊಗಸೆಯಲ್ಲಿರಿಸಿ ನಡೆಸಲಾಗುತ್ತಿದೆ.

ಇದನ್ನೂ ಓದಿ : ಹಲಗೆ ಅಳವಡಿಕೆ ವಿಳಂಬ : ಚೇರ್ಕಾಡಿ, ಬೆಳ್ಳಂಪಳ್ಳಿ ಪರಿಸರದಲ್ಲಿ ನೀರಿನ ಕೊರತೆ

ಎಲ್ಲ ಮರೆತು ಒಂದಾದರು…
ತಾ| ಜನ ಸಮುದಾಯ ಎಲ್ಲವನ್ನು ಮರೆತು ಉತ್ಸವದಲ್ಲಿ ಒಂದುಗೂಡಿದ್ದಾರೆ. ರಾಜಕೀಯ ಎಲ್ಲೆ ಮೀರಿ ಉತ್ಸವ ಯಶಸ್ವಿಗೆ ಎಲ್ಲರೂ ಜೈ ಜೋಡಿಸಿದ್ದಾರೆ. 6 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವೀರಪ್ಪ ಮೊಲಿ ಅವರು ಉತ್ಸವಕ್ಕೆ ಶುಭಕೋರಿ ಈಗಾಗಲೇ ಸಂದೇಶ ಕಳುಹಿಸಿದ್ದಾರೆ. ಉತ್ಸವದಲ್ಲಿ ಭಾಗವಹಿಸುವ ಬಗ್ಗೆಯೂ ಹೇಳಿದ್ದಾರೆ. ಶಾಸಕ ದಿ| ಗೋಪಾಲ ಭಂಡಾರಿ ಅವರ ಹೆಸರನ್ನು ವೇದಿಕೆಗೆ ನಾಮಕ ಮಾಡಲಾಗಿದೆ. ತಾಲೂಕಿನ ಮಹಾತ್ಮರನ್ನು ನೆನಪಿಸುವ ಕಾರ್ಯ ಹಲವು ರೂಪದಲ್ಲಿ ನಡೆದಿದೆ. ಮಸೀದಿ, ಮಂದಿರಗಳು ಅಲಂಕೃತಗೊಂಡಿವೆ.
ಕಾರ್ಕಳ ಉತ್ಸವವು ಗಾಂಧಿ ಮೈದಾನದಲ್ಲಿ ಮಾ.10ರಂದು ಸಂಜೆ 5ಕ್ಕೆ ಉದ್ಘಾಟನೆಗೊಂಡು ಉತ್ಸವಕ್ಕೆ ಚಾಲನೆ ಸಿಗಲಿದೆ. ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಯಕ್ಷರಂಗಾಯಣ ಕೇಂದ್ರದಿಂದ ದೂತವಾಕ್ಯ ನಾಟಕ ಪ್ರದರ್ಶನ, ದೃಶ್ಯಕಲಾ ಕಾರ್ಯಕ್ರಮಗಳು ನಡೆಯಲಿವೆ. ಮುಂದಿನ 10 ದಿನಗಳ ಕಾಲವೂ ನಿರಂತರ ಸಾಂಸ್ಕೃತಿಕ ವೈವಿಧ್ಯಗಳು ಗಾಂಧಿ ಮೈದಾನ, ಸ್ವರಾಜ್‌ ಮೈದಾನಗಳಲ್ಲಿ ನಡೆಯಲಿದೆ. ಮಾ.18ಕ್ಕೆ ಉತ್ಸವ ಮೆರವಣಿಗೆ ನಡೆಯಲಿದೆ.

ತಾ.ಪಂ. ಸಭಾಭವನದಲ್ಲಿ ಸಚಿವ ವಿ. ಸುನಿಲ್‌ ಕುಮಾರ್‌ ಉಪಸ್ಥಿತಿಯಲ್ಲಿ ತಾಲೂಕಿನ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರ ಸಭೆ ನಡೆಯಿತು. ಸಚಿವರು ಕಾರ್ಕಳ ಉತ್ಸವ ಮೆರವಣಿಗೆ ಕುರಿತು ಮಾರ್ಗದರ್ಶನ ನೀಡಿದರು. ಮೂಡುಬಿದಿದ್ರೆ ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಅಧ್ಯಕ್ಷ ಮೋಹನ್‌ ಆಳ್ವ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಈ ಸಭೆಯಲ್ಲಿ ತಹಶೀಲ್ದಾರ್‌ ಪ್ರದೀಪ ಕುಡೇìಕರ್‌, ಇ.ಒ. ಗುರುದತ್‌ ಎಂ.ಎನ್‌., ಬಿ.ಇ.ಒ. ವೆಂಕಟೇಶ್‌, ಪದವಿ ಮತ್ತು ಪದವಿ ಪೂರ್ವ ಕಾಲೇಜಿನ 25 ಪ್ರಾಂಶುಪಾಲರು ಉಪಸ್ಥಿತರಿದ್ದರು.

ಸಚಿವರ ಮ್ಯಾರಥಾನ್‌ ಸಭೆ
ಉತ್ಸವಕ್ಕೆ ಕ್ಷಣಗಣನೆ ಇರುವಾಗಲೇ ಕಳೆದೆರಡು ದಿನ ಗಳಿಂದ ಸಚಿವರು ವಿವಿಧ ಸಮಿತಿಗಳ ಜತೆ ನಿರಂತರ ಸಭೆ ನಡೆಸುತ್ತಿದ್ದಾರೆ. ಮಾ.9ರಂದು ಬೆಳಗ್ಗೆ ಯುವಕರ ಜತೆ, ಹೆಬ್ರಿ ಸ್ವತ್ಛತೆ ಕಾರ್ಯಕ್ರಮ, ತಾ.ಪಂ. ಸಭಾಂಗಣದಲ್ಲಿ ಪ್ರಾಂಶುಪಾಲರ ಜತೆ, ಶ್ರೀ ಕ್ಷೇ.ಧ. ಯೋಜನೆಯ ಪ್ರಮುಖರ ಜತೆ, ಕಾರ್ಕಳ ಉತ್ಸವ ಮೆರವಣಿಗೆ ಸಮಿತಿ ಜತೆ ಪೂರ್ವಭಾವಿ ಸಭೆ ನಡೆಸಿದರು. ಸಂಜೆ ಗಾಂಧಿ ಮೈದಾನದಲ್ಲಿ ಕಾರ್ಕಳ ಉತ್ಸವದ ಎಲ್ಲ ಸಮಿತಿ, ಪ್ರಬಂಧಕರ ಜತೆ ಸಭೆ ನಡೆಸಿದರು. ಕಳೆದೊಂದು ವಾರದಲ್ಲಿ ಹಗಲು ರಾತ್ರಿ ಸಚಿವರು 60ಕ್ಕೂ ಅಧಿಕ ಸಭೆ ಉತ್ಸವಕ್ಕೆ ಸಂಬಂಧಿಸಿಯೇ ನಡೆಸಿದ್ದಾರೆ.

ಯಕ್ಷರಂಗಾಯಣಕ್ಕೆ ಇಂದು ಭೂಮಿ ಪೂಜೆ
ಬೆಳಗ್ಗೆ 8ಕ್ಕೆ ಕೋಟಿ ಚೆನ್ನಯ ಥೀಂ ಪಾರ್ಕ್‌ ಬಳಿ ನಿರ್ಮಾಣವಾಗುವ ರಂಗಭೂಮಿಕೆಗೆ ಪ್ರೋತ್ಸಾಹ ನೀಡುವ ಯಕ್ಷರಂಗಾಯಣ ಕಲಾ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 10 ಕೋ.ರೂ. ವೆಚ್ಚದಲ್ಲಿ ರಂಗಾಯಣ ಕೇಂದ್ರ ಸುಸಜ್ಜಿತವಾಗಿ ನಿರ್ಮಾಣವಾಗುತ್ತಿದೆ.

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.