ಪಂಚರಾಜ್ಯ ಫಲಿತಾಂಶದಿಂದ ರಂಗೇರಿದ್ದ ಭಾರತ : ಗೆದ್ದವರ ನರ್ತನ, ಸೋತವರ ಮೌನ
Team Udayavani, Mar 11, 2022, 6:50 AM IST
ಗುರುವಾರದ ಬಿರುಬಿಸಿಲಿನ ಮಧ್ಯಾಹ್ನ. ದೇಶದುದ್ದಗಲ ಪ್ರಮುಖ ನಗರಗಳ ಬೀದಿಗಳಲ್ಲಿ ರಾಜಕೀಯದ ದಿಬ್ಬಣದ್ದೇ ಹಿಮ್ಮೇಳ. ಅಲ್ಲಲ್ಲಿ ಪಟಾಕಿಗಳ ಸದ್ದು. ಮೋದಿ- ಯೋಗಿ ಅವರ ಚಿತ್ರಗಳನ್ನು ಹಿಡಿದ ಗುಂಪುಗಳು, ಕಮಲಧ್ವಜವನ್ನು ಅತ್ತಿಂದಿತ್ತ ಪಟಪಟಿಸುತ್ತಾ “ಭಾರತ್ ಮಾತಾ ಕೀ ಜೈ’ ಕೂಗುಗಳನ್ನು ಮೊಳಗಿಸುತ್ತಿದ್ದವು. ಇನ್ನೊಂದೆಡೆ ಪೊರಕೆ ಚಿತ್ರ ಹೊತ್ತ ಆಪ್‌ನ ಬಾವುಟಗಳನ್ನು ಹಿಡಿದ ಕಾರ್ಯಕರ್ತರು ಅರವಿಂದ ಕೇಜ್ರಿವಾಲರಿಗೆ ಜೈಕಾರ ಕೂಗುತ್ತಿದ್ದರು.
ಜಮ್ಮುವಿನ ಬೀದಿಗಳಿಂದ ಕನ್ಯಾಕುಮಾರಿಯ ಕಡಲ ತಡಿಯವರೆಗೆ, ಕಚ್‌ನಿಂದ ಕೋಲ್ಕತ್ತಾದವರೆಗೆ ಬಿಜೆಪಿ ಕಾರ್ಯಕರ್ತರ ನೃತ್ಯಸಡಗರ ಗಮನ ಸೆಳೆದಿತ್ತು. ಅಯೋಧ್ಯೆಯಲ್ಲಿ ಸಾಧು- ಸಂತರ ಜೈಕಾರದ ಘೋಷಣೆ ಸರಯೂ ತೀರದ ಸಂಭ್ರಮವನ್ನು ರಂಗೇರಿಸಿತ್ತು. ಲಖನೌದ ಬೀದಿಗಳು ಕೇಸರಿ ಹೊದ್ದಂತೆ ರಾರಾಜಿಸುತ್ತಿದ್ದವು. ಜೆಸಿಬಿಗಳ ಮೇಲೆ ಕುಳಿತು ಸಂಭ್ರಮ ಹೊರಹಾಕುತ್ತಿದ್ದ ಕೇಸರಿಪಡೆ ಗಮನ ಸೆಳೆದಿತ್ತು.
ಅತ್ತ ಪಂಜಾಬ್‌ನ ಅಮೃತ್‌ಸರದಲ್ಲಿ “ಪೊರಕೆ ಡ್ಯಾನ್ಸ್’ ಅಮೋಘವಾಗಿತ್ತು. ಕೇಜ್ರಿವಾಲ್‌ರ ಚಿತ್ರವಿದ್ದ ದೊಡ್ಡ ದೊಡ್ಡ ಬಾವುಟಗಳನ್ನು ಹಿಡಿದು ಆಪ್ ಕಾರ್ಯಕರ್ತರು ಹರ್ಷ ಪ್ರಕಟಿಸಿದ್ದರು.
ಇದನ್ನೂ ಓದಿ:ಗುಪ್ತಚರ ವಿಭಾಗಕ್ಕೆ ವಿಶೇಷ ನೇಮಕಾತಿ: ಆರಗ ಜ್ಞಾನೇಂದ್ರ
ಸೋತವರ ಪಾಡು ಹೇಳತೀರದು!
ಇದು ಗೆದ್ದವರ ಕಥೆಯಾದರೆ, ಸೋತವರ ಪಾಡಂತೂ ಕೇಳುವುದೇ ಬೇಡ. ಒಂದು ಕಡೆಯಾದರೂ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ ಅಂತ ಕೈ ಪಕ್ಷದ ಬಾವುಟಗಳನ್ನು ಮಾರಾಟಕ್ಕೆ ತಂದಿದ್ದ ಕಾರ್ಯಕರ್ತ, ಫಲಿತಾಂಶ ಪ್ರಕಟಗೊಂಡ ಕೂಡಲೇ ಎಲ್ಲವನ್ನೂ ಬೀದಿಯಲ್ಲೇ ಬಿಟ್ಟು ಕಣ್ಮರೆಯಾಗಿದ್ದ. ಕೈ ಧುರೀಣರ ಭಾವಚಿತ್ರಗಳ ಮುಂದೆ ಆ ಬಾವುಟಗಳು ಅನಾಥವಿದ್ದಂತೆ ತೋರುತ್ತಿದ್ದವು. ಲಖನೌದಲ್ಲಿನ ಬಿಎಸ್ಪಿ, ಎಸ್ಪಿ, ಆರ್‌ಜೆಡಿ ಪಕ್ಷದ ಕಚೇರಿಗಳು ಕಾರ್ಯಕರ್ತರಿಲ್ಲದೆ ಭಣಗುಟ್ಟುತ್ತಿದ್ದ ದೃಶ್ಯ ಕಂಡುಬಂತು.
ಸೋತ ನಾಯಕರು ಬಂಗಲೆಗಳಾಚೆ ಕಾಲಿಡಲಿಲ್ಲ. ಗೆದ್ದವರು ಪಕ್ಷದ ಕಾರ್ಯಕರ್ತರ ನಡುವೆ ಸಿಹಿ ಹಂಚಿ, ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.