ಗುಂಡ್ಲುಪೇಟೆ : ಹೆಣ್ಣು ಹುಲಿ ಮೃತ ದೇಹ ಪತ್ತೆ
Team Udayavani, Mar 11, 2022, 12:33 PM IST
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಗುಂಡ್ರೆ ವಲಯದ ಹೊಸಹಳ್ಳಿ ಶಾಖೆಯ ನಾಯಿಹಳ್ಳಿ ಗಸ್ತಿನ ವೆಸಲಿ ಮಚ್ಚನ ಮೂಲೆ ಅರಣ್ಯ ಪ್ರದೇಶದಲ್ಲಿ ಸುಮಾರು 8 ರಿಂದ 9 ವರ್ಷದ ಹೆಣ್ಣು ಹುಲಿಯೊಂದರ ಮೃತ ದೇಹ ಪತ್ತೆಯಾಗಿದೆ.
ಮೃತ ಹುಲಿಯ ಛಾಯಚಿತ್ರವನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಸಿದ ಕ್ಯಾಮರಾ ಟ್ರ್ಯಾಪ್ ಹುಲಿಗಣತಿಯ ದತ್ತಾಂಶಕ್ಕೆ ಹೋಲಿಕೆ ಮಾಡಿದಾಗ ಹುಲಿ Bandipur 15_U1783 ಎಂದು ಗುರುತಿಸಿ ಇದು ಮೊದಲನೇ ಬಾರಿಗೆ 2015ರ ಮಾ.3ರಲ್ಲಿ ನಡೆದ ಕ್ಯಾಮರಾ ಟ್ರ್ಯಾಪ್ ಗಣತಿ ಕಾರ್ಯಕ್ರಮದಲ್ಲಿ ಗುಂಡ್ರೆ ವಲಯದಲ್ಲಿ ಸೆರೆಯಾಗಿದೆ. ನಂತರ 2019-20ನೇ ಸಾಲಿನ ಗಣತಿ ಕಾರ್ಯಕ್ರಮದಲ್ಲಿಯೂ ಸಹ ಗುಂಡ್ರೆ ವಲಯದಲ್ಲಿಯೇ ಸೆರೆಯಾಗಿರುತ್ತದೆ.
ಮೃತ ಹೆಣ್ಣು ಹುಲಿಯ ದೇಹ ಪರಿಶೀಲಿಸಿದಾಗ ಯಾವುದೇ ಹುರುಳಿನಿಂದ ಅಥವಾ ವಿಷಪ್ರಾಸನದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಹಾಗೂ ಹುಲಿಯ ದೇಹದ ಮೇಲೆ ಯಾವುದೇ ಗಾಯಗಳು ಸಹ ಕಂಡುಬಂದಿಲ್ಲ.
ಮೃತ ಹೆಣ್ಣು ಹುಲಿಯ ಎಲ್ಲಾ ಉಗುರುಗಳು, ಹಲ್ಲುಗಳು ಹಾಗೂ ಇತರೆ ಅಂಗಾಗಳು ಸುರಕ್ಷಿತವಾಗಿದ್ದು, ಯಾವುದೇ ಕಾದಾಟದಲ್ಲಿ ಭಾಗಿಯಾಗಿಯಾಗದೇ ಇರುವುದು ಕಂಡುಬಂದಿದೆ. ಇದರಲ್ಲಿ ಎರಡು ಹಲ್ಲುಗಳು ಸವೆದಿದ್ದು, ಹಲ್ಲು ಮತ್ತು ದವಡೆಯ ಭಾಗಗಳು ಹಳದಿ ಬಣ್ಣಕ್ಕೆ ತಿರುಗಿದ್ದು, ಮೇಲ್ನೋಟಕ್ಕೆ ಕಾಮಾಲೆ ಖಾಯಿಲೆಯಿಂದ ಬಳಲಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:ಕುರುಕಲು ತಿಂಡಿಗಳ ಖಾಲಿ ಕವರ್‌ಗಳಲ್ಲಿ ಡ್ರಗ್ಸ್ ತುಂಬಿ ಮಾರಾಟ!
ಪಶು ವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಹುಲಿಯ ಮರಣೋತ್ತರ ಶವ ಪರೀಕ್ಷೆ ನಡೆಸಿದ್ದು, ಪ್ರಾಥಮಿಕ ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ ಮೃತ ಹುಲಿಯು ಅನೇಕ, ಆಂತರಿಕ ಖಾಯಿಲೆಗಳಿಂದ ಹಾಗೂ ಮೂತ್ರ ವಿಸರ್ಜನೆಯ ಭಾಗವು (ಗುದದ್ವಾರ) ಮುಚ್ಚಿ ಹೋಗಿರುವುದರಿಂದ ಜೊತೆಗೆ ಹುಲಿಗೆ ವಯಸ್ಸಾದ ಕಾರಣ ಮೃತಪಟ್ಟಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಮೃತ ಹುಲಿಯ ದೇಹವನ್ನು ಅರಣ್ಯ ಅಧಿಕಾರಿಗಳ ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಸುಡಲಾಯಿತು. ಮೃತ ಹೆಣ್ಣು ಹುಲಿಯ ಸಾವಿಗೆ ನಿಖರವಾದ ಕಾರಣವನ್ನು ಪರೀಕ್ಷಾ ವರದಿ ಬಂದ ನಂತರ ಖಚಿತಪಡಿಸಲಾಗುವುದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.