ಬಹುರೂಪಿ ರಂಗೋತ್ಸವಕ್ಕೆ ಗರಿಗೆದರಿದ ಸಿದ್ಧತೆ
Team Udayavani, Mar 10, 2022, 1:03 PM IST
ಮೈಸೂರು: ನಗರದ ರಂಗಾಯಣದ ಆವರಣದಲ್ಲಿ ಮಾ.11 ರಿಂದ 20 ರವರೆಗೆ ನಡೆಯುವ “ಬಹುರೂಪಿರಾಷ್ಟ್ರೀಯ ರಂಗೋತ್ಸವ’ಕ್ಕೆ ಸಮರೋಪಾದಿಯಲ್ಲಿ ಸಿದ್ಧತೆ ನಡೆದಿದೆ.
ಒಂದು ವಾರ ರಂಗಾಸಕ್ತರಿಗೆ ರಂಗ ಪ್ರಯೋಗಗಳುಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಣಬಡಿಸಲು ರಂಗಾಯಣದ ಆವರಣ ಮದುವಣಗಿತ್ತಿಯಂತೆಸಿಂಗಾರಗೊಳ್ಳುತ್ತಿದೆ. ವೇದಿಕೆಗಳ ವಿನ್ಯಾಸ, ಆವರಣ ಸ್ವಚ್ಛತಾ ಕಾರ್ಯ, ನಾಟಕಗಳ ತಾಲೀಮು, ಮಳಿಗೆಗಳ ನಿರ್ಮಾಣ, ಶಿಲ್ಪಗಳ ಕೆತ್ತನೆ…ಹೀಗೆ ಸಕಲ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿವೆ.
ಈ ಬಾರಿ ತಾಯಿ ಆಶಯದೊಂದಿಗೆ ಬಹುರೂಪಿರಂಗೋತ್ಸವವನ್ನು ರೂಪಿಸಲಾಗಿದ್ದು, “ತಾಯಿ’ಪರಿಕಲ್ಪನೆ ಅಡಿಯಲ್ಲಿ ನಾಟಕಗಳು, ಜಾನಪದ ನೃತ್ಯ,ಸಂಗೀತ, ಭಿತ್ತಿಚಿತ್ರ ಪ್ರದರ್ಶನ, ಸಿನಿಮಾ ಸೇರಿದಂತೆರಂಗೋತ್ಸವವನ್ನು ಸಿದ್ಧಗೊಳಿಸಲಾಗಿದೆ.
ಬಹುರೂಪಿ ಕುರಿತು ರಂಗ ವಿನ್ಯಾಸಕ ದ್ವಾರಕನಾಥ್ ನೇತೃತ್ವದಲ್ಲಿ ಹತ್ತಾರು ಕಲಾವಿದರು ಬಿಡಿಸುತ್ತಿರುವ ಪೋಸ್ಟರ್‌ಗಳನ್ನು, ಭಿತ್ತಿಚಿತ್ರಗಳನ್ನು ರಂಗಾಯಣದ ಅಂಗಳದಲ್ಲಿ ಹಾಕಲಾಗಿದೆ. ಕರಕುಶಲ, ಆಹಾರ, ತಿನಿಸು, ಪುಸ್ತಕ ಪ್ರದರ್ಶನದ ಮಾರಾಟ ಮಳಿಗೆಗಳನ್ನು ಸಿದ್ಧ ಪಡಿಸಲಾಗುತ್ತಿದೆ. ರಂಗಾಯಣ ಅಂಗಳದತುಂಬ “ರಂಗ ಸಂಭ್ರಮ’ ಮನೆ ಮಾಡಿದೆ. ವಿಶೇಷವಾಗಿ 18 ಅಡಿ ಎತ್ತರದ ತಾಯಿ ಮತ್ತುಮಗುವಿನ ಮಾದರಿಯನ್ನು ರವಿರಾಜ್ ಮತ್ತುವಿನಯ್ ಸಿದ್ಧ ಪಡಿಸುತ್ತಿದ್ದು, ಅದನ್ನು ರಂಗಾಯಣದ್ವಾರದಲ್ಲಿ ಅಳವಡಿಸಲಾಗುತ್ತದೆ. ಈ ಬಾರಿ ವಿಶೇಷರೀತಿ ತಾಯಿ ಪರಿಕಲ್ಪನೆಯಲ್ಲಿಯೇ ಬಹುರೂಪಿನ್ನುಉದ್ಘಾಟಿಸುವ ಸಂಬಂಧ ಗಣೇಶ್ ಮತ್ತು ನವೀನ್ ಆಫ್ರಿಕ ಟ್ರೀ ಮಾದರಿಯನ್ನು ನಿರ್ಮಿಸುತ್ತಿದ್ದಾರೆ.
80 ಮಳಿಗೆಗಳಿಗೆ ಸಿದ್ಧತೆ: ಕರಕುಶಲ, ಆಹಾರ, ತಿನಿಸು, ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕಾಗಿ ರಂಗಾಯಣದ ಅಂಗಳದಲ್ಲಿ ವ್ಯವಸ್ಥಿತ 80 ಮಳಿಗೆಗಳು ತಲೆ ಎತ್ತುತ್ತಿವೆ. 64 ಮಳಿಗೆಗಳನ್ನು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಪುಸ್ತಕ ಮಾರಾಟಕ್ಕೆ ಸಿದ್ಧವಾಗುತ್ತಿವೆ. ದೇಶದ ನಾನಾ ಭಾಗಗಳಿಂದ ಕುಶಲಕರ್ಮಿಗಳು ಭಾಗವಹಿಸಲಿದ್ದಾರೆ.ಇನ್ನು ದೇಸಿ ಆಹಾರ ಪದ್ಧತಿಗೋಸ್ಕರ 16ಕ್ಕೂ ಹೆಚ್ಚಿನ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ.
ಈ ಬಾರಿ ವಿಶೇಷವಾಗಿ ಕಲಾವಿದರೇ ರಚಿಸಿರುವ ಅನೇಕ ಚಿತ್ರಗಳನ್ನು ರಂಗಾಯಣದ ಆವರಣದಲ್ಲಿಪ್ರದರ್ಶನ ಮಾಡಲಾಗುತ್ತಿದೆ. ಪ್ರತಿದಿನ ಉತ್ಸವಕ್ಕೆಆಗಮಿಸುವ 200ರಿಂದ 250 ಕಲಾವಿದರು, ಗಣ್ಯರಿಗಾಗಿ ನಗರದ ಖಾಸಗಿ ಹೋಟೆಲ್‌ಗಳು ಹಾಗೂಸರ್ಕಾರಿ ಗೆಸ್ಟ್‌ಹೌಸ್‌ಗಳನ್ನು ಕಾಯ್ದಿರಿಸಲಾಗಿದೆ. ಗೆಸ್ಟ್‌ಹೌಸ್‌ಗಳಿಂದ ರಂಗಾಯಣಕ್ಕೆ ಕರೆತರಲು ಬಸ್‌ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ತಿಳಿಸಿದ್ದಾರೆ.
ವರ್ಣಚಿತ್ರ ಕಾರ್ಯಾಗಾರ: ಬಹುರೂಪಿ ಅಂಗವಾಗಿರಂಗಾಯಣದ ಅಂಗಳದಲ್ಲಿ “ಭಾವಗಳ ಬಣ್ಣದ ಬಹುರೂಪಿ ತಾಯಿ’ ಎಂಬ ಹೆಸರಿನಲ್ಲಿ ವರ್ಣಚಿತ್ರ ಕಾರ್ಯಾಗಾರ ನಡೆಯುತ್ತಿದೆ. ಕಾರ್ಯಾಗಾರದಲ್ಲಿ ಕಾವಾ ಕಾಲೇಜಿನ 5 ಮಹಿಳಾ ವಿದ್ಯಾರ್ಥಿಗಳ ಭಾಗ ವಹಿಸಿದ್ದು, ತಾಯಿಸಂಬಂಧಿಸಿದಂತೆ 5 ವಿಭಿನ್ನ ಚಿತ್ರ ಗಳನ್ನು ಬಿಡಿಸುತ್ತಿದ್ದಾರೆ.ಆ ಚಿತ್ರಗಳನ್ನು ಬಹುರೂಪಿ ಯಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಈ ಬಾರಿ ವನರಂಗ ರಂಗವೇದಿಕೆಯನ್ನು ತನ್ನ ಹೆಸರಿನಂತೆಯೇ ರೂಪಿಸಲಾಗಿದೆ. ರಂಗವೇದಿಕೆಯಲ್ಲಿಗಿಡ, ಮರಗಳನ್ನು ಬೆಳೆಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ಕಾರಂತ ಶಿಲ್ಪರಂಗವನ ಲೋಕಾರ್ಪಣೆ :
ಬಹುರೂಪಿ ಅಂಗವಾಗಿ ರಂಗಾಯಣದ ಅಂಗಳದಲ್ಲಿ ಕಳೆದ 8 ದಿನಗಳಿಂದ ಶಿಲ್ಪಕಲಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಿರುವ ಕಲಾವಿದರಾದ ಸುಭಾಷ್,ನವೀನ್, ಕೆ.ಕುಮಾರ್, ಯಶವಂತ, ಪುನೀತ್,ಸುಮನ್, ಆನಂದ, ಭವಾನಿ ಶಂಕರ್, ಲೀಲಾವತಿ ಹಾಗೂ ಜ್ಯೋತಿ ಭಾರತಿ ತಲಾ ಒಂದೊಂದುಕಲ್ಲಿನ ಶಿಲ್ಪಗಳನ್ನು ಕೆತ್ತನೆ ಮಾಡುತ್ತಿದ್ದು, ಇನ್ನುಎರಡು ದಿನಗಳಲ್ಲಿ ಪೂರ್ಣಗೊಳ್ಳಿದೆ. ಸದರಿಕಲಾಕೃತಿಗಳನ್ನು ಬಿ.ವಿ.ಕಾರಂತ ರಂಗಚಾವಡಿಮುಂಭಾಗದ ಜಾಗದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಜತೆಗೆ ಆ ಸ್ಥಳಕ್ಕೆ ಕಾರಂತ ಶಿಲ್ಪರಂಗವನ ಎಂದುಹೆಸರು ನಾಮಕರಣ ಮಾಡಲಾಗುತ್ತದೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
ಮಾ.11 ರಿಂದ 20 ರವರೆಗೆ ನಡೆಯುವ “ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ಕ್ಕೆರಂಗಾಯಣದ ಅಂಗಳದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಕರಕುಶಲ, ಆಹಾರ, ತಿನಿಸು,ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕಾಗಿ ರಂಗಾಯಣದ ಅಂಗಳದಲ್ಲಿ ವ್ಯವಸ್ಥಿತ 80ಮಳಿಗೆಗಳು ತಲೆ ಎತ್ತುತ್ತಿವೆ. “ತಾಯಿ’ ಪರಿಕಲ್ಪನೆ ಅಡಿಯಲ್ಲಿ ನಾಟಕಗಳು, ಜಾನಪದ ನೃತ್ಯ, ಸಂಗೀತ, ಭಿತ್ತಿಚಿತ್ರ ಪ್ರದರ್ಶನ, ಸಿನಿಮಾ ಸೇರಿದಂತೆ ರಂಗೋತ್ಸವವನ್ನು ಸಿದ್ಧಗೊಳಿಸಲಾಗಿದೆ. – ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣ ನಿರ್ದೇಶಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.