ನಾಗಮಂಗಲ: ಗ್ರಾಮದೇವತೆ ಹಬ್ಬದಲ್ಲಿ ನಂಗಾನಾಚ್; ಅಪ್ರಾಪ್ತನಿಗೆ ಚುಂಬಿಸಿ ಅಶ್ಲೀಲವಾಗಿ ನೃತ್ಯ
ಮರು ಕಳುಹಿಸಿದ 20 ವರ್ಷಗಳ ಹಿಂದಿನ ಘಟನೆ
Team Udayavani, Mar 10, 2022, 1:15 PM IST
ಮಂಡ್ಯ/ನಾಗಮಂಗಲ: ಮಂಡ್ಯ ಜಿಲ್ಲೆಯ ರಾಜಕಾರಣ ಒಂದೆಡೆಯಾದರೆ ನಾಗಮಂಗಲದ ರಾಜಕಾರಣವೇ ವಿಭಿನ್ನ. ಜಿದ್ದಾಜಿದ್ದಿ ನಿಂದ ನಡೆಯುವ ಚುನಾವಣೆಯಲ್ಲಿ ಪ್ರತಿ ಗ್ರಾಮದಲ್ಲೂ ರಾಜಕೀಯ ಹಾಸು ಹೊಕ್ಕಾಗಿದೆ. ಇಡೀ ಜಿಲ್ಲೆಯಲ್ಲಿ ನಾಗಮಂಗಲ ರಾಜಕಾರಣ ಸದಾ ಸುದ್ದಿಯಲ್ಲಿರುತ್ತದೆ. ಅದರಂತೆ ಕಳೆದ 20 ವರ್ಷಗಳ ಹಿಂದೆ ನಂಗಾನಾಚ್‌ನಿಂದ ಸುದ್ದಿಯಾಗಿದ್ದ ನಾಗಮಂಗಲದಲ್ಲಿ ಮತ್ತೆ ನಂಗಾನಾಚ್ ಸದ್ದು ಮಾಡುತ್ತಿದೆ.
ಕಳೆದ ರಾತ್ರಿ ತಾಲೂಕಿನ ತೊಳಚಿಕೊಂಬರಿ ಗ್ರಾಮದಲ್ಲಿ ಗ್ರಾಮ ದೇವತೆ ಹಬ್ಬದ ಹೆಸರಿನಲ್ಲಿ ಹಾಲಿ-ಮಾಜಿ ಶಾಸಕರ ಬೆಂಬಲಿಗರು ಪ್ರತ್ಯೇಕವಾಗಿ ರಸಸಂಜೆ ಕಾರ್ಯಕ್ರಮ ಏರ್ಪಡಿಸಿ, ಯುವತಿಯರಿಂದ ಅಶ್ಲೀಲವಾಗಿ ನೃತ್ಯ ಪ್ರದರ್ಶನ ಮಾಡಿಸಿದ್ದರಿಂದ ನಂಗಾನಾಚ್ ಸುದ್ದಿಯಾಗಿದೆ.
ಗ್ರಾಮದಲ್ಲಿ ಪ್ರತ್ಯೇಕ ವೇದಿಕೆ: ತೊಳಚಿಕೊಂಬರಿ ಗ್ರಾಮದಲ್ಲಿ ಗ್ರಾಮ ದೇವತೆ ಮಾರಮ್ಮ ಹಬ್ಬ ನಡೆದಿದ್ದು, ಕೇವಲ 23 ಕುಟುಂಬಗಳಿರುವ ಗ್ರಾಮದಲ್ಲಿ ಪ್ರತ್ಯೇಕವಾಗಿ ರಸಸಂಜೆ ನೃತ್ಯ ಪ್ರದರ್ಶನ ನಡೆದಿದೆ. ಗ್ರಾಮದ ಗೇಟ್‌ನಲ್ಲಿ ನಡೆದ ಮಾಜಿ ಸಚಿವ ಎನ್.ಚಲುವ ರಾಯಸ್ವಾಮಿ ಬೆಂಬಲಿಗರ ಕಾರ್ಯಕ್ರಮದಲ್ಲಿ ಯುವತಿಯರಿಂದ ಅಶ್ಲೀಲವಾಗಿ ನೃತ್ಯ ಮಾಡಿದ್ದಾರೆ.
ಜತೆಗೆ ಗ್ರಾಮದ ಒಬ್ಬ ಹುಡುಗನನ್ನು ವೇದಿಕೆ ಮೇಲೆ ಎಳೆತಂದ ಅರೆಬರೆ ಬಟ್ಟೆತೊಟ್ಟ ಯುವತಿಯರು ಅಪ್ರಾಪ್ತ ಯುವಕನಿಗೆ ಚುಂಬಿಸುವ ಮೂಲಕ ಅಶ್ಲೀಲತೆ ಮೆರೆದಿದ್ದಾರೆ. ಅಲ್ಲದೆ, ಮತ್ತೂಬ್ಬ ಯುವಕ ಕಾಂಗ್ರೆಸ್ ಪಕ್ಷದ ಶಾಲು ಕಟ್ಟಿಕೊಂಡು ಮದ್ಯಪಾನ ಮಾಡಿ ನೃತ್ಯ ಮಾಡಿದ್ದಾನೆ.
ಇತ್ತ ನಾವೇನು ಕಮ್ಮಿ ಇಲ್ಲ ಎಂಬಂತೆ ಗ್ರಾಮದಲ್ಲಿ ಹಾಲಿ ಶಾಸಕ ಕೆ.ಸುರೇಶ್‌ಗೌಡ ಬೆಂಬಲಿಗರ ರಸಸಂಜೆ ಕಾರ್ಯಕ್ರಮದಲ್ಲಿ ಯುವತಿಯರು ಅಶ್ಲೀಲವಾಗಿ ನೃತ್ಯ ಮಾಡಿದ್ದಾರೆ. ಯುವತಿಯರೊಂದಿಗೆ ವೃದ್ಧ ಸೇರಿದಂತೆ ಯುವಕರು ನೃತ್ಯ ಮಾಡಿದ್ದಾರೆ. ಅಲ್ಲದೆ, ವೇದಿಕೆ ಮುಂಭಾಗದಲ್ಲಿಯೇ ಮದ್ಯದ ಬಾಟಲ್ ಹಿಡಿದುಕುಡಿಯುತ್ತಾ ಗ್ರಾಮದ ವ್ಯಕ್ತಿ ನೃತ್ಯ ಮಾಡಿದ್ದಾನೆ. ಆದರೆ, ಎರಡುಪ್ರತ್ಯೇಕ ವೇದಿಕೆಗಳಲ್ಲಿ ನೃತ್ಯಕ್ಕೂ ಮುಂಚೆ ಹಾಲಿ-ಮಾಜಿ ಶಾಸಕರು ಕಾಣಿಸಿಕೊಂಡು ಭಾಷಣ ಮಾಡಿ ಹೊರಟು ಹೋಗಿದ್ದಾರೆ. ಆದರೆ, ನಂಗಾನಾಚ್‌ನಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ಕ್ಷೇತ್ರದಲ್ಲಿ ವಿರೋಧಕ್ಕೆ ಕಾರಣವಾಗಿದೆ.
23 ಕುಟುಂಬಗಳ ಗ್ರಾಮ: ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಯ ತೊಳಚಿಕೊಂಬರಿ ಗ್ರಾಮದಲ್ಲಿ ಕೇವಲ 23 ಕುಟುಂಬಗಳಿವೆ. ಆದರೆ, ಹಾಲಿ-ಮಾಜಿ ಶಾಸಕರ ಬೆಂಬಲಿಗರುರಾಜಕೀಯ ಪೈಪೋಟಿ ನಡೆಸುತ್ತಿದ್ದಾರೆ. ಅಲ್ಲದೆ, ಗ್ರಾಮದಲ್ಲಿ ರಾಜಕೀಯ ಹಾಸು ಹೊದ್ದು ಮಲಗಿದೆ.
20 ವರ್ಷಗಳ ಹಿಂದೆ ನಡೆದಿದ್ದ ನಂಗಾನಾಚ್: ಕಳೆದ 20 ವರ್ಷ
ಗಳ ಹಿಂದೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ನಾಗಮಂಗಲದಲ್ಲಿ ಯುವತಿಯರಿಂದ ಅಶ್ಲೀಲವಾಗಿ ನಂಗಾನಾಚ್ ನೃತ್ಯ ಮಾಡಿಸುವ ಮೂಲಕ ಸುದ್ದಿಯಾಗಿದ್ದರು. ಇದರಿಂದ ಶಿವರಾಮೇಗೌಡ ವರ್ಚಸ್ಸಿಗೆ ಧಕ್ಕೆ ತಂದಿತ್ತು. ನಂಗಾನಾಚ್ ವಿರುದ್ಧ ಕ್ಷೇತ್ರಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು. ಅದು ಮತ್ತೆ ಮರು ಕಳುಹಿಸಿದೆ. ಈ ಬಾರಿ ಹಾಲಿ-ಮಾಜಿ ಶಾಸಕರ ಬೆಂಬಲಿಗರ ಪೈಪೋಟಿ ಯಿಂದ ನಂಗಾನಾಚ್ ಸದ್ದು ಮಾಡುತ್ತಿದೆ.
ಗರಿಗೆದರಿದ ರಾಜಕೀಯ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಡೀ ಜಿಲ್ಲೆಯಲ್ಲಿಯೇ ನಾಗಮಂಗಲ ವಿಧಾನಸಭಾ ಕ್ಷೇತ್ರ
ದಲ್ಲಿ ರಾಜಕೀಯ ಗರಿಗೆದರಿದೆ. ಮಾಜಿ ಸಚಿವ ಎನ್.ಚಲು ವರಾಯಸ್ವಾಮಿ ಕ್ಷೇತ್ರದಲ್ಲಿ ಸಂಪೂರ್ಣ ಕ್ರಿಯಾಶೀಲವಾಗಿದ್ದು, ಊರೂರುಸುತ್ತುತ್ತಿದ್ದಾರೆ. ಅದರಂತೆ ಹಾಲಿ ಶಾಸಕ ಕೆ.ಸುರೇಶ್‌ಗೌಡ ಕೂಡ ಈಗಾಗಲೇ ಜೆಡಿಎಸ್ ಅಭ್ಯರ್ಥಿ ಎಂದು ಮಾಜಿ ಪ್ರಧಾನಿ ಘೋಷಣೆಮಾಡಿದ್ದಾರೆ. ಅದರಂತೆ ಸುರೇಶ್‌ಗೌಡ ಕೂಡ ಮೂರನೇ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಲು ಸಜಾjಗಿದ್ದಾರೆ. ಅದಕ್ಕಾಗಿ ಕ್ಷೇತ್ರ ಪ್ರದಕ್ಷಿಣೆ ಹಾಕುತ್ತಿದ್ದಾರೆ.
ತ್ರಿಕೋನ ಸ್ಪರ್ಧೆ?: ಕಾಂಗ್ರೆಸ್‌ನಿಂದ ಎನ್.ಚಲುವರಾಯಸ್ವಾಮಿ, ಜೆಡಿಎಸ್‌ನಿಂದ ಕೆ.ಸುರೇಶ್‌ಗೌಡ ಕಣಕ್ಕಿಳಿಯಲು ಸಜ್ಜಾಗಿದ್ದರೆ, ಇತ್ತಜೆಡಿಎಸ್‌ನಿಂದ ಉಚ್ಛಾಟನೆಗೊಂಡಿರುವ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಸದ್ದಿಲ್ಲದೆ, ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಜೆಡಿಎಸ್‌ನಲ್ಲಿದ್ದಾಗಲೇ ಮುಂದಿನ ಅಭ್ಯರ್ಥಿ ನಾನೇಎಂದು ಬಿಂಬಿಸಿಕೊಂಡಿದ್ದ ಅವರು, ಪಕ್ಷದಿಂದ ಹೊರ ಬಂದ ಮೇಲೆಮತದಾರರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಚುನಾವಣೆಯಲ್ಲಿಕೆಲಸ ಮಾಡಲು ಬೆಂಬಲಿಗರ ಪಡೆಗೆ ಸಿದ್ಧರಾಗುವಂತೆ ಸೂಚಿಸುತ್ತಿದ್ದಾರೆ. ಆದರೆ, ಯಾವ ಪಕ್ಷದಿಂದ ಎಂದು ಇನ್ನೂ ಅಂತಿಮವಾಗಿಲ್ಲ. ಆದರೆ, ಚುನಾವಣೆ ಸಿದ್ಧತೆ ಮಾತ್ರ ಜೋರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.