‘ಜೇಮ್ಸ್’ ಟು ‘ತೋತಾಪುರಿ’; ಬೇಸಿಗೆಯಲ್ಲಿ ಮನರಂಜನೆಯ ಮಹಾ ಪರ್ವ
Team Udayavani, Mar 11, 2022, 9:56 AM IST
ಪುನೀತ್ ರಾಜ್ ಕುಮಾರ್ ಹಾಗೂ ಜಗ್ಗೇಶ್ ಅವರ ಹುಟ್ಟುಹಬ್ಬ ಒಂದೇ ದಿನ ಎಂಬುದು ಎಲ್ಲಾ ಅಭಿಮಾನಿಗಳಿಗೂ ಗೊತ್ತಿರುವ ವಿಷಯ. ಪುನೀತ್ ನಟನೆಯ ಕೊನೆಯ ಸಿನಿಮಾ “ಜೇಮ್ಸ್’ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಜಗ್ಗೇಶ್ ಅಭಿನಯದ “ತೋತಾಪುರಿ’ ಇದೇ ಬೇಸಿಗೆಯಲ್ಲಿ ಮನರಂಜಿಸಲು ಸಿದ್ಧವಾಗಿದೆ. ಮಾರ್ಚ್ 17ರಂದು “ಜೇಮ್ಸ್’ ಸಿನಿಮಾ ಬಿಡುಗಡೆಯಾಗುವ ಮೂಲಕ ಭಾವನಾತ್ಮಕ ಘಳಿಗೆಗೆ ಚಿತ್ರರಂಗ ಸಾಕ್ಷಿಯಾಗುತ್ತಿದೆ. ಇದರ ಜತೆ ಜತೆಗೆ ವಿವಿಧ ಭಾಷೆಯ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ.
“ಜೇಮ್ಸ್’ ಬಿಡುಗಡೆಯಾದ ಒಂದು ವಾರಕ್ಕೆ ರಾಜಮೌಳಿ ನಿರ್ದೇಶನದ “ಆರ್‌ಆರ್ ಆರ್’ ರಿಲೀಸ್ ಆಗಲಿದೆ. ಅದಾದ ಬಳಿಕ ವಿಜಯ್ ನಟಿಸಿರುವ “ಬೀಸ್ಟ್’ ಹಾಗೂ ಯಶ್ ಅಭಿನಯದ “ಕೆಜಿಎಫ್’, ಚಿರಂಜೀವಿ ಮತ್ತು ರಾಮ್ ಚರಣ್ ಒಟ್ಟಿಗೆ ಕಾಣಿಸಿಕೊಂಡಿರುವ “ಆಚಾರ್ಯ’, ಮಹೇಶ್ ಬಾಬು ನಟಿಸಿರುವ “ಸರ್ಕಾರಿ ವಾರಿಪಟ್ಟು’ ಸೇರಿದಂತೆ ಬಹು ನಿರೀಕ್ಷಿತ ಸಿನಿಮಾಗಳು ಬೇಸಿಗೆಯಲ್ಲಿ ಮನರಂಜಿಸಲು ಸಿದ್ಧವಾಗಿದೆ. ಇವೆಲ್ಲದರ ಜತೆಗೆ ಜಗ್ಗೇಶ್ ನಟಿಸಿರುವ “ತೋತಾಪುರಿ’ ಸಹ ಬೇಸಿಗೆಯಲ್ಲೇ ಮನತಣಿಸಲು ಸಜ್ಜಾಗಿದೆ.
“ಜೇಮ್ಸ್’ ಸಿನಿಮಾದಿಂದ ಶುರುವಾಗುವ ಬೇಸಿಗೆಯ ಸಿನಿಪರ್ವ “ತೋತಾಪುರಿ’ ಮೂಲಕ ಕೊನೆಗೊಳ್ಳಲಿದೆ. ಅಂದರೆ ಮಾರ್ಚ್‌ಲ್ಲಿ ಬೇಸಿಗೆಯ ಬೇಗೆ ಶುರು. ಆದರೆ ಚಿತ್ರಮಂದಿರಗಳಲ್ಲಿ ಮನರಂಜನೆಯ ಮಹಾಪೂರವೇ ಹರಿಯಲಿದೆ.
ಇದನ್ನೂ ಓದಿ:ಹರೀಶ ನಿಂಗೆ ವಯಸ್ಸಾಯ್ತೋ…; “ಹರೀಶ ವಯಸ್ಸು 36’ ಇಂದು ತೆರೆಗೆ
ಬಹಳ ಕುತೂಹಲ ಹಾಗೂ ನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ಕನ್ನಡಿಗರ ಸಿನಿಮಾಗಳು ಸದ್ದು ಮಾಡುತ್ತಿವೆ ಎಂಬುದು ವಿಶೇಷ. ಮಾರ್ಚ್‌ನಲ್ಲಿ “ಜೇಮ್ಸ್’ ಬಿಡುಗಡೆಯಾದರೆ, ಏಪ್ರಿಲ್‌ನಲ್ಲಿ “ಕೆಜಿಎಫ್’ ತೆರೆ ಕಾಣಲಿದೆ. ಮೇ ತಿಂಗಳಲ್ಲಿ “ತೋತಾಪುರಿ’ ಸವಿಯಲು ಸಿದ್ಧ. ಈ ಮೂಲಕ ಬಹುಭಾಷಾ ಸಿನಿಮಾಗಳ ಜತೆಗೆ ಕನ್ನಡಿಗರ ಪ್ಯಾನ್ ಇಂಡಿಯಾ ಸಿನಿಮಾಗಳೂ ಸೌಂಡು ಮಾಡಲಿವೆ ಎಂಬುದು ಸದ್ಯದ ಹಾಟ್ ಟಾಪಿಕ್.
“ತೋತಾಪುರಿ’ ಒಂದೇ ಹಾಡಿನಿಂದ ಸಖತ್ ಸದ್ದು ಮಾಡಿದೆ. ದೇಶ -ವಿದೇಶದಲ್ಲೂ “ಬಾಗ್ಲು ತೆಗಿ ಮೇರಿ ಜಾನ್ ಸೂಪರ್ ಹಿಟ್ ಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೂರು ಮಿಲಿಯನ್ ಗಡಿ ದಾಟಿದೆ. ಅಲ್ಲದೇ ಈ ಸಿನಿಮಾ ಎರಡು ಭಾಷೆಗಳಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ಮತ್ತೂಂದು ವಿಶೇಷ. ಈಗಾಗಲೇ ಸಾಕಷ್ಟು ಬೇಡಿಕೆಯಲ್ಲಿರುವ “ತೋತಾಪುರಿ’ಯನ್ನು ಮೇ ತಿಂಗಳಿನಲ್ಲಿ ಪ್ರಪಂಚದಾದ್ಯಂತ ತೆರೆಕಾಣಿಸಲು ಸಜ್ಜಾಗಿದೆ ಚಿತ್ರತಂಡ. ವಿಜಯ ಪ್ರಸಾದ್ ನಿರ್ದೇಶನವಿರುವ ಈ ಚಿತ್ರವನ್ನು ಕೆ.ಎ.ಸುರೇಶ್ ನಿರ್ಮಿಸಿದ್ದಾರೆ. ಜಗ್ಗೇಶ್ ಜೋಡಿಯಾಗಿ ಅದಿತಿ ಪ್ರಭುದೇವ ಇದ್ದಾರೆ. “ಡಾಲಿ’ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂರ್ದ, ಹೇಮಾದತ್ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.